Asianet Suvarna News Asianet Suvarna News

ತಂದೆ ತಿರಸ್ಕರಿಸಿದ್ದಕ್ಕೆ ತಾಯಿ ಹೆಸರ ಸೇರಿಸಿಕೊಂಡ ಮಲ್ಲಿಕಾ ಶೆರಾವತ್!

ಚಿತ್ರರಂಗಕ್ಕೆ ಪ್ರವೇಶಿಸುವುದರಿಂದ ಕುಟುಂಬದ ಹೆಸರು ಹಾಳು ಮಾಡುತ್ತೀಯಾ; ತಂದೆಗೆ ನಟಿ ಮಲ್ಲಿಕಾ ಶೆರಾವತ್ ಉತ್ತರವಿದು...
 

Bollywood Mallika Sherawat adopted her mother maiden name vcs
Author
Bangalore, First Published Sep 14, 2021, 4:54 PM IST

ಬೋಲ್ಡ್‌ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಹಾಟ್ ನಟಿ ಎಂದು ಲೇಬಲ್ ಪಡೆದಿರುವ ಮಲ್ಲಿಕಾ ಶೆರಾವತ್ ಹುಟ್ಟಿದ್ದು ಹರಿಯಾಣದ ಸಣ್ಣ ಊರಿನಲ್ಲಿ. ಪುರುಷ ಪ್ರಧಾನ ಕುಟುಂಬದಲ್ಲಿ ಬೆಳೆದ ಕಾರಣ ತಮ್ಮ ಕನಸುಗಳನ್ನು ಹೇಳಿ ಕೊಂಡಾಗ  ಕುಟುಂಬದಲ್ಲಿ ಭಾರೀ ವಿರೋಧ ವ್ಯಕ್ತ ಪಡಿಸಿದ್ದರು.

ಅಬ್ಬಬ್ಬಾ! ನಟಿ ಮಲ್ಲಿಕಾ ಶೆರಾವತ್‌ಗೆ ವಿದೇಶದಲ್ಲಿರುವ ಐಷಾರಾಮಿ ಬಂಗಲೆ ಹೇಗಿದೆ ನೋಡಿ..

ಇರುವುದು ಒಂದೇ ಜೀವನ. ಏನಾದರೂ ಸಾಧನೆ ಮಾಡಬೇಕು ಎಂದು ಮಲ್ಲಿಕಾ ರಾತ್ರೋ ರಾತ್ರಿ ಮನೆ ಬಿಟ್ಟು ಮುಂಬೈಗೆ ಹಾರಿ ಹೋಗಿದ್ದಾರೆ. ಮಲ್ಲಿಕಾ ನಿರ್ಧಾರದ ಬಗ್ಗೆ ತಂದೆ ಬೇಸರ ವ್ಯಕ್ತ ಪಡಿಸಿದ್ದರು. ಮನೆ ಬಿಟ್ಟು ಹೋಗಿದ್ದಕ್ಕೆ ಆಕೆಯನ್ನು ತಿರಸ್ಕರಿಸಿದ್ದಾರೆ. ಈ ಕಾರಣಕ್ಕೆ ತಾಯಿ ಮನೆತನದ ಹೆಸರು ತೆಗೆದುಕೊಂಡು, ರೀನಾ ಲಾಂಬಾ ಎಂಬ ಮೂಲ ಹೆಸರು ಬಿಟ್ಟು, ಮಲ್ಲಿಕಾ ಶರಾವತ್ ಆಗಿ ಬದಲಾಯಿಸಿಕೊಂಡರು. 

Bollywood Mallika Sherawat adopted her mother maiden name vcs

'ನೀನು ಫಿಲಂಗೆ ಹೋಗಿ ನಮ್ಮ ಪರಿವಾರದ ಹೆಸರು ಹಾಳು ಮಾಡುತ್ತೀಯಾ. ಹೀಗಾಗಿ ನಾನು ನಿನ್ನನ್ನು disown ಮಾಡುತ್ತೀನಿ ಎಂದರು. ಅದಿಕ್ಕೆ ನಾನು ನಿಮ್ಮ ಹೆಸರನ್ನು disown ಮಾಡುತ್ತೇನೆ. ನೀವು ಏನು ನನ್ನ ತಿರಸ್ಕರಿಸುವುದು. ಹೌದು ನೀವು ನನ್ನ ತಂದೆ ನಾನು ಗೌರವಿಸುತ್ತೇನೆ. ಐ ಲವ್ ಯೂ. ಆದರೆ ನಾನು ನನ್ನ ತಾಯಿ ಹೆಸರು ಬಳಸಿ ಕೊಳ್ಳುತ್ತೇನೆ,' ಎಂದು ಮಲ್ಲಿಕಾ ಘಟನೆ ಬಗ್ಗೆ ಮಾತನಾಡಿದ್ದಾರೆ.  ಇದಾದ ನಂತರ ಮಲ್ಲಿಕಾ ಎಲ್ಲೇ ಹೋದರೂ ಕುಟುಂಬ ನಿಮ್ಮನ್ನು ಸ್ವೀಕರಿಸಿದೆಯೇ, ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಖಾಸಗಿ ಸಂದರ್ಶನವೊಂದರಲ್ಲಿ 'ಕುಟುಂಬದವರು ನನ್ನನ್ನು ತಕ್ಷಣ ಒಪ್ಪಿಕೊಳ್ಳಲಿಲ್ಲ. ಈಗಲೂ ಅಸಮಾಧಾನವಿದೆ. ಹಾಗಂತ ವಯಸ್ಸಾದಂತೆ ಎಲ್ಲರೂ ಮೃದುವಾಗುತ್ತಾರಲ್ಲ. ಹಾಗೆಯೇ ನಮ್ಮ ಕುಟುಂಬದಲ್ಲೂ ಆಗಿದೆ,' ಎಂದು ಹೇಳಿದ್ದಾರೆ.

Follow Us:
Download App:
  • android
  • ios