21 ಕೆಜಿ ತೂಕ ಕಡಿಮೆ ಮಾಡಿಕೊಂಡು ಬಾಡಿ ಶೇಮಿಂಗ್ ಟ್ರೋಲರ್ಸ್ ಬಾಯಿ ಮುಚ್ಚಿಸಿದ ನೇಹಾ ಧುಪಿಯಾ!
ಪ್ರಸ್ತುತ ಬಾಡಿ ಶೇಮಿಂಗ್ ತುಂಬಾ ಕಾಮನ್. ಅದರಲ್ಲೂ ಸಿನಿಮಾ ನಟಿಯರು ಬಾಡಿ ಶೇಮಿಂಗ್‌ಗೆ ಒಳಗಾಗುವುದರಿಂದ ಹೊರತಾಗಿಲ್ಲ. ಅನೇಕ ನಟ-ನಟಿಯರು ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಇತ್ತೀಚಿಗೆ ಬಾಲಿವುಡ್‌ನ ನಟಿ ನೇಹಾ ಧೂಪಿಯಾ ಈ ಪಟ್ಟಿಗೆ ಸೇರಿದ್ದರು. ಪ್ರೆಗ್ನೆಂಸಿಯಿಂದ ನೇಹಾ ಧೂಪಿಯಾ 25 ಕೆಜಿ ತೂಕ ಹೆಚ್ಚಾಗಿತ್ತು. ಈ ಕಾರಣದಿಂದಾಗಿ, ಅವಳು ಟ್ರೋಲ್‌ಗಳಿಗೆ ಗುರಿಯಾಗಿದ್ದರು. ಆದರೆ, ಈಗ ಲಾಕ್‌ಡೌನ್ ನಂತರ 21 ಕೆಜಿ ತೂಕ ಕಡಿಮೆ ಮಾಡಿಕೊಂಡು, ನೇಹಾ ಟ್ರೋಲರ್ಸ್‌ಗೆ ಸೂಕ್ತ ಉತ್ತರ ನೀಡಿದ್ದಾರೆ.
ನಟಿ ನೇಹಾ ಧುಪಿಯಾ ತಮ್ಮ ಮಾತಿನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರು ಬೋಲ್ಡ್ ಹೇಳಿಕೆಗಳನ್ನು ನೀಡುವ ಮೂಲಕ ಹಲವಾರು ಸಂದರ್ಭಗಳಲ್ಲಿ ಟ್ರೋಲರ್ಸ್ ಬಾಯಿ ಮುಚ್ಚಿಸುತ್ತಾರೆ. ಆದರೆ ಈ ಬಾರಿ ನೆಟ್ಟಿಗರು ನಟಿಯ ಹೆಚ್ಚಿದ ತೂಕವನ್ನು ಗುರಿಯಾಗಿಸಿಕೊಂಡಿದ್ದರು.
ವಾಸ್ತವವಾಗಿ, ಮಗಳು ಮೆಹರ್‌ಗೆ ಜನ್ಮ ನೀಡಿದ ನಂತರ ನೇಹಾರ ತೂಕ 24 ರಿಂದ 25 ಕೆ.ಜಿ.ಗೆ ಏರಿತು. ಅಂತಹ ಪರಿಸ್ಥಿತಿಯಲ್ಲಿ, ನಟಿ ನೋಡಿದ ಜನರು ಅವರ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್‌ಗಳನ್ನು ನೀಡಿದರು.
ನವೆಂಬರ್ 2018ರಲ್ಲಿ ಮಗಳಿಗೆ ಜನ್ಮ ನೀಡಿದ ನಂತರ ನೇಹಾ ತುಂಬಾ ದಪ್ಪವಾದರು. ಪ್ರೆಗ್ನೆಂಸಿಯ ನಂತರದ ತೂಕದ ಜೊತೆಗೆ ಮೆಡಿಕಲ್ ಕಾಂಪ್ಲಿಕೇಷನ್‌ಗಳ ಕಾರಣದಿಂದಾಗಿ ಅವರ ತೂಕವೂ ಹೆಚ್ಚಾಯಿತು.
'ಈ ತೂಕ ಹೆಚ್ಚಿದ ಬಗ್ಗೆ ಯಾವುದೇ ಟೆನ್ಷನ್ ನಟಿಯ ಮನಸ್ಸಿನಲ್ಲಿ ಇರಲಿಲ್ಲ. ಅವರು ಸಾಕಷ್ಟು ನಾರ್ಮಲ್ ಜೀವನವನ್ನು ನಡೆಸುತ್ತಿದ್ದರು. ಯಾವ ಸಂದರ್ಭಗಳು ತೂಕ ಹೆಚ್ಚಿಸಿವೆ ಎಂದು ಅವರು ತಿಳಿದಿದ್ದರು. ಆದರೆ ಜನರು ಫ್ಯಾಟ್ ಶೇಮ್ ಮಾಡಿದರು' ಎಂದು ನೇಹಾ ಹೇಳಿದ್ದಾರೆ.
ಸ್ಥೂಲಕಾಯತೆಯಿಂದಾಗಿ ನೇಹಾ ಅವರ ವೃತ್ತಿಜೀವನ ಮುಗಿದಿದೆ ಎಂದು ಅನೇಕರು ಕಾಮೆಂಟ್ ಮಾಡಿದರು. ಅವರ ದೇಹವನ್ನು ಗೇಲಿ ಮಾಡಿದರು. ಈ ಎಲ್ಲ ಕಾಮೆಂಟ್‌ಗಳಿಂದ ನೇಹಾ ಸಾಕಷ್ಟು ತೊಂದರೆ ಅನುಭವಿಸಿದರು.
ನೇಹಾ ಈಗ ತೂಕವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಟ್ರೋಲರ್ಸ್ ಬಾಯಿ ಮುಚ್ಚಿಸಿದ್ದಾರೆ. ಲಾಕ್‌ಡೌನ್‌ನಲ್ಲಿ ನೇಹಾ ತನ್ನ 21 ಕೆಜಿ ತೂಕದ ತೂಕವನ್ನು ಕಡಿಮೆ ಮಾಡಿದರು.
ಇದಕ್ಕೆ 8 ತಿಂಗಳು ಬೇಕಾಯಿತು. ತೂಕವನ್ನು ಕಡಿಮೆ ಮಾಡಲು ಆತುರಪಡಲಿಲ್ಲ. ಸಮಯ ತೆಗೆದುಕೊಂಡರು ಮತ್ತು ತಾಳ್ಮೆಯಿಂದ ತೂಕವನ್ನು ಕಳೆದುಕೊಂಡರು. ಅವರು ಮನೆಯಲ್ಲಿ ವರ್ಕೌಟ್ ಮಾಡಿದರು. ಅವರ ಡಯಟ್ ಮೇಲೂ ಕಣ್ಣಿಟ್ಟಿದ್ದರು ನೇಹಾ.