ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರು ನಿರ್ಮಾಪಕ ರಾಜ್ ನಿಧಿಮೋರು ಅವರನ್ನು ಡಿಸೆಂಬರ್ 1 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈ ಮದುವೆಗಾಗಿ ಸಮಂತಾ ಅವರು ತಮ್ಮ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆ
ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ತಮ್ಮ ವೃತ್ತಿಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಡಿಸೆಂಬರ್ 1 ರಂದು, ಅವರು ಖ್ಯಾತ ಚಲನಚಿತ್ರ ನಿರ್ಮಾಪಕ ರಾಜ್ ನಿಧಿಮೋರು ಅವರೊಂದಿಗೆ ಸಪ್ತಪದಿ ತುಳಿದಿದ್ದು, ಈ ಸುದ್ದಿಯನ್ನು ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 1 ರಂದು ಸಮಂತಾ ನಿಧಿಮೋರು ವಿವಾಹ
ಕೊಯಮತ್ತೂರಿನಲ್ಲಿ ನಡೆದ ಅತ್ಯಂತ ವಿವಾಹ ಸಮಾರಂಭದಲ್ಲಿ ಸಮಂತಾ ಮತ್ತು ರಾಜ್ ನಿಧಿಮೋರು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಮಾರಂಭಕ್ಕೆ ಕೇವಲ ಸುಮಾರು 30 ಮಂದಿ ಆಪ್ತರು ಮಾತ್ರ ಸಾಕ್ಷಿಯಾಗಿದ್ದರು. ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿಸಿದ್ರಾ ಸಮಂತಾ?
ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಅವರು ಹಿಂದೂ ವಿಧಿವಿಧಾನಗಳ ಪ್ರಕಾರ ವಿವಾಹವಾದರು. ನಟಿ ತಮ್ಮ ವಿಶೇಷ ದಿನದಂದು ಕೆಂಪು ಬನಾರಸಿ ಸೀರೆಯಲ್ಲಿ ಕಂಗೊಳಿಸಿದರೆ, ರಾಜ್ ಅವರು ಸರಳವಾದ ಕುರ್ತಾ ಪೈಜಾಮ ಧರಿಸಿದ್ದರು. ಆದರೆ ಈ ಮದುವೆಯ ಕುರಿತು ಮತ್ತೊಂದು ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೆಂಡಿಂಗ್ ಆಗಿದೆ. ಮೂಲಗಳ ಪ್ರಕಾರ, ರಾಜ್ ಅವರನ್ನು ಮದುವೆಯಾಗಲು ಸಮಂತಾ ಅವರು ತಮ್ಮ ಮೂಲ ಕ್ರಿಶ್ಚಿಯನ್ ಧರ್ಮದ ಬದಲಿಗೆ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು ಎಂದು ವರದಿಯಾಗಿದೆ.
ಹಿಂದಿನ ಮದುವೆಯಲ್ಲೂ ಮತಾಂತರದ ಊಹಾಪೋಹ
ಈ ಹಿಂದೆ ನಾಗ ಚೈತನ್ಯ ಅವರನ್ನು ವಿವಾಹವಾದಾಗಲೂ, ಸಮಂತಾ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು ಆದರೆ ಆ ಸಮಯದಲ್ಲಿ ಅವರು ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಧರ್ಮದ ಸಂಪ್ರದಾಯಗಳಂತೆ ವಿವಾಹವಾಗಿದ್ದರು. ಹಿಂದೂ ಕುಟುಂಬಕ್ಕೆ ಸೊಸೆಯಾದರೂ, ಅವರು ತಮ್ಮ ಧರ್ಮವನ್ನು ತ್ಯಜಿಸಿರಲಿಲ್ಲ ಎಂದು ತಿಳಿದುಬಂದಿದೆ.
ಆದರೆ, ಈಗ ಸಮಂತಾ ಅವರು ಬಹಳ ಸಮಯದಿಂದ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ ಮತ್ತು ಅವರ ಹಲವಾರು ಹೇಳಿಕೆಗಳು ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವುದನ್ನು ಸೂಚಿಸುತ್ತವೆ ಎಂದು ವರದಿಗಳು ಹೇಳುತ್ತಿವೆ. ಈ ಮೂಲಕ, ರಾಜ್ ನಿಧಿಮೋರು ಅವರನ್ನು ವಿವಾಹವಾಗಲು ನಟಿ ಧರ್ಮ ಬದಲಾಯಿಸಿದ್ದಾರೆ ಎಂಬ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

