90ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ನಟಿ  ದಿವ್ಯಾ ಭಾರತಿ 1992ರಲ್ಲಿ  ಖ್ಯಾತ ನಿರ್ಮಾಪಕ ಸಾಜಿದ್‌ ನಾಡಿಯಾದ್‌ವಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಎರಡೇ ವರ್ಷಗಳಲ್ಲಿ ದಿವ್ಯಾ ನಿಧನರಾಗುತ್ತಾರೆ. ಏನೂ ಮಾತನಾಡದ ಸೂಜಿದ್‌ ಮೌನ ಅನೇಕ ಅನುಮಾಗಳಿಗೆ ಎಡೆ ಮಾಡಿಕೊಡುತ್ತದೆ. ಆನಂತರ ಸಾಜಿದ್ ಮತ್ತೊಂದು ಮದುವೆಯಾಗುತ್ತಾರೆ, ಎರಡನೇ ಪತ್ನಿ, ಪತ್ರಕರ್ತೆ ವಾರ್ದಾ ಮೊದಲ ಪತ್ನಿ ಮೃತಪಟ್ಟ ಸಂಬಂಧ ಇದೀಗ ಸತ್ಯ ಬಿಚ್ಚಿಟ್ಟಿದ್ದಾರೆ.

ಖಾಸಗಿ ವಾಹಿನಿಯೊಂದರ ಜೊತೆ ಲಾಕ್‌ಡೌನ್‌ ಲೈವ್ ಚಾಟ್‌ ಮಾಡಿದ ಸಾಜಿದ್ ಎರಡನೇ ಪತ್ನಿ ವಾರ್ದಾ, ದಿವ್ಯಾ ಸಾವಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ. 'ದಿವ್ಯಾಗೆ ಮದುವೆಯಾದಾಗ ಇನ್ನು 19 ವರ್ಷ. ಒಂದು ದಿನ ಬಾಲ್ಕನಿಯಲ್ಲಿರುವ ಆಯಾ ತಪ್ಪಿ ಐದನೇ ಮಹಡಿಯಿಂದ ಬಿದ್ದು, ಕೊನೆಯುಸಿರೆಳೆಯುತ್ತಾರೆ.  ದಿವ್ಯಾ ಈಗಲೂ ನಮ್ಮೊಂದಿಗೇ ಇದ್ದಾರೆ ಎಂದು ಭಾವಿಸಿರುವೆ.  ಅಷ್ಟೇ ಅಲ್ಲದೇ ಆಕೆಯ ಪೋಷಕರು ನಮ್ಮೊಟ್ಟಿಗೆ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶುಭ ಸಮಾರಂಭಗಳಿಗೆ ಆಗಮಿಸುತ್ತಾರೆ. ನನ್ನ ಮಕ್ಕಳು ದಿವ್ಯಾಳನ್ನು ಬಡೀ ಮಾ ಎಂದೇ ಸಂಭೋದಿಸುತ್ತಾರೆ, ' ಎಂದು ವಾರ್ದಾ ಮಾತನಾಡಿದ್ದಾರೆ.

ಕನ್ನಡದ ನಟಿ ತೇಜಸ್ವಿನಿ ಪ್ರಕಾಶ್‌ಗೆ ಪಿತೃ ವಿಯೋಗ

ಅಷ್ಟೇ ಅಲ್ಲದೆ ದಿವ್ಯಾಳ ವಿಚಾರದ ಬಗ್ಗೆ ವಾರ್ದಾ ಏನೋ ಮಾತನಾಡಿದರೂ ಟ್ರೋಲ್‌ ಆಗುತ್ತಾರಂತೆ. 'ದಿವ್ಯಾ ಈಗಲೂ ನಮ್ಮ ಲೈಫ್‌ನ ಬ್ಯೂಟಿಫುಲ್‌ ಪರ್ಸನ್‌. ಆಕೆಯ ಹುಟ್ಟಿದಬ್ಬ ಹಾಗೂ ವರ್ಷದ ಪೂಜೆ ದಿನ ಅವರ ಅಪ್ಪ ,ಅಣ್ಣ ನಮ್ಮೊಟ್ಟಿಗೆ ಮಾತನಾಡುತ್ತಾರೆ. ನೀವು ಏನೇ ಟ್ರೋಲ್‌ ಮಾಡಿದರೂ, ಇದರಿಂದ ನಾವು ಯಾರೂ ವಿಚಲಿತರಾಗುವುದಿಲ್ಲ. ಏಕೆಂದರೆ ನಾನು ಅವರೊಟ್ಟಿಗೆ ಅತ್ಯುತ್ತಮ ಬಾಂಡಿಂಗ್ ಹೊಂದಿದ್ದು, ಆಕೆಯನ್ನು ಗೌರವಿಸುತ್ತೇನೆ. ನನ್ನ ಮಕ್ಕಳು ದಿವ್ಯಾ ಸಿನಿಮಾಗಳನ್ನು ವೀಕ್ಷಿಸಿದಾಗ ಬಡಿ ಮಾ ಎಂದು ಸಂತೋಷ ಪಡುತ್ತಾರೆ,' ಎಂದು ಹೇಳಿಕೊಂಡಿದ್ದಾರೆ. 

