Asianet Suvarna News Asianet Suvarna News

ಬಿಗ್ ಬಾಸ್ ವೀಕ್ಷಕರಿಗೆ ನಿರಾಸೆ, ಶಸ್ತ್ರಚಿಕಿತ್ಸೆಯಿಂದ ಈ ಬಾರಿ ನಿರೂಪಣೆಗೆ ಸಲ್ಮಾನ್ ಖಾನ್ ಡೌಟ್!

ಬಿಗ್ ಬಾಸ್ 18ನೇ ಆವೃತ್ತಿಗೆ ಅಭಿಮಾನಿಗಳು ಕಾತರರಾಗಿದ್ದರೆ. ಕಳೆದ 17 ಆವೃತ್ತಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಸಲ್ಮಾನ್ ಖಾನ್ ಇದೀಗ 18ನೇ ಆವೃತ್ತಿಯಲ್ಲಿ ನಿರೂಪಣೆ ಮಾಡುವುದು ಅನುಮಾನವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಸಲ್ಮಾನ್ ಖಾನ್, ಈ ಬಾರಿ ಬಿಗ್‌ಬಾಗ್ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ.

Bollywood Salman khan may skip bigg boss 18 reality show host due to ribs injury ckm
Author
First Published Sep 1, 2024, 6:55 PM IST | Last Updated Sep 1, 2024, 6:55 PM IST

ಮುಂಬೈ(ಸೆ.01) ಹಿಂದಿ ಬಿಗ್ ಬಾಸ್ ರಿಲಿಯಾಟಿ ಶೋ ಕಾರ್ಯಕ್ರಮಕ್ಕೆ ಹಲವರು ಕಾದು ಕುಳಿತಿದ್ದಾರೆ. ಅಕ್ಟೋಬರ್ 5 ರಿಂದ 18ನೇ ಆವೃತ್ತಿ ಬಿಗ್ ಬಾಸ್ ಆರಂಭಗೊಳ್ಳುತ್ತಿದೆ. ಈಗಾಗಲೇ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸೆಲೆಬ್ರೆಟಿಗಳ ಹೆಸರು ಹರಿದಾಡುತ್ತಿದೆ. ಇದರ ನಡುವೆ ವೀಕ್ಷಕರಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿಯ ಬಿಗ್ ಬಾಸ್ ನಿರೂಪಣೆಗೆ ನಟ ಸಲ್ಮಾನ್ ಖಾನ್ ಲಭ್ಯವಿರುವ ಸಾಧ್ಯತೆ ಇಲ್ಲ. ಗಾಯಗೊಂಡಿರುವ ಸಲ್ಮಾನ್ ಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.  ಹೀಗಾಗಿ ಬಿಗ್ ಬಾಸ್ ಹೋಸ್ಟ್ ಸಲ್ಮಾನ್ ಖಾನ್ ಲಭ್ಯತೆ ಇಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸಲ್ಮಾನ್ ಖಾನ್ ಈ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡುತ್ತಿಲ್ಲ ಅನ್ನೋ ಮಾಹಿತಿಗಳು ರಿಯಾಲಟಿ ಶೋ ವೇದಿಕೆಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಅನ್ನುವಂತೆ ಇತ್ತೀಚಿನ ಹಲವು ವಿಡಿಯೋಗಳು ಸಲ್ಮಾನ್ ಆರೋಗ್ಯದ ಕುರಿತು ಗಂಭೀರ ಕಳವಳ ಮೂಡುವಂತೆ ಮಾಡಿದೆ. 

 1.4 ಕೋಟಿ ಮೊತ್ತದ ಕಾರು ಖರೀದಿಸಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌ ಶೇರಾ ವೇತನ ಎಷ್ಟು ಗೊತ್ತಾ?

ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಪಕ್ಕೆಲುಬುಗಳಿಗೆ ಗಾಯವಾಗಿದೆ. ಇದರಿಂದ ಸಲ್ಮಾನ್ ಖಾನ್‌ಗೆ ಕುಳಿತಲ್ಲಿಂದ ಎದ್ದು ನಡೆದಾಡಲು, ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಮುಂಬೈನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಖಾನ್ ಕುರ್ಚಿಯಿಂದ ಮೇಳೆಲು ಪ್ರಯಾಸ ಪಟ್ಟಿದ್ದರು. ತೀವ್ರ ನೋವಿನಿಂದ ಬಳಲುತ್ತಿರುವ ಸಲ್ಮಾನ್ ಖಾನ್ ಸೆಪ್ಟೆಂಬರ್ ತಿಂಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ.

 

 

ಈ ಕಾರ್ಯಕ್ರಮದಲ್ಲಿ ನಿರೂಪಕಿ, ಸಲ್ಮಾನ್ ಖಾನ್ ಅನಾರೋಗ್ಯದಲ್ಲಿದ್ದಾರೆ. ಗಾಯಗೊಂಡು ಆರೋಗ್ಯ ಹದಗೆಟ್ಟಿದ್ದರೂ ಸಲ್ಮಾನ್ ಖಾನ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇದು ಅವರ ಬದ್ಧತೆ ಎಂದಿದ್ದಾರೆ. ನಿರೂಪಕಿ ಮಾತನಾಡುತ್ತಿದ್ದಂತೆ ಸಲ್ಮಾನ್ ಖಾನ್ ಪಕ್ಕೆಲುಬು ಹಿಡಿದು ಸಾವರಿಸಿಕೊಳ್ಳುತ್ತಿರುವ ದೃಶ್ಯವೂ ಸೆರೆಯಾಗಿದೆ.  ಸೋಫಾದಿಂದ ಮೇಲೆಳಲು ಸಲ್ಮಾನ್ ಖಾನ್ ಹರಹಾಸ ಪಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. 

ಇದೀಗ ಸಲ್ಮಾನ್‌ಗೆ ಪಕ್ಕೆಲುಬುಗಳಲ್ಲಿ ಗಾಯವಾಗಿರುವ ಕಾರಣ ನಿಲ್ಲಲು ಕಷ್ಟವಾಗುತ್ತಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ. ಪಕ್ಕೆಲುಬು ಕಾರಣ ಕೆಲ ದಿನಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಬಿಗ್ ಬಾಸ್ 18ನೇ ಆವೃತ್ತಿ ಸಲ್ಮಾನ್ ಖಾನ್ ಹೋಸ್ಟ್ ಮಾಡುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಒಟಿಟಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಅನಿಲ್ ಕಪೂರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಎದ್ದು ನಿಲ್ಲಲು ಕಷ್ಟಪಟ್ಟ ಸಲ್ಮಾನ್ ಖಾನ್: ನಮ್ ಹೀರೋಗೆ ವಯಸ್ಸಾಯ್ತು ಎಂದು ಬೇಸರಿಸಿದ ಫ್ಯಾನ್ಸ್
 

Latest Videos
Follow Us:
Download App:
  • android
  • ios