ಬಾಲಿವುಡ್‌ ಮಾಸ್‌ ಕಮ್ ಲವರ್ ಬಾಯ್ ಶಾಹಿದ್ ಕಪೂರ್ ವಿಭಿನ್ನ ಚಿತ್ರ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದಂತೆ, ಸಂಭಾವನೆ ಗಗನ ಮುಟ್ಟುತ್ತಿದೆ. ಕಬೀರ್ ಸಿಂಗ್ ಚಿತ್ರದ ನಂತರ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಜರ್ಸಿ ಚಿತ್ರಕ್ಕೆ ಒಪ್ಪಂದವಾದ ಸಂಭಾವನೆ ಎಷ್ಟು ಗೊತ್ತಾ? 

ಪತ್ನಿ ಬರ್ತ್‌ಡೇ: ಮೈ ಲವ್, ಯು ಆರ್ ಬ್ಯೂಟಿಫುಲ್ ಎಂದ ನಟ ಶಾಹೀದ್..!

ಪಿಂಕ್‌ವಿಲ್ಲಾ ನೀಡಿರುವ ಮಾಹಿತಿ ಪ್ರಕಾರ ಶಾಹಿದ್ ಕಪೂರ್ ಜರ್ಸಿ ಚಿತ್ರಕ್ಕೆ 33 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಚಿತ್ರೀಕರಣವೂ ಪ್ರಾರಂಭಿಸಬೇಕೆಂದು ಶೆಡ್ಯೂಲ್ ನಿರ್ಧಾರವಾಗುತ್ತಿದ್ದಂತೆ, ಎಲ್ಲೆಡೆ ಲಾಕ್‌ಡೌನ್‌ ಘೋಷಣೆ ಆಯ್ತು. ಈ ಸಮಯದಲ್ಲಿ ಹಲವಾರು ಸಿನಿ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸಿದ್ದರು. ಅನ್‌ಲಾಕ್‌ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಚಿತ್ರೀಕರಣ ಪ್ರಾರಂಭವಾಗಿತ್ತು. ಹಾಗೆಯೇ ಅನ್‌ಲಾಕ್‌ 5.oನಲ್ಲಿ ಅಕ್ಟೋಬರ್ 15ರಿಂದ ಚಿತ್ರಮಂದಿರಗಳು ತೆರೆಯಬಹುದು ಎಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ.

ಎಲ್ಲವೂ ನಾರ್ಮಲ್ ಆಗುತ್ತಿದ್ದಂತೆ ಶಾಹಿದ್ ಕಪೂರ್ ಜರ್ಸಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಅಲ್ಲದೇ ತಮ್ಮ ಸಂಭಾನೆಯಲ್ಲಿ 8 ಕೋಟಿ ಕಡಿತವಾಗಿರುವ ವಿಚಾರ ತಿಳಿದು, ಶಾಕ್ ಆದರೂ ಕೂಲ್ ಆಗಿ ಸ್ವೀಕರಿಸಿದ್ದಾರಂತೆ. ನಿರ್ಮಾಪಕರ ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು, ಚಿತ್ರೀಕರಣಕ್ಕೆ ಸಾಥ್ ನೀಡಿದ್ದಾರೆ. ಅಲ್ಲದೇ ಅನಗತ್ಯ ವಸ್ತು/ಪ್ರಾಪರ್ಟಿ ಖರ್ಚು ಮಾಡದೇ, ವೆಚ್ಚವನ್ನು ಕಡಿತಗೊಳಿಸಬೇಕೆಂದು ನಿರ್ದೇಶಕರಿಗೆ ಹೇಳಿದ್ದಾರಂತೆ.

ಕಬೀರ್ ಸಿಂಗ್ ಸ್ಟೈಲಲ್ಲೇ ಸಹ ನಟಿ ಕಿಯಾರಾ ಹುಟ್ಟು ಹಬ್ಬದ ಶುಭ ಕೋರಿದ ಶಾಹೀದ್

ತೆಲುಗು ರಿಮೇಕ್ ಸಿನಿಮಾ:
ತೆಲುಗು ಚಿತ್ರ ಅರ್ಜುನ್ ರೆಡ್ಡಿ ರಿಮೇಕ್‌ 'ಕಬೀರ್ ಸಿಂಗ್' ಹಿಟ್ ಆದ ನಂತರ ಶಾಹಿದ್ ಮತ್ತೊಂದು ತೆಲುಗು ಸಿನಿಮಾ 'ಜರ್ಸಿ'ಯನ್ನು ಹಿಂದಿಗೆ  ರಿಮೇಕ್ ಮಾಡಲು ಒಪ್ಪಿಕೊಂಡಿದ್ದಾರೆ. ನಟ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಶಾಹಿದ್ ಈ ಚಿತ್ರದಲ್ಲಿ ಕ್ರಿಕೆಟ್‌ ಕೋಚ್ ಆಗಿ ಅಭಿನಯಿಸುತ್ತಿದ್ದಾರೆ. ಕ್ರಿಕೆಟ್ ಬಗ್ಗೆ ತಿಳಿದುಕೊಳ್ಳಲು ಕೋಚಿಂಗ್ ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.