ಸುಶಾಂತ್ ಸಿಂಗ್ ಸಾವಿನ ನಂತರ ಭಾರೀ ಟೀಕೆಗೊಳಗಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡಿ ನೆಟ್ಟಿಗರಿಂದ ಉಗಿಸಿಕೊಂಡಿದ್ದರು. ಇದೀಗ ಮತ್ತೆ ದೊಡ್ಡ ಪ್ರಾಬ್ಲಂಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಬಾಲಿವುಡ್‌ನ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ನಿಂದ ಸಲ್ಮಾನ್‌ ಖಾನ್‌ನನ್ನು ನಿಷೇಧಿಸಿ ಎಂದು ಈಗಾಗಲೇ ಅಭಿಮಾನಿಗಳ ಒತ್ತಾಯ ಆರಂಭವಾಗಿದೆ. ಈ ಬಾರಿ ಸಲ್ಮಾನ್ ಬಿಗ್ ಬಾಸ್ ನಡೆಸಿಕೊಡುವುದು ಬೇಡ ಎಂದೇ ಶೋ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

'ನೀವಿನ್ನೂ ಮನುಷ್ಯರಾಗಿ ಉಳಿದಿದ್ದೀರಾ': ತನ್ನದೇ ಬ್ರ್ಯಾಂಡ್ ಮಾಸ್ಕ್ ಹಾಕಿದ ಸಲ್ಮಾನ್ ಹಿಗ್ಗಾ ಮುಗ್ಗ ಟ್ರೋಲ್

ಬಹಳಷ್ಟು ಸಮಯದಿಂದ ಸಲ್ಮಾನ್ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಮುಖ್ಯವಾಗಿ ಕೃಷಿ ಮಾಡುವ ಮತ್ತು ತನ್ನದೇ ಬ್ರ್ಯಾಂಡ್ ಮಾಸ್ಕ್ ಹಾಕಿ ತಾವಾಗಿಯೇ ಟ್ರೋಲಿಗರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು ಸಲ್ಮಾನ್.

2 ತಿಂಗಳ ನಂತರ ಕಾಣಿಸಿಕೊಂಡ ಕರಣ್ ಜೋಹಾರ್ ಹಾಕಿದ ಪೋಸ್ಟಿದು!

ಈ ಬಾರಿಯ ಹಿಂದಿ ಬಿಗ್ ಬಾಸ್‌ ಶೋಗೆ  ಸಲ್ಮಾನ್16 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್‌ನಲ್ಲಿ ಶೋ ಆರಂಭವಾಗುವ ಸಾಧ್ಯತೆ ಇದೆ. ಇಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೈಜೀನ್ ಆಧರಿಸಿ ಈ ಬಾರಿ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.