'ಸ್ಟ್ರೀಟ್‌ ಡ್ಯಾನ್ಸರ್‌ 3D' ಚಿತ್ರದಲ್ಲಿ ನಟಿಯಾಗಿ ಮಿಂಚಿo ನೋರಾ ಫತೇಹಿ ಧರಿಸಿದ ವಿಗ್‌ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ? ವಿದೇಶದಲ್ಲಿ ತಯಾರಾದ ಕೇಶ ವಿನ್ಯಾಸವನ್ನೊಮ್ಮೆ ಕಣ್ತುಂಬಿಕೊಳ್ಳಿ.

ಡೈನಾಮಿಕ್‌ ಆ್ಯಂಡ್ ಡಿಫರೆಂಟ್‌ ಡ್ಯಾನ್ಸ್‌ ಕೊರಿಯೋಗ್ರಾಫರ್ ರೆಮೋ ಡಿಸೋಜಾ ನಿರ್ದೇಶನದ 'Street Dance 3D' ಚಿತ್ರ ಇಂದು ದೇಶದ್ಯಾಂತ ತೆರೆ ಕಾಣುತ್ತಿದೆ. 'ಗರ್ಮಿ' ಹಾಡಿನಲ್ಲಿ ಸೊಂಟ ಕುಲುಕಿಸಿ, ಪ್ರೇಕ್ಷಕರ ಲವ್ಲಿ ಡ್ಯಾನ್ಸರ್‌ ಆಗಿರುವ ನೋರಾ ಹಾಡೊಂದಕ್ಕೆ ಧರಿಸಿದ ವಿಗ್‌ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ರಿವೀಲ್‌ ಮಾಡಿದ್ದಾರೆ. ಇದರ ಬೆಲೆ ಕೇಳಿದರೆ ಎಂಥವರಾದರೂ ಹೌಹಾರುತ್ತಾರೆ.

ಪ್ರಭಾಸ್‌,ಅಲ್ಲು ಅರ್ಜುನ್‌; ಒಬ್ಬರನ್ನೊಬ್ಬರು ಮೀರಿಸುವ ಸಂಭಾವನೆ ಪಟ್ಟಿ ಇಲ್ಲಿದೆ!

ಚಿತ್ರದಲ್ಲಿ ಶ್ರದ್ಧಾ ಕಪೂರ್, ಪ್ರಭುದೇವ, ವರುಣ್‌ ಧವನ್‌ಗೆ ಜೊತೆಯಾಗಿ ನೋರಾ ನಟಿಸಿದ್ದಾರೆ. ಈ ಹಾಡಿನಲ್ಲಿ ನೋರಾ ಧರಿಸಿರುವ ವಿಗ್‌ ದುಬೈನಲ್ಲಿ ತಯಾರಾಗಿದ್ದಂತೆ. ಇದರ ಬೆಲೆ ಬರೋಬ್ಬರಿ 2.5 ಲಕ್ಷ ರೂಪಾಯಿ!

ರಾಮ್ ಚರಣ್ - ಉಪಾಸನಾ ಲವ್‌ ಸ್ಟೋರಿಯಲ್ಲೊಂದು ಟ್ವಿಸ್ಟ್‌! ಕ್ಯೂಟ್‌ ಕಪಲ್‌ ನೋಡಿ

'ನಾನು ನನ್ನ ಸ್ಟೈಲಿಸ್ಟ್‌, ದುಬೈನಲ್ಲಿ ವಿಗ್ ತಯಾರಿ ಮಾಡುವ ಕಂಪನಿಗೆ ಭೇಟಿ ನೀಡಿದ್ದೆವು. ಅವರು ನಿಜವಾದ ಕೂದಲಿನಿಂದ ನಮಗೆ ಬೇಕಾದಂತೆ ವಿಗ್ ತಯಾರಿಸಿ ಕೊಡುತ್ತಾರೆ, ಎಂದು ತಿಳಿದ ತಕ್ಷಣವೇ ನಾನು ಡ್ಯಾನ್ಸ್‌ಗೆ ಬೇಕಾದ ರೀತಿಯಲ್ಲಿ ತಯಾರಿ ಮಾಡಿಸಿದೆ. ಅದು ಉದ್ದ ಮತ್ತು ದಪ್ಪ ಇರಬೇಕು. ಶ್ರದ್ಧಾ ಎದುರು ಡ್ಯಾನ್ಸ್ ಮಾಡಿದಾಗ ಸೂಪರ್ ಅಗಿ ಕಾಣಿಸಬೇಕು' ಎಂದಿದ್ದಾರೆ. 

View post on Instagram

'ಟೈಗರ್‌ ಆಫ್‌ ಸುಂದರ್‌ ಬನ್ಸ್‌' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನೋರಾ ಈಗ ಅಲ್ಲಿ ಬಹು ಬೇಡಿಕೆಯ ನಟಿ. ನೋರಾ ಕ್ಯಾನಡಿಯನ್‌ ಡ್ಯಾನ್ಸ್ ಕಲಿತಿದ್ದಾರೆ. ಸದ್ಯಕ್ಕೆ ಕಾಲಿವುಡ್‌ನಿಂದಲೂ ನೋರಾಗೆ ಆಫರ್‌ಗಳು ಹರಿದು ಬರುತ್ತಿವೆ.