ಮುಂಬೈ(ಸೆ.21) ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಈ ವರ್ಷ ಮೇ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆ ವೇಳೆಗೆ ನೇಹಾ ಗರ್ಭಿಣಿ ಎಂಬ ವದಂತಿಗಳು ಹರಿದಾಡುತ್ತಿದ್ದವು. ನೇಹಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಕ್ಯಾಮರಾಗಳು ನೇಹಾರಲ್ಲಿ ತಾಯ್ತನ ಹುಡುಕುತ್ತಿದ್ದವು. ಆದರೆ ಉತ್ತರ ಸಿಕ್ಕಿರಲಿಲ್ಲ.

ನೇಹಾ ತಂದೆ ಸಹ ಆಕೆ ಗರ್ಭಿಣಿ ಅಲ್ಲ ಎಂದು ವಾದಿಸಿದ್ದರು. ಆದರೆ ಈ ಎಲ್ಲ ಪ್ರಶ್ನೆ-ಸಂಶಯಗಳಿಗೆ ನೇಹಾ ಧೂಪಿಯಾನೆ ಈಗ ಉತ್ತರ ನೀಡಿದ್ದಾರೆ. ತಮ್ಮ ತಾಯ್ತನ ಸಾರುವ ಫೋಟೋ ವನ್ನು ಸೋಶಿಯಲ್ ಮೀಡಯಾಕ್ಕೆ ಅಪ್ ಲೋಡ್ ಮಾಡಿದ್ದಾರೆ.

ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು

ಇದೊಂದು ಹೊಸ ಹುಟ್ಟಿನ ಆರಂಭ ಎಂದು ನೇಹಾ ಬರೆದುಕೊಂಡಿದ್ದಾರೆ. ಆಕೆಯೊಂದಿಗೆ ಪತಿ ಕೂಡಾ ಫೋಟೋದಲ್ಲಿ ಇದ್ದಾರೆ. ಇದೆಲ್ಲದರ ನಡುವೆ ನೇಹಾ ಫ್ಯಾಷನ್ ಶೋ ಒಂದರಲ್ಲಿ ಹೆಜ್ಜೆ ಹಾಕಿದ್ದು ಸದ್ದು ಮಾಡಿತ್ತು.


 

 
 
 
 
 
 
 
 
 
 
 
 
 
 
 

A post shared by Viral Bhayani (@viralbhayani) on Aug 25, 2018 at 4:39am PDT