ಕಬೀರ್ ಸಿಂಗ್ ಸ್ಟೈಲಲ್ಲೇ ಸಹ ನಟಿ ಕಿಯಾರಾ ಹುಟ್ಟು ಹಬ್ಬದ ಶುಭ ಕೋರಿದ ಶಾಹೀದ್
ಶಾಹಿದ್ ಕಪೂರ್ ಅಭಿನಯದ ಚಿತ್ರ 'ಕಬೀರ್ ಸಿಂಗ್' ಫೇಮ್‌ನ ನಟಿ ಕಿಯಾರಾ ಅಡ್ವಾಣಿ 28ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಜುಲೈ 31, 1992 ರಂದು ಮುಂಬೈನಲ್ಲಿ ಜನಿಸಿದ ಕಿಯಾರಾಗೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ. ಮೊದಲು ಅವರ ತಂದೆಗೆ ಮಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ಇಷ್ಟಪಡಲಿಲ್ಲ, ಒಂದು ದಿನ ಅಮೀರ್ ಖಾನ್‌ರ '3 ಈಡಿಯಟ್ಸ್' ಸಿನಿಮಾ ನೋಡಿ ತಮ್ಮ ಮಗಳಿಗೆ ನಟನೆಯನ್ನು ಕೆರಿಯರ್ ಮಾಡಿಕೊಳ್ಳಲು ಅವಕಾಶ ನೀಡಿದರು. ಆದರೆ ಬಾಲಿವುಡ್‌ಗೆ ಬರುವ ಮೊದಲು ಬೇಬಿ ಕ್ರೀಚ್ ನಡೆಸುತ್ತಿದ್ದರು. ಇಂಥ ಪ್ರತಿಭಾನ್ವಿತ ನಟಿಗೆ ಶಾಹೀದ್ ಕಪೂರ್, ರಣವೀರ್ ಸಿಂಗ್ ಸೇರಿ ಬಾಲಿವುಡ್ ಸೆಲೆಬ್ರಿಟಿಗಳು ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
ಕಿಯಾರಾ ಅಡ್ವಾಣಿ ಈಗ ಬಾಲಿವುಡ್‌ನ ಬೇಡಿಕೆಯಲ್ಲಿರುವ ನಟಿರೆ. 'ಕಬೀರ್ ಸಿಂಗ್' ಚಿತ್ರದ ಅದ್ಭುತ ಅಭಿನಯದ ನಂತರ, ನಟಿ ಸಾಕಷ್ಟು ಆಫರ್ಸ್ ಬಂದಿವೆ.
ಶಾಹೀದ್ ಕಬೀರ್ ಸಿಂಗ್ ಚಿತ್ರದ ಶೈಲಿಯಲ್ಲಿಯೇ ಸಹ ನಟಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.
ಪ್ರೀ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿಯಾರಾಗೆ ರಣವೀರ್ ಸಿಂಗ್ ಹಲೇ ಸೆಲ್ಫಿ ಮೂಲಕ ವಿಶ್ ಮಾಡಿದ್ದಾರೆ.
ಕಿಯಾರಾ ಶಾಲೆಯಲ್ಲಿ ಇತರ ಶಿಕ್ಷಕರಂತೆ ಮಕ್ಕಳೊಂದಿಗೆ ಆಟವಾಡುತ್ತಿದ್ದರು, ಅವರಿಗೆ ರೈಮ್ಸ್ ಮತ್ತು ಪದಗಳನ್ನು ಕಲಿಸುತ್ತಿದ್ದರು, ಹಾಗೆಯೇ ಅಗತ್ಯವಿದ್ದಾಗ ಡೈಪರ್‌ಗಳನ್ನು ಬದಲಾಯಿಸುತ್ತಿದ್ದರು.
ಕಿಯಾರಾ ಮಕ್ಕಳನ್ನು ತುಂಬಾ ಪ್ರೀತಿಸುತ್ತಾಳೆ ಮತ್ತು ತನ್ನ ಸ್ವಂತ ಮಗುವನ್ನು ಹೊಂದುವಾಗ ತಾನು ತುಂಬಾ ಉತ್ಸುಕನಾಗುತ್ತೇನೆ ಎಂದಿದ್ದಾರೆ.
ಶಾಹಿದ್ ಕಪೂರ್‌ರ 'ಕಬೀರ್ ಸಿಂಗ್' ಚಿತ್ರದಿಂದ ಕಿಯಾರಾ ಅಡ್ವಾಣಿ ಲೈಮ್‌ಲೈಟ್‌ಗೆ ಬಂದರು.
ವಾಸ್ತವವಾಗಿ, ಈ ಸಿನಿಮಾದ ಒಂದು ದೃಶ್ಯದಲ್ಲಿ ಶಾಹಿದ್ ಕಿಯಾರಾಳ ಕೆನ್ನೆಗೆ ಹೊಡೆಯುತ್ತಾರೆ. ಅದರಿಂದ ಸಾಕಷ್ಟು ವಿವಾದಗಳಿವೆ. ಅಂದಿನಿಂದ ಕಿಯಾರಾ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡರು.
ಇನ್ನೂ ಕೆಲಸದ ಬಗ್ಗೆ ಹೇಳುವುದಾದರೆ, 2016ರಲ್ಲಿ ಫಗ್ಲಿ ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು ಕಿಯಾರ.
ಬಾಲಿವುಡ್ ಜೊತೆ ಟಾಲಿವುಡ್‌ನ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ ನಟಿ ಅಡ್ವಾಣಿ.
ಕೊನೆಯ ಬಾರಿಗೆ ಅಕ್ಷಯ್ ಕುಮಾರ್, ದಿಲ್ಜಿತ್ ದೋಸಾಂಜ್ ಮತ್ತು ಕರೀನಾ ಕಪೂರ್ ಅವರ 'ಗುಡ್ ನ್ಯೂಸ್' ಚಿತ್ರದಲ್ಲಿ ಕಾಣಿಸಿಕೊಂಡರು.
'ಲಕ್ಷ್ಮಿ ಬಾಂಬ್', 'ಇಂದೂ ಕಿ ಜವಾನಿ', 'ಭೂಲ್ ಭೂಲೈ 2' ಚಿತ್ರಗಳ ಜೊತೆಗೆ ರಣಬೀರ್ ಕಪೂರ್ ಅವರೊಂದಿಗಿನ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.