ಕೊರೋನಾ ವೈರಸ್‌ ವಿರುದ್ಧ ಪ್ರತಿಯೊಬ್ಬ ಸೆಲೆಬ್ರಿಟಿ ಹಾಗೂ ಜನ ಸಾಮಾನ್ಯರು ಯೋಧರಂತೆ ಹೋರಾಡುತ್ತಿದ್ದಾರೆ. ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ. ಇಂಥ ಸಮಯದಲ್ಲಿ ಅಪಪ್ರಚಾರ ಮಾಡುತ್ತಿರುವ ನಟನ ವಿರುದ್ಧ ಅಭಿಮಾನಿಗಳು ಮುಗಿಬಿದ್ದಿದಾರೆ.

ಹೌದು! ಬಾಲಿವುಡ್‌ ಹೆಸರಾಂತ ನಟ ರೋಹಿತ್ ರಾಯ್ ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಒಂದು ಪೋಸ್ಟ್‌ ಓದಿದ ಅಭಿಮಾನಿಗಳಿಗೆ ಇದು ಕಾಮಿಡಿನಾ ಅಥವಾ ಸೀರಿಯಸಾ ಅನ್ನೋ ಕನ್ಪ್ಯೂಷನ್ ಆಗಿದೆ.  ಏನದು ಪೋಸ್ಟ್‌?

ಹೆಚ್ಚು ದೇಣಿಗೆ ಕೊಟ್ಟಿದ್ಯಾರು? ಕೊಲೆಗೆ ಕಾರಣವಾಯ್ತು ಫ್ಯಾನ್ಸ್ ವಾರ್

'ರಜನಿಕಾಂತ್‌ಗೆ ಕೊರೋನಾ ಪಾಸಿಟಿವ್‌ ಬಂದಿದೆ. ಆದರೆ ಅವರಿಗೆ ಬಂದ ಕೊರೋನಾನೇ ಈಗ ಕ್ವಾರಂಟೈನ್‌ ಆಗಿದೆ' ಎಂದು ಬರೆದುಕೊಂಡಿದ್ದರು. ರೋಹಿತ್ ರಾಯ್ ತಮಾಷೆಯನ್ನು ನೆಟ್ಟಿಗರು ಗಂಭೀರವಾಗಿ ಪರಿಗಣಿಸಿ ಹಿಗ್ಗಾ ಮುಗ್ಗಾ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ.  ಸೂಪರ್‌ ಸ್ಟಾರ್ ರಜನಿಕಾಂತ್‌ ಸಿನಿಮಾದಲ್ಲಿ ಹೇಗೆ ಎಲ್ಲವನ್ನೂ ನಿಮಿಷದಲ್ಲಿ ಪರಿಹಾರ ಹುಡುಕುತ್ತಾರೋ, ಹೇಗೆ ಅವರಿಗೆ ಎಲ್ಲರು ಹೆದರಿಕೊಳ್ಳುತ್ತಾರೋ ಹಾಗೆ ಕೊರೋನಾನೂ ಹೆದರುವುದು ಎನ್ನುವ ರೀತಿಯಲ್ಲಿ ರೋಹಿತ್ ಪೋಸ್ಟ್ ಮಾಡಿದರು.

 

ಅಭಿಮಾನಿಗಳಿಗೆ ಸ್ಪಷ್ಟನೆ:

'ನಾನು ಬರೆದಿರುವುದನ್ನು ನೀವು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬೇಡಿ ಇದು ಜೋಕ್‌ ಅಷ್ಟೆ. ಇದಕ್ಕೂ ತಪ್ಪು ಅರ್ಥ ಬರುತ್ತದೆ ಎಂದು ನಾನು ಭಾವಿಸಿರಲಿಲ್ಲ. ಇದು ಸ್ಪೇಷಲ್ ರಜನಿ ಜೋಕ್. ಇದನ್ನು ಹಾಕುವ ಉದ್ದೇಶ ನಿಮ್ಮೆಲ್ಲರಿಗೂ ನಗು ತರಿಸುವುದು. ಕಾಮೆಂಟ್ ಮಾಡುವಾಗ ಮೊದಲು ಯೋಚಿಸಿ. ನಿಮಗೆ ಬೇಕಂತಲ್ಲೇ ನೋವು ಮಾಡುವುದಕ್ಕೆ ಈರೀತಿ  ಹಾಕಲು ಸಾಧ್ಯವೇ? ನಿಮ್ಮ ಕಾಮೆಂಟ್‌ಗಳು ನನಗೆ ನೋವು ಮಾಡಿದೆ' ಎಂದು ಸ್ಪಷ್ಟನೆ ಕೊಟ್ಟು ಕ್ಷಮೆ ಕೇಳಿದ್ದಾರೆ.

 

ಸ್ವಚ್ಛತೆ ಕಾಪಾಡಿ:

ಇದಾದ ಕೆಲವೇ ನಿಮಿಷಗಳಲ್ಲಿ  'ಕೊರೋನಾವನ್ನು ಸೋಲಿಸೋಣ. ನೀವು ಕೆಲಸಕ್ಕೆ ಮರಳಿದಾಗ ಸುರಕ್ಷಿತವಾಗಿರಿ. ಮಾಸ್ಕ್‌ ಅನ್ನು ಧರಿಸಿ. ಯಾವಾಗಲು ಕೈ ತೊಳೆಯುತ್ತಿರಿ, ಸ್ವಚ್ಛವಾಗಿರಿ'. ಎಂದು 
ಮತ್ತೊಂದು ಪೋಸ್ಟ್‌ ಮಾಡಿದ್ದಾರೆ.

ಪರಿಹಾರ ನಿಧಿಗೆ 50 ಲಕ್ಷ ನೀಡಿದ ರಜನಿಕಾಂತ್‌‌ರಿಂದ ಮತ್ತೊಂದು ಮಹತ್ವದ ಕೆಲಸ!

ಒಟ್ಟಿನಲ್ಲಿ ರಜನಿಕಾಂತ್‌ ಬಗ್ಗೆ ಬರುವ ಜೋಕ್‌ಗಳನ್ನು ಅಭಿಮಾನಿಗಳು ಸಿನಿಮಾಗಳಲ್ಲಿ ಮಾತ್ರ ಒಪ್ಪಿಕೊಳ್ಳುತ್ತಾರೆ ರಿಯಲ್ ಲೈಫ್‌ನಲ್ಲಿ ಅಲ್ಲ ಎಂದು ಸಾಬೀತು ಮಾಡಿದ್ದಾರೆ.