ನವದೆಹಲಿ (ಜ. 27): ಬಾಲಿವುಡ್‌ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಲಕ್ಷಣ ಪೋಸ್ಟ್‌ಗಳಿಂದ ಸುದ್ದಿ ಆಗುತ್ತಲೇ ಇರುತ್ತಾರೆ. ತಮ್ಮ ಮುಂಬರುವ ‘83’ ಚಿತ್ರದ ಪ್ರಚಾರಕ್ಕಾಗಿ ಚೆನ್ನೈಗೆ ತೆರಳಿದ್ದ ಪತಿ ರಣವೀರ್‌ಗೆ ಬರುವಾಗ ಶ್ರೀಕೃಷ್ಣಾ ಸ್ವೀಟ್ಸ್‌ನಿಂದ ಒಂದು ಕಿ.ಲೋ ಮೈಸೂರ್‌ ಪಾಕ್‌ ಮತ್ತು ಹಾಟ್‌ ಚಿಪ್ಸ್‌ನಿಂದ ಎರಡೂವರೆ ಕೆ.ಜಿ. ಆಲೂ ಚಿಫ್ಸ್‌ ತರದೇ ಮನೆಗೆ ಬರಬೇಡ ಎಂದು ದೀಪಿಕಾ ಎಂದು ತಾಕೀತು ಮಾಡಿರುವುದು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ಚರ್ಚೆ ಆಗುತ್ತಿದೆ.

 

ಚಿತ್ರತಂಡದ ಸದಸ್ಯರ ಜೊತೆ ಇರುವ ಫೋಟೋವೊಂದನ್ನು ರಣವೀರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದರು. ಎಲ್ಲರೂ ಫೆäಟೋವನ್ನು ಹೊಗಳಿ ಕಮೆಂಟ್‌ ಮಾಡಿದರೆ, ದೀಪಿಕಾ ಮತ್ರ ತನಗೆ ಮೈಸೂರ್‌ ಪಾಕ್‌ ಮತ್ತು ಚಿಫ್ಸ್‌ ತರುವುದು ಮರೆಯಬೇಡ ಎಂದು ಕಮೆಂಟ್‌ ಮಾಡಿದ್ದಾರೆ. ದೀಪಿಕಾ ಈ ಬೇಡಿಕೆ ಇಟ್ಟ ಬೆನ್ನಲ್ಲೇ, 83 ಚಿತ್ರದ ನಿರ್ದೇಶಕ ಕಬಿರ್‌ ಖಾನ್‌ ಪತ್ನಿ ಕೂಡ ಇದೇ ಬೇಡಿಕೆ ಇಟ್ಟಿದ್ದಾರೆ.