ನಿರೂಪಕಿ ಸಾಜಿದ್‌ ಹಾಗೂ ದಿವ್ಯಾ ಕುಟುಂಬದ ಬಗ್ಗೆ ಪ್ರಶ್ನಿಸಿದಾಗ 'ಸಾಜಿದ್‌ ದಿವ್ಯಾ ತಂದೆಗೆ ಮತ್ತೊಬ್ಬ ಮಗನಿದ್ದಂತೆ. ಅವರು ನನಗಿಂತಲೂ ಹೆಚ್ಚು ಕ್ಲೋಸ್.  ದಿವ್ಯಾ ಸ್ಥಾನವನ್ನು ನಾನು ತುಂಬಿಸಲು ಎಂದೂ ಪ್ರಯತ್ನ ಪಟ್ಟಿಲ್ಲ. ಆಕೆಯ ನೆನಪುಗಳು ಸದಾ ಅಮರ. ಸುಮ್ಮನೆ ನನ್ನನ್ನು ಅವರು ನಡುವೆ ಬಂದೆ ಎಂದು ಟ್ರೋಲ್‌ ಮಾಡುವುದು ಬೇಡ' ಎಂದಿದ್ದಾರೆ.

ಸಾಜಿದ್‌ ಸತ್ಯ ಹೇಳದೇ ಮೌನವಾಗಿರುವ ಕಾರಣ ಇಷ್ಟು ದಿನಗಳಿಂದ ಎಲ್ಲರೂ ದಿವ್ಯಾ ಪತಿ ಸಾಜಿದ್ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೊಂಡಿದ್ದರು. ಆದರೆ ವಾರ್ದಾ ಮಾತುಗಳನ್ನು ಕೇಳಿ ದಿವ್ಯಾ ಅಭಿಮಾನಿಗಳಿಗೆ ಈದೀಗ ತುಸು ಸಮಾಧಾನವಾಗಿದೆ.

ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಇನ್ನಿಲ್ಲ!

ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿ, ಸೌಂದರ್ಯ ಹಾಗೂ ಅಭಿನಯದಿಂದ ಹೆಸರು ಮಾಡಿದ್ದರು ದಿವ್ಯಾ ಭಾರತಿ. ವಯಸ್ಸಿನ್ನೂ ಬಹಳ ಚಿಕ್ಕದು. ಹದಿ ವಯಸ್ಸು ದಾಟಿತ್ತು. ಹಲವು ವಿಫಲ ಯತ್ನದ ನಂತರ ಬಾಲಿವುಡ್‌ನಲ್ಲಿ ಮಿಂಚಲು ಆರಂಭಿಸಿದ್ದರು. ಆಗಿನ ಕಾಲದಲ್ಲಿ ಅತ್ಯಂತ ಬೇಡಿಕೆಯುಳ್ಳ, ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಆಗಲೇ ನಿರ್ಮಾಪಕ ಸಾಜಿದ್ ನಾಡಿಯಾದ್‌ವಾಲಾ ಅವರೊಂದಿಗೆ ಹಸೆಮಣೆ ಏರಿದ್ದರು. ಮದುವಯಾಗಿ ವರ್ಷದೊಳಗೆ ಅಪಾರ್ಟ್‌ಮೆಂಟ್‌ನ ಐದನೇ ಫ್ಲೋರ್‌ನಿಂದ ಬಿದ್ದು ಸಾವಿಗೀಡಾದರು. ಅವರು ಸಾವಿನ ಸುತ್ತ ಅನೇಕ ಅನುಮಾನಗಳ ಹುತ್ತಗಳಿದ್ದರೂ, ಅದು ಅಪಘಾತವೋ, ಆತ್ಮಹತ್ಯೆಯೋ ಎಂಬುವುದು ಪ್ರಪಂಚಕ್ಕೆ ಗೊತ್ತಾಗಲೇ ಇಲ್ಲ. ನಂತರ ದಿವ್ಯಾ ಪತಿ ಪತ್ರಕರ್ತೆ ವಾರ್ದಾರನ್ನು ವರಿಸಿದರು. 

ಹಿರಿಯ ನಟಿ ಹಾಗೂ ಜಾನಪದ ಗಾಯಕಿ ಮುನಿಯಮ್ಮ ನಿಧನ!

90ರ ದಶಕದಲ್ಲಿ ವಿಶ್ವಾತ್ಮಾ, ದಿಲ್ ಕಾ ಕ್ಯಾ ಕಸೂರ್, ಶೋಲಾ ಔರ್ ಶಬ್ನಮ್, ಜಾನೇ ಸೇ ಪ್ಯಾರಾ ಮತ್ತು ದುಶ್ಮನ್ ಜಾಮಾನಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ, ಪಡ್ಡೆ ಹುಡುಗರ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಹೆಸರು ಮಾಡೋ ಮುಂಚೆ ವಿಧಿಯಾಟ ಬೇರೆಯದ್ದೇ ಆಗಿತ್ತು. ದುರಂತ ಅಂತ್ಯ ಕಂಡ ಭಾರತ ಚಿತ್ರರಂಗದ ನಟಿಯರ ಸಾಲಿಗೆ ದಿವ್ಯಾ ಭಾರತಿ ಹೆಸರು ಸೇರಿಕೊಂಡಿದ್ದು ಮಾತ್ರ ದುರಂತ.