ಬಾಲಿವುಡ್‌ ಯುವ ನಟ ಸುಶಾಂತ್ ಸಿಂಗ್ ಅಗಲಿ ತಿಂಗಳುಗಳೇ ಕಳೆದರು ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ಈವರೆಗೂ ತಿಳಿದುಬಂದಿಲ್ಲ ಆದರೆ ಅಸಲಿ ಸತ್ಯವನ್ನು ಪ್ರಪಂಚಕ್ಕೆ ತಿಳಿಸಲೆಬೇಕೆಂದು  ಸಿಬಿಐ ತನಿಖೆ ಪ್ರಾರಂಭಿಸಿದೆ. ಈ ಸಮಯದಲ್ಲಿ ಸುಶಾಂತ್ ಸಿಂಗ್ ಆತ್ಮದ ಜೊತೆ ಪ್ಯಾರಾನಾರ್ಮಲ್ ತಜ್ಞ ಮಾತನಾಡಿದ್ದಾರೆ. ಎಲ್ಲೆಡೆ ವೈರಲ್ ಆಗುತ್ತಿರುವ ಈ ವಿಡಿಯೋ ಅಚ್ಚರಿ ಮೂಡಿಸುತ್ತಿದೆ.

'ಮಾತಾಡ್ಲಿಕ್ಕೆ ಅವಕಾಶ ಇಲ್ಲ' ಅರ್ನಾಬ್ ಲೈವ್ ಶೋನಲ್ಲೇ ಈ ನಟಿ ಮಾಡಿದ ಕೆಲಸ!

ಅಭಿಮಾನಿಗಳ ಡಿಮ್ಯಾಂಡ್:

ಸುಶಾಂತ್‌ ಸಾವಿಗೆ ಕಾರಣ ಏನೆಂದು ತಿಳಿದುಕೊಳ್ಳಲೇಬೇಕು ಎಂದು ಸಿಂಗ್ ಅಭಿಮಾನಿಗಳು ಪ್ಯಾರಾನಾರ್ಮಲ್ ತಜ್ಞ ಸ್ವೀವ್‌ ಹಫ್‌ ಬಳಿ ಮನವಿ ಮಾಡಿಕೊಂಡರು. ಆತ್ಮದ ಜೊತೆ ಮಾತನಾಡಿ ವಿಡಿಯೋವನ್ನು ಸ್ವೀವ್ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದು ಸೂಕ್ಷ್ಮವಾದ ಮಾತನ್ನು ಹೇಳಿದ್ದಾರೆ. 

'ನನ್ನ ಜೀವನವನ್ನು ಪಣವಾಗಿಟ್ಟು ಈ ಕೆಲಸ ಮಾಡುತ್ತಿರುವೆ. ನೀವು ಇಲ್ಲಿ ನೋಡುತ್ತಿರುವುದೆಲ್ಲಾ 100% ಸತ್ಯ. ಒಬ್ಬ ಗೈಡ್‌ ಸಹಾಯದಿಂದ ಸುಶಾಂತ್ ಜೊತೆ ಮಾತನಾಡಿದೆ. ನನ್ನ ಹತ್ತು ವರ್ಷಗಳ ನಿರಂತರ  ಸಂಶೋಧನೆಯಿಂದ  ನಾನು ಸ್ಪಿರಿಟ್‌ ಬಾಕ್ಸ್‌ ಕಂಡು ಹಿಡಿದಿದ್ದೇನೆ. ಈ ವಿಡಿಯೋದಿಂದ ದುಡ್ಡು ಮಾಡುವ ಅಗತ್ಯ ನನಗೆ ಇಲ್ಲ ಹಾಗಾಗಿ ಸುಶಾಂತ್ ರ ಯಾವುದೇ ವಿಡಿಯೋಗಳನ್ನು ನಾನು ಮಾನಿಟೈಸ್ ಮಾಡಿಲ್ಲ' ಎಂದು ಬರೆದುಕೊಂಡಿದ್ದಾರೆ.

ಸುಶಾಂತ್‌ ಸಾವಿಗೆ ನ್ಯಾಯ ಸಿಗದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ: ಕಂಗನಾ

ಸುಶಾಂತ್ ಆತ್ಮದ ಮಾತು:

ಸುಶಾಂತ್ ಆತ್ಮದ ಜೊತೆ ಮಾತನಾಡಲು ಪ್ರಾರಂಭಿಸಿದಾಗ ಈ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ. ಸ್ಟೀವ್ ಆ ಆತ್ಮವನ್ನು 'ಸಾಯುವ ಹಿಂದಿನ ದಿನದ ರಾತ್ರಿ ಏನಾಗಿತ್ತು ಹೇಳಿ' ಎಂದು ಕೇಳಿದಾಗ ಸುಶಾಂತ್ ಆತ್ಮ 'ಗಂಡಸರ ಜೊತೆ ದೊಡ್ಡ ಜಗಳ ನಡೆಯಿತು ಎಂದು ಉತ್ತರ ಬಂದಿದೆ. 'ನಿಮ್ಮನ್ನು ಯಾರಾದ್ರೂ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾರಾ? ಎಂದು ಸ್ಟೀವ್ ಕೇಳಿದಾಗ 'ಅವರು ಮೊಳೆ ತೆಗೆದುಕೊಂಡು ಬಂದಿದ್ದರು' ಎಂದು ಆತ್ಮ ಉತ್ತರಿಸಿದೆ ಎಂದು ಹೇಳಲಾಗುತ್ತಿದೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಎಲ್ಲಾ ನೆಟ್ಟಿಗರು ಸುಶಾಂತ್‌ ರನ್ನು ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಇದೊಂದು ಪ್ರಮುಖ ಸಾಕ್ಷಿ ಎಂದು ಅಭಿಪ್ರಾಯಪಡುತ್ತಿದ್ದಾರೆ.