ನವದೆಹಲಿ(ಜ.25): ಇಬ್ಬರು ಪ್ರಾಣಿ ಕಲ್ಯಾಣ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ, ನಟ ನಸೀರುದ್ದೀನ್ ಶಾ ಪುತ್ರಿ ಹೀಬಾ ಶಾ ವಿರುದ್ಧ ದೂರು ದಾಖಲಿಸಲಾಗಿದೆ.

ಕಳೆದ ಜ.16 ರಂದು ನಟಿ ಹೀಬಾ ಶಾ ಕ್ರಿಮಿನಾಶಕ ಸೇವಿಸಿದ್ದ ತಮ್ಮ ಎರಡು ಬೆಕ್ಕುಗಳನ್ನು ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ದಾಖಲಿಸಿದ್ದರು.

ಈ ವೇಳೆ ಚಿಕಿತ್ಸೆ ಮುಗಿಯುವವರೆಗೂ ಹೊರಗೆ ಕಾಯುವಂತೆ ಹೀಬಾಳಿಗೆ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಚಿಕಿತ್ಸೆಗೂ ಮೊದಲು ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ.

ಇದರಿಂದ ಕೆರಳಿದ ಹೀಬಾ,  ಏಕಾಏಕಿ ಸಿಬ್ಬಂದಿ ಮೇಲೆ  ಹಲ್ಲೆ ಮಾಡಿದ್ದಾರೆ. ಹೀಬಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದನ್ನು ಆಧರಿಸಿ ಹೀಬಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಧರ್ಮದ ಸೋಗಿನಲ್ಲಿ ಮಾನವ ಹಕ್ಕುಗಳ ಹರಣ: ಸರ್ಕಾರದ ವಿರುದ್ಧ ಶಾ ವಿವಾದಿತ ಹೇಳಿಕೆ

ಆದರೆ ತಮ್ಮ ಮೇಲಿನ ಆರೋಪ ನಿರಾಕರಿಸಿರುವ ಹೀಬಾ, ಸಿಬ್ಬಂದಿ ತಮ್ಮೊಂದಿಗೆ ಅಸಭ್ಯ ವರ್ತಿಸಿದ್ದರಿಂದ ಹಲ್ಲೆ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.