ಕೊರೋನಾ ವೈರಸ್‌ನಿಂದಾದ ಲಾಕ್‌ಡೌನ್‌ ಜನರ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ತಂದಿದೆ. ಹಬ್ಬ ಹರಿದಿನಗಳನ್ನು ಆಪ್ತ ಕುಟುಂಬಸ್ಥರ ಜೊತೆ ಮನೆಯಲ್ಲಿಯೇ ಆಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಬಾಲಿವುಡ್‌ ಸೆಲೆಬ್ರಿಟಿಗಳು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸಲ್ಮಾನ್‌ ಖಾನ್‌, ಅರ್ಪಿತಾ ಹಾಗೂ ಅರ್ಬಾಜ್ ಒಟ್ಟಾಗಿ ಕಾಣಿಸಿಕೊಂಡ ಫೋಟೋ ಇದೀಗ ವೈರಲ್ ಆಗುತ್ತಿದೆ.

ಸಲ್ಮಾನ್ ಫ್ಯಾಮಿಲಿಗೆ ಒಡಕಾಯ್ತು ಮಲೈಕಾ ಸೆಕ್ಸ್ ನಿಲುವು..!

ಸಲ್ಮಾನ್ ಖಾನ್‌ ಸಹೋದರ ಸೊಹೈಲ್ ಖಾನ್ ಮನೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಲಾಗಿತ್ತು. ಅರ್ಪಿತಾ ಗಣೇಶ ಮೂರ್ತಿ ಎತ್ತುಕೊಂಡು ಗೃಹ ಪ್ರವೇಶಿಸುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಅರ್ಬಾಜ್ ಖಾನ್ ಗರ್ಲ್‌ಫ್ರೆಂಡ್‌ ಜಾರ್ಜಿಯಾ ಆಂಡ್ರಿಯಾನಿ ಜೊತೆ ಕಾಣಿಸಿಕೊಂಡರೆ ನಟಿ ಡೇಸಿ ಶಾ ಗಾಯಕ ಕಮಾಲ್ ಖಾನ್‌ ಜೊತೆ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.

ಮುಂಬೈನಲ್ಲಿ ನೆಲೆಸಿರುವ ಸಲ್ಮಾನ್‌ ಖಾನ್‌ ಕುಟುಂಬ ಭಾರತದಲ್ಲಿ ನಡೆಯುವ ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ಭಾಗಿಯಾಗುವುದರ ಬಗ್ಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್‌ ಪ್ರರಂಭದಿಂದಲೂ  ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿರುವ ಸಲ್ಲು ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದರು.

ಸಲ್ಮಾನ್ ಬೇಡ ಎಂದ ಫ್ಯಾನ್ಸ್: ಯಾರು ನಡೆಸಿ ಕೊಡ್ತಾರೆ ಹಿಂದಿ ಬಿಗ್‌ಬಾಸ್