2012ರಲ್ಲಿ 'ಸೆಕೆಂಡ್ ಮ್ಯಾರೇಜ್‌.ಕಾಂ' ಚಿತ್ರದ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟ ನಟಿ ಸಯಾನಿ ಗುಪ್ತಾ ಈಗ ಟಾಕ್‌ ಆಫ್‌ ದಿ ಟೌನ್‌ ಆಗಿದ್ದಾರೆ. ಇತ್ತೀಚಿಗೆ ರಿಲೀಸ್‌ ಆದ ವೆಬ್‌ ಸೀರಿಸ್‌ 'Four More Shots Please!'ನಲ್ಲಿ ಪತ್ರಕರ್ತೆ ಧಾಮಿನಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ಈ ಬೆಡಗಿ ಸದ್ಯ  ರಿಯಲ್‌ ಲೈಫ್ ನಲ್ಲೂ ತುಂಬಾನೇ ಬೋಲ್ಡ್‌ ನಿರ್ಧಾರ ತೆಗೆದುಕೊಂಡಿದ್ದಾರೆ.

ರೆಬಲ್ ಪತ್ರಕರ್ತೆಯಾಗಿ ವೆಬ್ ಸೀರಿಸ್‌ನಲ್ಲಿ ಮಿಂಚುತ್ತಿರುವ ಸಯಾನಿ ಗುಪ್ತಾ ಇವರೇ..!

ಹೇರ್‌ಕಟ್:

ಲಾಕ್‌ಡೌನ್‌ ಪ್ರಾರಂಭದಲ್ಲಿ ಏನಾದರೂ ಡಿಫರೆಂಟ್‌ ಹೇರ್‌ ಸ್ಟೈಲ್ ಟ್ರೈ ಮಾಡಬೇಕೆಂದು ತುಂಬಾ ಚಿಂತಿಸಿ ತಮ್ಮ  ನಿಲುವಿನ ಬಗ್ಗೆ ಪೋಷಕರಿಗೂ ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್‌ ಪ್ರೊಡ್ಯೋಸರ್‌ಗೂ ತಿಳಿಸದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 

'ಮೊದಲು/ ನಂತರ. ಹೇರ್‌ ಸ್ಟೈಲ್ ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ' ಎಂದು ಬರೆದುಕೊಂಡಿದ್ದ  ಸಯಾನಿ ಫೋಟೋವನ್ನು   ಅಭಿಮಾನಿಗಳು 360 ಡಿಗ್ರಿಯಲ್ಲಿ  ನ್ಯೂ ಲುಕ್ ಹೇಗೆ ಕಾಣಿಸುತ್ತದೆ ಎಂದು ನೋಡಲು ಡಿಮ್ಯಾಂಡ್ ಮಾಡಿದ್ದಾರೆ. ಅಭಿಮಾನಿಗಳ ಕೋರಿಕೆಗೆ ಸ್ಪಂದಿಸಿರುವ ಸಯಾನಿ ಲುಕ್‌ ತೋರಿಸಲು ಫೋಟೋ ಶೇರ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 

Before/ After 💇💇‍♂️ @hairstoriesdianne flipped my personality @bbluntindia 💛💛💛

A post shared by Sayani (@sayanigupta) on Jul 23, 2020 at 5:28am PDT

ಮೂಲತಃ ದಕ್ಷಿಣ ಬೆಂಗಾಲದ ಹುಡುಗಿ ಸಯಾನಿ, ಫಿಲ್ಮ್‌ ಮತ್ತು ಟೆಲಿವಿಶನ್‌ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಪದವೀಧರೆ. 15 ಸಿನಿಮಾಗಳು,  4 ವೆಬ್‌ ಸೀರಿಸ್‌ 7 ಶಾಟ್‌ ಫಿಲ್ಮ್‌ನಲ್ಲಿ ಅಭಿನಯಿಸಿದ್ದಾರೆ. ಸಯಾನಿ ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.  ಆರ್ಟಿಕಲ್ 15ರಲ್ಲಿ 'ಕಹಾಬ್ ತೋ' ಹಾಡನ್ನು ಹಾಡಿದ್ದಾರೆ.