ಮುಂಬೈ(ಆ. 19) ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಹತ್ಯೆಗೈ ಸ್ಕೆಚ್ ರೆಡಿಯಾಗಿತ್ತು ಎಂಬ ಆತಂಕಕಾರಿ ಅಂಶ ಬಯಲಾಗಿದೆ.  ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ ಶಾರ್ಪ್‌ಶೂಟರ್‌ನನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ. ಬೇರೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದ ಶೂಟರ್ ಸಲ್ಮಾನ್ ಮನೆ ಹತ್ತಿರ ತಿರುಗಾಡಿದ್ದ ವಿಷಯ ಬಾಯಿ ಬಿಟ್ಟಿದ್ದಾನೆ.

ಲಾರೆನ್ಸ್ ಬಿನ್ಸೋಯಿ ಗ್ಯಾಂಗ್ ಗೆ ಸೇರಿದ್ದ ವ್ಯಕ್ತಿ ಕಳೆದ ಜನವರಿ ವೇಳೆ ಸಲ್ಮಾನ್ ಮನೆ ಹತ್ತಿರ ತಿರುಗಾಡಿ ಸ್ಕೆಚ್ ರೆಡಿ ಮಾಡಿದ್ದ. ಶೂಟರ್  ರಾಹುಲ್‌ ಜನವರಿ ತಿಂಗಳಲ್ಲೇ ಪ್ಲ್ಯಾನ್‌ ಮಾಡಿದ್ದ.  ಮುಂಬೈಗೆ ಬಂದಿದ್ದ ಆತ ಸಲ್ಮಾನ್ ಖಾನ್‌ರ ಅಪಾರ್ಟ್‌ಮೆಂಟ್‌ ಬಳಿಕ ತಿರುಗಾಡಿ ಅವರ ಚಲನಚಲನ ಅಧ್ಯಯನ ಮಾಡಿದ್ದ. ಆದರೆ ನಂತರದ ದಿನಗಳಲ್ಲಿ ಲಾಕ್‌ಡೌನ್‌ ಜಾರಿ ಆಗಿದ್ದರಿಂದ  ಯೋಜನೆ ಮುಂದೆ ಸಾಗಿಲ್ಲ.

ಸಲ್ಮಾನ್ ಫ್ಯಾಮಿಲಿಗೆ ಒಡಕಾಯ್ತು ಮಲೈಕಾ ಸೆಕ್ಸ್ ನಿಲುವು

ಕೃಷ್ಣಮೃಗ ಬೇಟಿ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಮೇಲೆ ಸೇಡು ತೀರಿಸಿಕೊಳ್ಳಲು ಹತ್ಯೆಗೆ ಸ್ಕೆಚ್  ಹಾಕಿದ್ದೆ ಎಂದು ವಿಚಾರಣೆ ವೇಳೆ ರಾಹುಲ್ ಹೇಳಿದ್ದಾನೆ. ನಟೋರಿಯಸ್ ಶಾರ್ಪ್ ಶೂಟರ್ ಆಗಿರುವ ರಾಹುಲ್ ಈಗಾಗಲೇ ನಾಲ್ಕು ಕೊಲೆ ಮಾಡಿದ್ದಾನೆ. ಫರಿದಾಬಾದ್, ಝಜ್ಜರ್, ಮನೋತ್ ನಲ್ಲಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಲ್ಮಾನ್ ಕಾಲ ಕಳೆದಿದ್ದರು. ಜಾಕ್ವೆಲಿನ್ ಫರ್ನಾಂಡೀಸ್ ಜತೆಗೂಡಿ ರೋಮ್ಯಾಂಟಿಕ್ ಸಾಂಗ್ ಒಂದನ್ನು ಸಿದ್ಧಮಾಡಿದ್ದರು.