ಮಹಾರಾಷ್ಟ್ರದ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ಕಟ್ಟಿಸಿ ಕೊಡುವುದಾಗಿ ಮಾತು ಕೊಟ್ಟಿದ್ದ ಸಲ್ಮಾನ್ ಖಾನ್. ಕೊಟ್ಟ ಮಾತು ನಡೆಸಿಕೊಡಲು ಮುಂದಾದ 'ಬಾಡಿಗಾರ್ಡ್'.
ಬಾಲಿವುಡ್ ಚಿತ್ರರಂಗದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್ ಮಹಾರಾಷ್ಟ್ರದ ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುವುದಾಗಿ ಮಾತು ನೀಡಿದ್ದರು. ಕೊಟ್ಟ ಮಾತನ್ನು ಉಳಿಸಿಕೊಂಡ ಸಲ್ಲುಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಅಭಿಮಾನಿಗಳು.
ಜನವರಿಯಲ್ಲೇ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್.. ಕಾರಣ ಹಳೆ ಪ್ರಕರಣ!
ಹೌದು! ಮಹಾರಾಷ್ಟ್ರದಲ್ಲಿ ಸಂಭವಿಸಿದ ಮಹಾ ಮಳೆಯಿಂದ ಸುಮಾರು 70 ಮನೆಗಳು ಕೊಚ್ಚಿ ಹೋದವು. ಸರಕಾರದ ಸಹಾಯ ಬೇಡುತ್ತಾ, ದಿಕ್ಕು ತೋಚದೇ ಕುಳಿತಿದ್ದ ಜನರಿಗೆ ನಟ ಸಲ್ಮಾನ್ ಖಾನ್ ಸಹಯಾ ಮಾಡಲು ಮುಂದಾಗಿದ್ದರು. ಕೆಲವು ದಿನಗಳ ಹಿಂದೆ ಮಹರಾಷ್ಟ್ರ ಸರ್ಕಾರ ಈ ವಿಚಾರದ ಬಗ್ಗೆ ಟ್ಟೀಟ್ ಮಾಡಿತ್ತು.
'ಮಹಾರಾಷ್ಟ್ರದ ಖಿದ್ರಾಪುರ ಗ್ರಾಮದಲ್ಲಿ 70 ಮನೆಗಳ ನಿರ್ಮಾಣ ಶುರುವಾಗಿದೆ. ನಟ ಸಲ್ಮಾನ್ ಖಾನ್‌ಗೆ ಮಹಾರಾಷ್ಟ್ರದ ಸರ್ಕಾರ ಧನ್ಯವಾದಗಳನ್ನು ತಿಳಿಸುತ್ತದೆ' ಎಂದು ಶಿವಸೇನೆ-ಕಾಂಗ್ರೆಸ್ ಮೈತ್ರಿ ಸರಕಾರದ ಕ್ಯಾಬಿನೆಟ್ ಸಚಿವ ರಾಜೇಂದ್ರ ಪಾಟೀಲ್ ಯಾದ್ರವ್ಕರ್ ಟ್ಟೀಟ್ ಮಾಡಿದ್ದರು.
ವಿರುಷ್ಕಾ ಜೋಡಿಗೆ ಸರ್ಫ್ರೈಸ್ ಕೊಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು..!
ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಬೆನ್ನಲ್ಲೇ ನಟ ಸಲ್ಮಾನ್ ಹೆಸರು ಕೇಳಿ ಬಂದಿತ್ತು. ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸಲ್ಲು ತಮ್ಮ ಫಾರ್ಮ್‌ಹೌಸ್‌ನಲ್ಲಿ ಕೃಷಿ ಮಾಡುತ್ತ ಸಮಯ ಕಳೆಯುತ್ತಿದ್ದರು. ಖಿದ್ರಾಪುರ ಜನರಿಗೆ ಸಹಾಯ ಮಾಡುತ್ತಿರುವ ವಿಚಾರವನ್ನು ಕೇಳಿ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. 'ಬಾಯ್ ತು ಗ್ರೇಟ್ ಹು' ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು ' ನಿಮ್ಮನ್ನು ಎಲ್ಲರೂ ಕೆಟ್ಟ ರೀತಿಯಲ್ಲಿಯೇ ನೋಡುತ್ತಿದ್ದರು. ನಿಮ್ಮ ಒಳ್ಳೆ ಗುಣ ಯಾರಿಗೂ ತಿಳಿದಿಲ್ಲ. ಈಗಲಾದರೂ ಜನರು ನೀವು ಎಷ್ಟು ಒಳ್ಳೆ ವ್ಯಕ್ತಿ ಎಂದು ತಿಳಿಯುತ್ತದೆ' ಎಂದು ಸಲ್ಲು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.'
