Asianet Suvarna News Asianet Suvarna News

1.4 ಕೋಟಿ ಮೊತ್ತದ ಕಾರು ಖರೀದಿಸಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌ ಶೇರಾ ವೇತನ ಎಷ್ಟು ಗೊತ್ತಾ?

ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಬಾಡಿಗಾರ್ಡ್‌ ಶೇರಾ ಅವರು 1.4 ಕೋಟಿ ಮೊತ್ತದ ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರಾ ಕಾರಿನ ಫೋಟೋ ಶೇರ್ ಮಾಡಿದ್ದಾರೆ.

Do you know the salary of Bollywood actor Salman Khan's bodyguard Shera who bought a car worth 1.4 crores akb
Author
First Published Aug 30, 2024, 2:49 PM IST | Last Updated Aug 30, 2024, 2:49 PM IST

ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಬಾಡಿಗಾರ್ಡ್‌ ಶೇರಾ ಅವರು 1.4 ಕೋಟಿ ಮೊತ್ತದ ಐಷಾರಾಮಿ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರಾ ಕಾರಿನ ಫೋಟೋ ಶೇರ್ ಮಾಡಿದ್ದಾರೆ. 1995ರಿಂದಲೂ ನಟ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿರುವ ಶೇರಾ ಸದಾ ಸಲ್ಮಾನ್ ಖಾನ್ ಜೊತೆಗೆ ಇದ್ದು, ಸಲ್ಮಾನ್ ಖಾನ್ ಅಂತಾರಾಷ್ಟ್ರೀಯ ಟೂರ್‌ಗಳಲ್ಲೂ ಅವರು ಜೊತೆಗಿರುತ್ತಾರೆ. 

ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರಾ ತಮಗಾಗಿ ಖರೀದಿಸಿದ ಈ ಬ್ರಾಂಡ್ ನ್ಯೂ ರೇಂಜ್ ರೋವರ್ ಕಾರಿನ ಜೊತೆ ಪೋಸ್ ಕೊಟ್ಟಿದ್ದು, ಫೋಟೋ ವೈರಲ್ ಆಗಿದೆ. ತಮ್ಮದೇ ಆದ ಯಶಸ್ಸು ಹಾಗೂ ಜನಪ್ರಿಯತೆಗಿಂತಲೂ ಶೇರಾ ಭಜರಂಗಿ ಭಾಯ್‌ಜಾನ್ ಜೊತೆಗಿನ ಆತ್ಮೀಯ ಸಂಬಂಧದ ಕಾರಣಕ್ಕೆ ಸಖತ್ ಫೇಮಸ್‌ ಆಗಿದ್ದಾರೆ. ಸತತ 29 ವರ್ಷಗಳಿಂದಲೂ ಸಲ್ಮಾನ್ ಖಾನ್ ಅವರ ನಿಷ್ಠಾವಂತ ಏಕೈಕ ಬಾಡಿಗಾರ್ಡ್ ಶೇರಾ ಫೋಟೋ ಶೇರ್ ಮಾಡಿಕೊಂಡು ಹೀಗೆ ಬರೆದಿದ್ದಾರೆ. 

ಸರ್ವಶಕ್ತನ ಆಶೀರ್ವಾದದಿಂದಾಗಿ ನಾವು ನಮ್ಮ ಮನೆಗೆ ಹೊಸ ಸದಸ್ಯನನ್ನು ಸ್ವಾಗತಿಸುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು, ಅಭಿನಂದನೆಗಳು ಸಹೋದರ ಎಂದು ಕಾಮೆಂಟ್ ಮಾಡಿದ್ದಾರೆ. ಶೇರಾ ಭಾಯ್ ನೀವು ನನ್ನನ್ನು ಬಾಡಿಗಾರ್ಡ್ ಮಾಡಿಕೊಳ್ಳಿ, ನಾನು ಒಂದು ಕ್ರೇಟಾ ಕಾರನ್ನು ನನಗಾಗಿ ಕೊಳ್ಳುವೆ ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಈ ಲಕ್ಸುರಿ ಕಾರಿನ ಬೆಲೆ ಅಂದಾಜು 1.4 ಕೋಟಿ ರೂಪಾಯಿಯಾಗಿದೆ. 

