2018 ಮೇ 10ರಂದು ಸರಳವಾಗಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನೇಹಾ ಧೂಪಿಯಾ ಹಾಗೂ ಅಂಗದ್ ಬೇಡಿ. ಮದುವೆಯಾದ ಆರೇ ತಿಂಗಳಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. 

ಶಾಹಿದ್‌ ಕಪೂರ್‌ ಪತ್ನಿ ಮೀರಾ ಹಾಗೂ ನೇಹಾ ಕೆಲವು ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೇ ಪಾಲ್ಗೊಂಡು, ಮಾತೃತ್ವದ ಬಗ್ಗೆ ಮಾತನಾಡಿದ್ದಾರೆ. 'ನಾನು ಫಿಟ್‌ನೆಸ್ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತೇನೆ. ದಿನಲೂ ಬೆಳಗ್ಗೆ ತಪ್ಪದೇ ವರ್ಕೌಟ್‌ ಮಾಡುತ್ತಿದ್ದೆ. 15 ವರ್ಷಗಳಿಂದ ಯಾವುದೇ ಜಂಕ್‌ ಹಾಗೂ ಸ್ವೀಟ್‌ ಫುಡ್‌ ಮುಟ್ಟಿರಲಿಲ್ಲ ಪ್ರೆಗ್ನೆನ್ಸಿ ಟೈಂನಲ್ಲಿ ನೋಡಿದ್ದನ್ನೆಲ್ಲಾ ತಿನ್ನಬೇಕು ಎನಿಸುತ್ತಿತ್ತು. ಹಿಂದೂ ಮುಂದು ನೋಡದೇ, ಬೇಕಾಗಿದ್ದಲ್ಲವನ್ನೂ ತಿನ್ನುತ್ತಿದ್ದೆ. ಆದರೆ ಅಷ್ಟೇ ವರ್ಕೌಟ್ ಮಾಡುತ್ತಿದ್ದೆ. ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರಿಗೂ ಈ ಬಗ್ಗೆ ಅನುಮಾನ ಇರುತ್ತಿತ್ತು. ಆದರೆ ಯಾರೂ ಕೇಳಿರಲಿಲ್ಲ,' ಎಂದು ಎಂದಿದ್ದರು.

ಗರ್ಭಿಣಿಯಾಗಿದ್ದನ್ನು 6 ತಿಂಗಳು ನೇಹಾ ಮುಚ್ಚಿಟ್ಟಿದ್ದೇಕೆ?

6 ತಿಂಗಳು ನಂತರ ಪ್ರೆಗ್ನೆನ್ಸಿ ವಿಚಾರ ಬಹಿರಂಗ ಪಡಿಸಿದ ನೇಹಾ ತಾಯಂದಿರಿಗೆ ಟಿಪ್ಸ್ ನೀಡಿದ್ದಾರೆ. 'ನಿಮ್ಮ ಮಗು ಹೇಗಿರಬೇಕು, ಏನು ತಿನ್ನಬೇಕು ಎಂಬುವುದು ನಿಮಗೆ ಗೊತ್ತಿರುತ್ತದೆ. ಯಾರಿಂದಲೂ ಟಿಪ್ಸ್‌ ತೆಗೆದುಕೊಳ್ಳಬೇಡಿ. ಪ್ರೆಗ್ನೆನ್ಸಿ ರಿವೀಲ್‌ ಮಾಡುವುದು ನಿಮ್ಮ ಪರ್ಸನಲ್‌ ವಿಚಾರ. ನನಗೆ ಕ್ಯಾಮೆರಾ ಲೈಟ್ಸ್‌ಗೆ ಮಗಳನ್ನು ಎಕ್ಸ್‌ಪೋಸ್ ಮಾಡುವುದು ಇಷ್ಟವಿರಲಿಲ್ಲ. ಅವಳು ಆರೋಗ್ಯವಂತಳಾಗಿ ಬೆಳೆಯಬೇಕಾದ ಹಂತವಿದು. ' ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ಹಾಟ್ ಫೋಟೋದೊಂದಿಗೆ Anniversary ವಿಶ್ ಮಾಡಿದ ನೇಹಾ ಧೂಪಿಯಾ!

ಹಲವು ವರ್ಷಗಳಿಂದ ನೇಹಾ ಹಾಗೂ ಆಂಗದ್‌ ಡೇಟಿಂಗ್ ಮಾಡುತ್ತಿದ್ದರು.