ಬಾಲಿವುಡ್ ಮೋಸ್ಟ್ ಅಡೋರಬಲ್ ನಟಿ ದೀಪಿಕಾ ಪಡುಕೋಣೆ ಆಗಾಗ ಹೊಸ ಹೊಸ ಫ್ಯಾಷನ್ ಮಾಡುತ್ತಾ ಗಮನ ಸೆಳೆಯುತ್ತಿರುತ್ತಾರೆ.  ಫ್ಯಾಷನ್ ಐಕಾನ್ ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿ ಶಾರ್ಟ್ ಹೇರ್ ಕಟ್ ಮಾಡಿಸಿಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ಪೋಟೋಗೆ ಪ್ರಶಂಸೆಯ ಸುರಿಮಳೆಯೇ ಬಂದಿದೆ. ಆದರೆ ವಿಶೇಷವಾಗಿ ಗಮನ ಸೆಳೆದಿದ್ದು ಪತಿ ರಣವೀರ್ ಸಿಂಗ್ ಕಮೆಂಟ್.   

ದೀಪಿಕಾ ಪೋಸ್ಟ್‌ಗೆ ರಣವೀರ್, ರಣವೀರ್‌ ಪೋಸ್ಟ್‌ಗೆ ದೀಪಿಕಾ ಫನ್ನಿಯಾಗಿ ಕಮೆಂಟ್ ಮಾಡುವುದು ಇದೇ ಮೊದಲೇನಲ್ಲ.

ಶಾರ್ಟ್ ಹೇರ್ ಕಟ್ ಫೋಟೋ ಹಾಕಿ Tadaaaaa ಎಂದು ದೀಪಿಕಾ ಕ್ಯಾಪ್ಷನ್ ಹಾಕಿದ್ದಾರೆ. ಇದಕ್ಕೆ ರಣವೀರ್ 'ನನ್ನನ್ನು ಸಾಯಿಸಿ ಬಿಡು' ಎಂದು ಕಮೆಂಟ್ ಮಾಡಿದ್ದಾರೆ.  

 

 
 
 
 
 
 
 
 
 
 
 
 
 

Tadaaaaa!!!💁🏽‍♀️

A post shared by Deepika Padukone (@deepikapadukone) on Dec 8, 2019 at 3:13am PST

 

 

 

ದೀಪಿಕಾ ಲುಕ್‌ಗೆ ರಣವೀರ್ ಮಾತ್ರವಲ್ಲ, ಅಲಿಯಾ ಭಟ್, ಆಯುಷ್ಮಾನ್ ಕುರಾನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಜೀವನಾಧಾರಿತ '83' ಸಿನಿಮಾದಲ್ಲಿ ದೀಪಿಕಾ- ರಣವೀರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.  ರಣವೀರ್ ಕಪಿಲ್ ದೇವ್ ಪಾತ್ರ ಮಾಡಿದ್ರೆ, ದೀಪಿಕಾ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.