ಬಾಲಿವುಡ್‌ ಚಿತ್ರರಂಗ ಒಂದು ಸುಂದರ ಪ್ರಪಂಚ. ನಟ-ನಟಿಯರಾಗಲು ಎದುರಾಗುವ ಕಷ್ಟಗಳನೆಲ್ಲಾ ಸಹಿಸಿಕೊಳ್ಳಬೇಕು . ಒಮ್ಮೆ ಸ್ಟಾರ್‌ ಗಿರಿ ಸಿಕ್ಕ  ನಂತರ ಹೇಳುವರಿರುವುದಿಲ್ಲ. ಸಿನಿಮಾ ಹೊರತು ಪಡಿಸಿ ಪ್ರೇಕ್ಷಕರಿಗೆ ಸುಲಭವಾಗಿ  ಹತ್ತಿರವಾಗಲು ಸಹಾಯ ಮಾಡುವುದು ಕಿರುತೆರೆ ಹಾಗೂ ವೆಬ್‌ ಸೀರಿಸ್‌. ಸಿನಿಮಾಗಳಲ್ಲಿ ಮಾತ್ರ ಕೇಳಿ ಬರುವ ಕಾಸ್ಟಿಂಗ್ ಕೌಚ್‌ ವೆಬ್‌ ಸೀರಿಸ್‌ನಲ್ಲೂ ಇರುತ್ತಾ? ಇಲ್ಲಿದೆ ನೋಡಿ...

ಆಡಿಷನ್‌ನಲ್ಲಿ ರೇಪ್‌ ಸೀನ್ ಮಾಡಿ ಎಂದಿದ್ದಕ್ಕೆ ರೂಮ್‌ನಿಂದ ಓಡಿ ಹೋದ ನಟಿ!

ಹಿಂದಿ ಕಿರುತೆರೆ ಹಾಗೂ ವೆಬ್‌ ಸೀರಿಸ್‌ನಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಮಾನ್ವಿ ಗೂಗ್ರ ಖಾಸಗಿ ಸಂದರ್ಶನದಲ್ಲಿ ನಿರ್ದೇಶಕನೊಬ್ಬ ಹೇಳಿದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ' ವೆಬ್‌ ಸೀರಿಸ್‌ ಕಥೆ ರೆಡಿಯಾಗಿದೆ ನೀವು ಅಭಿನಯಿಸಬೇಕೆಂದು ನಿರ್ದೇಶಕರು ಕರೆ ಮಾಡಿದರು. ಸಂಭಾವನೆ ಬಗ್ಗೆ ಮಾತನಾಡಿದರು. ನಾನು ಕಥೆ ಚೆನ್ನಾಗಿದ್ದರೆ  ನಟಿಸುವೆ ಎಂದು ಹೇಳಿದೆ  ಆದರೆ ಅವರು ನಾನು ಸಂಭಾವನೆ ಮೇಲೆಯೇ  ನಟಿಯರನ್ನು ಆಯ್ಕೆ ಮಾಡುತ್ತಿರುವುದು  ಎಂದರು. ಅವರು ಬೇಡಿಕೆ ಇಟ್ಟ ಸಂಭಾವನೆ ಕಡಿಮೆ ಇತ್ತು ಅದಕ್ಕೆ ನಾನು ಜಾಸ್ತಿ ಬೇಕೆಂದು ಹೇಳಿದೆ  ಅದಿಕ್ಕೆ ಅವರು ನೀವು ಕೇಳಿದಕ್ಕಿಂತ ಮೂರು ಪಟ್ಟು ಜಾಸ್ತಿ ಕೊಡುತ್ತೇವೆ ಆದರೆ ನೀವು ಕಾಂಪ್ರಮೈಸ್‌ ಅಗಬೇಕು ನೀವು ರೆಡಿನಾ ಎಂದು ಪ್ರಶ್ನೆ  ಮಾಡಿದರು' ಎಂದು ಮಾನ್ವಿ ಗೂಗ್ರ ಹೇಳಿಕೊಂಡಿದ್ದಾರೆ.

ಆಡಿಷನ್‌ಗೆ ಕರೆದು ನಟಿ ಮೇಲೆ ಅತ್ಯಾಚಾರ ಯತ್ನ? ಸಂಸ್ಥೆಯ ಹೆಸರು ಬಯಲು!

ಈ ಹಿಂದೆಯೂ #MeToo ಸಮಯದಲ್ಲಿ ಮಾನ್ವಿ ಗೂಗ್ರ ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದರು . ಮಾನ್ವಿ ಅವರನ್ನು ಆಡಿಷನ್‌ಗೆ ಕರೆದು 'Attempt to rape' ದೃಶ್ಯ  ಮಾಡುವಂತೆ ಒತ್ತಾಯಿಸಿದ್ದರಂತೆ. 'ಆಡಿಷನ್‌ ವೇಳೆ ನನಗೆ  'Attempt to rape' ದೃಶ್ಯ  ಮಾಡುವುದಕ್ಕೆ ಹೇಳಿದರು ಆ ರೂಮಿನಲ್ಲಿ ಹಾಸಿಗೆ ಇತ್ತು ಹಾಗೂ ಇಬ್ಬರಿದ್ದರು' ಎಂದು ಹೇಳಿಕೊಂಡಿದ್ದಾರೆ