ಎದ್ದು ನಿಲ್ಲಲು ಕಷ್ಟಪಟ್ಟ ಸಲ್ಮಾನ್ ಖಾನ್: ನಮ್ ಹೀರೋಗೆ ವಯಸ್ಸಾಯ್ತು ಎಂದು ಬೇಸರಿಸಿದ ಫ್ಯಾನ್ಸ್

ಅಂದಹಾಗೆ ಈ ಬಾಡಿಗಾರ್ಡ್‌ ಶೇರಾ ಅವರ ನಿಜವಾದ ಹೆಸರು ಗುರ್ಮಿತ್ ಸಿಂಗ್ ಜೊಲ್ಲಿ, 1995 ರಿಂದಲೂ ಸಲ್ಮಾನ್ ಖಾನ್ ಬಾಡಿಗಾರ್ಡ್ ಅಗಿರುವ ಇವರು ಸೆಕ್ಯೂರಿಟಿ ನೀಡುವ ಸಂಸ್ಥೆಯಾದ ಟೈಗರ್ ಸೆಕ್ಯೂರಿಟಿ ಸಂಸ್ಥೆಯನ್ನು ಹೊಂದಿದ್ದಾರೆ. 2017ರಲ್ಲಿ ಗ್ರಾಮಿ ಅವಾರ್ಡ್ ಪ್ರಶಸ್ತಿ ಪುರಸ್ಕೃತ ಪಾಪ್ ಸಿಂಗರ್‌ ಜಸ್ಟೀನ್ ಬೈಬರ್ ಮುಂಬೈಗೆ ಬಂದಿದ್ದ ವೇಳೆ ಆತನಿಗೆ ಈ ಶೇರಾ ಅವರ ಈ ಸಂಸ್ಥೆಯೇ ಭದ್ರತೆ ಒದಗಿಸಿತ್ತು. ಮುಂಬೈನ ಅಂಧೇರಿಯಲ್ಲಿ 1969ರ ಮೇ 19ರಂದು ಜನಿಸಿರುವ ಶೇರಾ ಮುಂಬೈನ ದಾಮೋದರ ದಾಸ ಬರ್ಫಿವಾಲಾ ಹಿರಿಯ ಪ್ರೌಢಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. 

1987ರಲ್ಲಿ ಮುಂಬೈ ಜ್ಯೂನಿಯರ್ ಬಾಡಿ ಬಿಲ್ಡಿಂಗ್ ಪ್ರಶಸ್ತಿ ಗೆದ್ದಿರುವ ಶೇರಾ 1988ರಲ್ಲಿ ಮಹಾರಾಷ್ಟ್ರ ಜ್ಯೂನಿಯರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2019ರಲ್ಲಿ ಶೇರಾ ಶಿವಸೇನೆಗೆ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದರು. ತಮ್ಮ ಧೀರ್ಘಾಕಾಲದ ಸಲ್ಮಾನ್ ಜೊತೆಗಿನ ಒಡನಾಟದ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ ಶೇರಾ ಎಲ್ಲಿಯವರೆಗೆ ನನ್ನ ಉಸಿರಿರುವುದೋ ಅಲ್ಲಿಯವರೆಗೆ ನಾನೂ ಸೋದರ ಸಲ್ಮಾನ್ ಜೊತೆಯೇ ಇರುವೆ ಎಂದು ಹೇಳಿಕೊಂಡಿದ್ದಾರೆ. 

ಶ್ರೀಮಂತ ಹಿನ್ನೆಲೆಯಿಂದ ಬಂದ್ರು ತಿನ್ನಲು ದುಡ್ಡಿಲ್ಲದ ಸ್ಥಿತಿ ತಲುಪಿದ್ದು ಹೇಗೆ: ಕಷ್ಟದ ದಿನಗಳ ನೆನೆದ ವಿಜಯ್ ವರ್ಮಾ

ಅಂದಹಾಗೆ ಸಲ್ಮಾನ್ ಖಾನ್ ಬಾಡಿಗಾರ್ಡ್ ವೇತನ ಎಷ್ಟಿರಬಹುದು ಎಂಬ ಕುತೂಹಲ ಅನೇಕರಿಗೆ ಇರಬಹುದು. ಸಲ್ಮಾನ್ ಖಾನ್ ಜೊತೆಗಿನ ಧೀರ್ಘಾಕಾಲದ ಗೆಳೆತನದಿಂದಾಗಿ ಈಗ ಯಾವುದೇ ಸೆಲೆಬ್ರಿಟಿಗೂ ಕಡಿಮೆ ಇಲ್ಲದಂತೆ ಇರುವ ಶೇರಾ ಅವರ ವೇತನ ಕೆಲ ಕಾರ್ಪೋರೇಟ್ ಉದ್ಯೋಗಿಗಳ ಉದ್ಯಮಿಗಳ ಸಂಬಳವನ್ನು ಮೀರಿಸುತ್ತಿದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಶೇರಾ ತಿಂಗಳಿಗೆ 15 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದು, ವಾರ್ಷಿಕವಾಗಿ 2 ಕೋಟಿಗೂ ಅಧಿಕ ಸಂಬಳವನ್ನು ಪಡೆಯುತ್ತಾರೆ. 
 

 
 
 
 
 
 
 
 
 
 
 
 
 
 
 

A post shared by shera (@beingshera)

 

Latest Videos
Follow Us:
Download App:
  • android
  • ios