ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಿವುಡ್‌ ನ ಹಿರಿಯ ನಟ ಸಂಜಯ್‌ ದತ್‌ ಅವರಿಗೆ ಮೊದಲ ಹಂತದ ಕೀಮೋ ಥೆರಪಿ ಚಿಕಿತ್ಸೆ ಮುಕ್ತಾಯವಾಗಿದೆ.  

ಬಾಲಿವುಡ್‌ ದಾದಾ, ಸ್ಯಾಂಡಲ್‌ವುಡ್‌ ಅಧೀರ ಸಂಜಯ್ ದತ್ ಅವರು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರಿಗೆ ತಮ್ಮ ಮೊದಲ ಕೀಮೋ ಥೆರಪಿ ಚಿಕಿತ್ಸೆ ಮುಕ್ತಾಯವಾಗಿದೆ. ಎರಡನೇ ಹಂತದ ಕೀಮೋ ಸೆ. 8 ಅಥವಾ 9 ರಂದು ನೀಡುವ ಸಾಧ್ಯತೆ ಇದೆ. ಇನ್ನೆಷ್ಟು ಥೆರಪಿಗಳು ನಡೆಯಲಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. 

ಡ್ರಗ್ಸ್ ಮಾಫಿಯಾ: 9 ವರ್ಷಗಳು ಹೋರಾಡಿ ಡ್ರಗ್ಸ್‌ ಬಿಟ್ಟ ಸಂಜಯ್‌ ದತ್‌!

ಕೆಲವು ದಿನಗಳ ಹಿಂದಷ್ಟೇ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾದಾಗ, ಅವರಿಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿತ್ತು. ಬಳಿಕ ಚಿಕಿತ್ಸೆಗೆ ಅಮೆರಿಕಕ್ಕೆ ಹೋಗಲು ನಿರ್ಧಾರ ಮಾಡಲಾಗಿತ್ತಾದರೂ, ಕೊರೋನಾದಿಂದಾಗಿ ಸಾಧ್ಯವಾಗಿರಲಿಲ್ಲ. ಸದ್ಯ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಣಬೀರ್ ಕಪೂರ್ ಅಭಿನಯದ 'ಶಂಶೇರ' ಸಿನಿಮಾದಲ್ಲಿ ಸಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಸದ್ಯ ಚಿತ್ರೀಕರಣಕ್ಕೆ ಮರುಳಿದ್ದಾರೆ ಎನ್ನಲಾಗಿದೆ. ಎರಡು ದಿನದಲ್ಲಿ ಸಾಧ್ಯವಾದಷ್ಟು ಚಿತ್ರೀಕರಣ ಮುಗಿಸಿ ಮುಂದಿನ ಹಂತದ ಚಿಕಿತ್ಸೆಗೆ ತೆರಳಿದ್ದಾರಂತೆ.

ಮಾನ್ಯಾತಾಳನ್ನು ಅವಮಾನಿಸಿದ್ದರು ಸಂಜು ಸಹೋದರಿ ಪ್ರಿಯಾ ದತ್‌!

ಸಂಜಯ್‌ ಈಗಾಗಲೇ 4ನೇ ಹಂತದ ಕ್ಯಾನ್ಸರ್‌‌ನಿಂದ ಬಳಲುತ್ತಿರುವ ಕಾರಣ ಅಭಿಮಾನಿಗಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳದೇ ವಿಶ್ರಾಂತಿ ಪಡೆಯಲು ನೆಚ್ಚಿನ ನಟನ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವರು ಕೈಗೊಂಡ ನಿರ್ಧಾರದಿಂದ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕನ್ನಡದ ಕೆಜಿಎಫ್-2ರಲ್ಲಿಯೂ ಸಂಜಯ್ ನಟಿಸುತ್ತಿದ್ದು, ಇನ್ನೂ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಇದೆ.