Asianet Suvarna News Asianet Suvarna News

ನೀವು ಗರ್ಭಿಣಿ? ಪ್ರಶ್ನಿಸುತ್ತಿದ್ದ ನೆಟ್ಟಿಗರಿಗೆ ಹೊಟ್ಟೆ ಫೋಟೋ ತೋರಿಸಿದ ನಟಿ ಸೋನಂ ಕಪೂರ್!

ಪ್ರಗ್ನೆನ್ಸಿ ಬಗ್ಗೆ ಹರಿದಾಡುತ್ತಿರುವ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ ನಟಿ ಸೋನಂ ಕಪೂರ್. ಈ ಹೊಟ್ಟೆ ನೋಡಿದರೆ ಹಾಗೆ ಅನಿಸುತ್ತಾ? 

Bollywood Sonam Kapoor share tummy image to break pregnancy rumours vcs
Author
Bangalore, First Published Sep 2, 2021, 2:33 PM IST
  • Facebook
  • Twitter
  • Whatsapp

ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ರೋಲ್ ಆಗುವ ನಟಿಯರಲ್ಲಿ ಸೋನಂ ಕಪೂರ್ ಕೂಡ ಒಬ್ಬರು. ಸೂಪರ್ ಹಿಟ್ ಸಿನಿಮಾ ನೀಡಿರುವ ನಟ ಅನಿಲ್ ಕಪೂರ್ ಪುತ್ರಿ ಆಗಿದ್ದರೂ, ಒಂದೂ ಹಿಟ್ ಸಿನಿಮಾ ನೀಡಿಲ್ಲ. ಆದರೂ ಪಡೆಯುವ ಸಂಭಾವನೆ , ಫಿಟ್ನೆಸ್‌, ವೈವಾಹಿಕ ಜೀವನದ ಬಗ್ಗೆ ಅಗಾಗ ಟ್ರೋಲ್ ಅಗುತ್ತಿರುತ್ತಾರೆ. ಸುಮಾರು 1 ವರ್ಷದ ನಂತರ ಲಂಡನ್‌ನಿಂದ ಮುಂಬೈಗೆ ಬಂದ ಸೋನಂ ಗರ್ಭಿಣಿ ಎಂದು ಆಗಾಗ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದರು. ಈ ಗಾಳಿ ಮಾತುಗಳಿಗೆ ಸೋನಂ ಬ್ರೇಕ್ ಹಾಕಿದ್ದಾರೆ.

ಸೋನಂ ಕಪೂರ್ ಗರ್ಭಿಣಿಯಾ ? ಮತ್ತೆ ಶುಂಠಿ ಟೀ ಕುಡಿದಿದ್ದೇಕೆ ?

ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸೋನಂ ಕಪೂರ್ ಇದೀಗ Pilates ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ವರ್ಕೌಟ್ ಮಾಡಿದ ನಂತರ ಮಿರರ್‌ ಸೆಲ್ಫೀ ಹಂಚಿಕೊಂಡ ಸೋನಂ ಟೀ ಶರ್ಟ್‌ ಮೇಲೆ ಎಳೆದುಕೊಂಡು ಹೊಟ್ಟೆ ತೋರಿಸಿದ್ದಾರೆ. ಅಲ್ಲದೆ ಚಿನ್ನದ ಉಡುದಾರ ಹಾಕಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೋ ಹಂಚಿ ಕೊಂಡಿದ್ದಾರೆ.

Bollywood Sonam Kapoor share tummy image to break pregnancy rumours vcs

ಇದೊಂದೇ ಅಲ್ಲ. ಈ ಹಿಂದೆಯೂ ಬಿಸಿ ನೀರು, ಶುಂಠಿ ರಸ ಕುಡಿಯುತ್ತಿರುವ ಫೋಟೋ ಹಂಚಿಕೊಂಡು 'ನನ್ನ ಋತುಚಕ್ರದ ಮೊದಲ ದಿನ ಒಂದು ಲೋಟ ಬಿಸಿ ನೀರು ಮತ್ತು ಶುಂಠಿ ಟೀ ಸೇವಿಸುವುದರೊಂದಿಗೆ ಆರಂಭ,' ಎಂದಿದ್ದರು. ಈ ಮೂಲಕ ತಾವು ಗರ್ಭಿಣಿ ಆಲ್ಲ ಎಂಬುದನ್ನು ಪರೋಕ್ಷವಾಗಿ ಮನವರಿಕೆ ಮಾಡಿ ಕೊಟ್ಟಿದ್ದರು. ಕೆಲವು ದಿನಗಳ ಹಿಂದೆ ಸಹೋದರಿ ರಿಯಾ ಕಪೂರ್ ಮದುವೆಯಾದರು. ಪ್ರತೀ ಶುಭ ಕಾರ್ಯಕ್ರಮದಲ್ಲೂ ನಟಿ ಸೋನಂ ಡಿಫರೆಂಟ್ ಡಿಸೈನರ್ ಉಡುಪು ಧರಿಸಿದ್ದರು, ಡ್ರೆಸ್‌ ಬಾಡಿ ಫಿಟ್ ಆಗಿದ್ದ ಕಾರಣ ಸೋನಂ ಗರ್ಭಿಣಿ ಅಲ್ಲ ಅನ್ನುವುದು ಕೆಲವರಿಗೆ ಕನ್ಫರ್ಮ್ ಆಗಿತ್ತು.

Follow Us:
Download App:
  • android
  • ios