80ರ ದಶಕದಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ ನಟ ನೀಲಿಮಾ ಅಜೀಮ್  ಮೊದಲ ಬಾರಿ ಸಿಂಗಲ್‌ ಪೇರೆಂಟಿಂಗ್ ಬಗ್ಗೆ ಲೈವ್‌ನಲ್ಲಿ ಮಾತನಾಡಿದ್ದಾರೆ.  ಬಾಲಿವುಡ್‌ ಚಿತ್ರರಂಗದ ಕಬೀರ್‌ ಸಿಂಗ್ ಶಾಹಿದ್ ಕಪೂರ್‌ ಮೂರುವರೇ ವಯಸ್ಸಿನಲ್ಲಿ ತಂದೆಯಿಂದ ದೂರವಾದರಂತೆ.

ಸಿಂಗಲ್‌ ಪೇರೆಂಟಿಂಗ್:

ಬಾಲಿವುಡ್‌ ನಟಿ ನೀಲಿಮಾ ಹಾಗೂ ಪಂಕಜ್ ಕಪೂರ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಶಾಹಿದ್‌ ಕಪೂರ್‌ಗೆ ಜನ್ಮ ನೀಡುತ್ತಾರೆ. ಆದರೆ ಕಾರಣಾಂತರಗಳಿಂದ ಶಾಹಿದ್‌ ಕೇವಲ 3.5 ವರ್ಷವಿದ್ದಾಗ ಪಂಕಜ್ ನೀಲಿಮಾಗೆ ಡಿವೋರ್ಸ್‌ ನೀಡುತ್ತಾರೆ.

ಶಾಹಿದ್‌ - ಕರೀನಾ ಕಪೂರ್‌ ಬ್ರೇಕ್‌ಅಪ್‌ಗೆ ಕರೀಷ್ಮಾ ಕಾರಣವೇ?

'ನಾನು ಇದುವರೆಗೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಈಗ ಹೇಳುವೆ. ನಾನು ಪಂಕಜ್‌ಯಿಂದ ದೂರವಾಗಲು ನಿರ್ಧರಿಸಲಿಲ್ಲ. ಅದು ಅವರ ನಿರ್ಧಾರವಾಗಿತ್ತು.  ಮೊದಲು ಇದನ್ನು ಕೇಳಿದಾಗ ಅರಗಿಸಿಕೊಳ್ಳಲು ಕಷ್ಟವಾಯ್ತು ಆದರೆ ಅವರಿಗೆ ಬಲವಾದ ಕಾರಣವಿತ್ತು.ನಾನು 15ನೇ ವಯಸ್ಸಿನಲ್ಲಿದಾಗ ಅವರಿಗೆ ಫ್ರೆಂಡ್‌ ಆದೆ ಅವರನ್ನು ಅರ್ಥ ಮಾಡಿಕೊಂಡೆ ಎಂದುಕೊಂಡು ಪ್ರೀತಿಸಲು ಆರಂಭಿಸಿದೆ ' ಎಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಬ್ರೇಕಪ್‌ ಎಂದು ಹೇಳುವುದು ಸುಲಭ ಆದರೆ ಡಿವೋರ್ಸ್‌ ಅಲ್ಲ.  ಇಬ್ಬರಿಗೂ ಕಷ್ಟವಾಗಿತ್ತು. ಇಬ್ಬರ ನಡುವೆ ಉತ್ತಮ ಗೆಳೆತನ ಹಾಗೂ ಅಟ್ಯಾಚ್ಮೆಂಟ್‌ ಇತ್ತು ಅದರೆ ಅದರ ನಡುವೆಯೂ ಹಾರ್ಟ್‌ಬ್ರೇಕ್‌ ಇತ್ತು.  ಇರಲಿ ಬಿಡಿ, ಈಗ ಅವರು ಕುಟುಂಬದ ಜೊತೆ ಸೆಟಲ್‌ ಆಗಿ ಆರಾಮಾಗಿದ್ದಾರೆ' ಎಂದು ಹೇಳುತ್ತಾ ಅವರಿಗೆ ಶುಭವಾಗಲಿ ಎಂದು ಆಶಿಸಿದ್ದಾರೆ. 

ನೀಲಿಮಾ - ಪಂಕಜ್ ಮದುವೆ:

ನೀಲಿಮಾ ಹಾಗೂ ಪಂಕಜ್‌ ಪ್ರೀತಿಸಿ 1975ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾಗಿ 9 ವರ್ಷಗಳಲ್ಲಿ ಡಿವೋರ್ಸ್‌ಗೆ ಅಪ್ಲೈ ಮಾಡಿದರು.  ಆ ನಂತರ ಪಂಕಜ್ ಸುಪ್ರೀಯಾಳನ್ನು ಮದುವೆಯಾಗಿದ್ದಾರೆ. 

ಚಿತ್ರೀಕರಣದ ವೇಳೆ ಗಾಯಗೊಂಡ ಶಾಹಿದ್ ಕಪೂರ್‌; ಮೂತಿಗೆ ಬಿತ್ತು 13 ಹೊಲಿಗೆ!

ಪಂಕಜ್‌ ಬಿಟ್ಟು ಹೋದ ಸಮಯದಲ್ಲಿ ನೀಲಿಮಾಗೆ ಶಕ್ತಿಯಾಗಿ ನಿಂತಿದ್ದು ತನ್ನ ಪುಟ್ಟ ಕಂದ ಶಾಹಿದ್‌ ಕಪೂರ್. 'ಶಾಹಿದ್‌ ದೊಡ್ಡವನಾಗುತ್ತಾ ನನಗೆ ಶಕ್ತಿ ತುಂಬುತ್ತಾ  ಹೋದನು. ಜೀವನದ ಮೇಲೆ  ಭರವಸೆ ಹುಟ್ಟಿಸಿದ' ಎಂದು ಮಗನಿಗೆ ಕ್ರೆಡಿಟ್‌ ನೀಡಿದ್ದಾರೆ.

ನೀಲಿಮಾ - ರಾಜೇಶ್‌:

ಪಂಕಜ್‌ ಜೊತೆ ವಿಚ್ಛೇದನ ಪಡೆದ ನಂತರ ನಿಲೀಮಾ ರಾಜೇಶ್‌ ಖತ್ತರ್‌ನನ್ನು ಮದುವೆಯಾದರು. ಅದಾದ ನಂತರ ಉಸ್ತಾದ್‌ನನ್ನು ಮದುವೆಯಾದರು ಆದರೆ ಅದ್ಯಾವ ಸಂಬಂಧವೂ ಹೆಚ್ಚಿನ ಕಾಲ ಉಳಿಯಲಿಲ್ಲ ಎಲ್ಲವೂ ಮುರಿದುಬಿದ್ದವು .