ಶಾಹಿದ್‌ - ಕರೀನಾ ಕಪೂರ್‌ ಬ್ರೇಕ್‌ಅಪ್‌ಗೆ ಕರೀಷ್ಮಾ ಕಾರಣವೇ?

First Published 27, Mar 2020, 6:12 PM

ಒಂದು ಕಾಲದಲ್ಲಿ, ಬಾಲಿವುಡ್‌ನ ಈ ಇಬ್ಬರು ಕಪೂರ್‌ಗಳಾದ ಕರೀನಾ ಮತ್ತು ಶಾಹಿದ್‌ರ ಪ್ರೇಮ್‌ಕಹಾನಿ ತುಂಬಾ ಫೇಮಸ್‌. ಅನ್‌ಸ್ಕ್ರೀನ್‌ ಮತ್ತು ಅಫ್‌ಸ್ಕ್ರೀನ್‌ ಎರಡೂ ಕಡೆ ಈ ಜೋಡಿಯದ್ದೇ ಸುದ್ದಿಯಾಗಿತ್ತು. ಆದರೆ ಈಗ ಅದು ಹಳೆ ಕಥೆ ಅಷ್ಟೇ.  ಕುಟುಂಬ ಸದಸ್ಯರ ಕಾರಣದಿಂದಾಗಿ ಈ ಇಬ್ಬರೂ ಬೇರೆಯಾದರು ಎಂಬ ವಂದತಿ ಇದೆ. ಸ್ವಂತ ಅಕ್ಕ ಕರೀಷ್ಮಾ ಕಪೂರ್‌ ಈ ಮುದ್ದಾದ ಜೋಡಿಯ ಬ್ರೇಕ್‌ ಅಪ್‌ಗೆ ಕಾರಣವಂತೆ.
 
ಬಾಲಿವುಡ್‌ನ ಹಲವು ಅಪೂರ್ಣ ಪ್ರೇಮ ಕಥೆಗಳಲ್ಲಿ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್‌ದು ಒಂದು.

ಕರೀನಾ ಮತ್ತು ಶಾಹಿದ್ ಕಪೂರ್ ಪರಸ್ಪರರ ಬಲವಾದ ಪ್ರಭಾವ ಬೀರಿದ್ದರು. ಕರೀನಾ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು, ಸಸ್ಯಾಹಾರಿಯಾಗಿ ಆಧ್ಯಾತ್ಮಿಕತೆಯತ್ತ ಒಲವು ತೋರಿದಾಗ, ಶಾಹಿದ್ ಅವರಲ್ಲೂ ಬದಲಾವಣೆಗಳು ಕಾಣಬಹುದಾಗಿತ್ತು.

ಕರೀನಾಳ ಸಹೋದರಿ ಕರಿಷ್ಮಾ ಕಪೂರ್ ಮತ್ತು ತಾಯಿ ಬಬಿತಾಗೆ ಲವ್‌ ಅಫೆರ್‌ ಇಷ್ಟ ಇರಲಿಲ್ಲ. ಶಾಹಿದ್ ಕೂಡ ಪ್ರಸಿದ್ಧ ವಂಶಕ್ಕೆ ಸೇರಿದವರಾದರೂ, ಅವರ ಕುಟುಂಬಕ್ಕೆ ಸಮ ಅಲ್ಲ ಎಂದು ಅವರು ಭಾವಿಸಿದರು. ಶಾಹಿದ್‌ ಮೇಲಿನ ಒಲವಿನಿಂದ ಕರೀನಾ ತನ್ನ ಫಿಲ್ಮಂಗಳಲ್ಲಿ ಶಾಹಿದ್‌ ನಟಿಸುವಂತೆ ನಿರ್ದೇಶಕರನ್ನು ಕೇಳಿಕೊಳ್ಳುತ್ತಿದ್ದರಂತೆ.

ಫಿದಾ ಚಿತ್ರದ ನಂತರ, ಅವರ ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದವು. ಇದರ ಹಿಂದಿನ ನಿಖರವಾದ ಕಾರಣ ತಿಳಿದಿಲ್ಲ.

ತಶಾನ್ ಚಿತ್ರಕ್ಕಾಗಿ ಬೇಬೊ ಅವರ ಅಲ್‌ಟೈಮ್‌ ಕ್ರಶ್‌ ಸೈಫ್ ಅಲಿ ಖಾನ್ ಚಿತ್ರೀಕರಣ ಪ್ರಾರಂಭಿಸಿದಾಗ, ಶಾಹಿದ್ ವಿದ್ಯಾ ಬಾಲನ್ ಜೊತೆ ಕಿಸ್ಮತ್ ಕನೆಕ್ಷನ್ ಶೂಟಿಂಗ್‌ನಲ್ಲಿ ಬ್ಯುಸಿಯಾದರು.

ಶಾಹಿದ್ ಮತ್ತು ವಿದ್ಯಾ ನಡುವಿನ ರೂಮರ್‌ಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಂತೆ, ಕರೀನಾ ಕೂಡ ಸೈಫ್ ಅಲಿ ಖಾನ್ ಅವರ ಕಂಪನಿಯಲ್ಲಿ ಸಾಂತ್ವನ ಕಂಡುಕೊಂಡರು.

ಚಿತ್ರೀಕರಣದ ಅಂತ್ಯದ ವೇಳೆಗೆ ಶಾಹಿದ್ ಕಪೂರ್‌ನಿಂದ ಮೂವ್‌ಅನ್‌ ಆಗಿದ್ದ ಕರೀನಾ. ಶಾಹಿದ್ ದೊಡ್ಡ ತಾರೆಯಾಗಿ ಹೊರ ಹೊಮ್ಮುವುದನ್ನು ಸಹಿಸದ ಬಬಿತಾ ಮತ್ತು ಕರಿಷ್ಮಾ ವೃತ್ತಿಜೀವನದತ್ತ ಕರೀನಾ ಗಮನ ಹರಿಸುವಂತೆ ನೋಡಿಕೊಂಡರು.

ಕೋ ಸ್ಟಾರ್‌ಗಳಾದ ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆ ಶಾಹಿದ್ ಹೆಸರು ಕೇಳಿಬಂತು ಕರೀನಾ ಸೈಫ್ ಮೇಲೆ ಕಣ್ಣಿಟ್ಟಿದ್ದಳು. ನಂತರದ್ದು ಈಗ ಇತಿಹಾಸ.

loader