ಚಿತ್ರರಂಗದಲ್ಲಿ ಒಂದು ಮಟ್ಟಕ್ಕೆ ಏರಲು ನಟಿಯರು ಸಾಕಷ್ಟು ಏಳು ಬೀಳುಗಳನ್ನು ಎದುರಿಸಬೇಕಾಗುತ್ತದೆ. ಪ್ರತಿ ತಿಂಗಳು ಒಂದೊಂದು ಚಿತ್ರದ ಮೂಲಕ ಹೊಸ ಪ್ರತಿಭೆಗಳು ಪರಿಚಯವಾಗುತ್ತದೆ ಅದರಲ್ಲೂ ಬಿ-ಟೌನೇ ಒಮ್ಮೆ ಆ ನಟಿಯನ್ನು ತಿರುಗಿ ನೋಡುವಂತೆ ಮಾಡುವುದು ಸಾಮಾನ್ಯ ವಿಚಾರವಲ್ಲ. 

#MeToo ಗೆ ಒಂದು ವರ್ಷ; 'ವೀ ದ ವುಮೆನ್' ಸೆಮಿನಾರ್‌ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ

 

ಚಿತ್ರರಂಗಕ್ಕೆ ಕಾಲಿಟ್ಟ ನಟಿಯರು ಅಲ್ಲೊಮ್ಮೆ ಇಲ್ಲೊಮ್ಮೆ ಕಾಸ್ಟಿಂಗ್ ಕೌಚ್‌ ಎದುರಿಸಿದ ಪ್ರಕರಣಗಳು ಕೇಳಿ ಬರುತ್ತವೆ. ಕೆಲವೊಂದು ಬೆಳಕಿಗೆ ಬರುತ್ತದೆ. ಇನ್ನು ಕೆಲವೊಂದು ಅಲ್ಲಿಯೇ ತಣ್ಣಗಾಗುತ್ತದೆ. ವರ್ಷಗಳ ಹಿಂದೆ ಶುರುವಾಗ #MeToo ಅಭಿಯಾನ ಇಂತಹ ಘಟನೆಗಳನ್ನು ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳಲು ವೇದಿಕೆ ಕಲ್ಪಿಸಿತು. ಸಾರ್ವಜನಿಕ ಬೆಂಬಲವೂ ವ್ಯಕ್ತವಾಯಿತು. ಹಾಗಾಗಿ ಎಷ್ಟೋ ಹೆಣ್ಣುಮಕ್ಕಳು ತಮ್ಮ ಅನುಭವವನ್ನು ಹೇಳಿಕೊಳ್ಳಲು ಮುಂದೆ ಬಂದರು. ಸಾಕಷ್ಟು ಪ್ರಕರಣಗಳನ್ನು ನಾವು ನೋಡಿದ್ದೇವೆ.

ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

 

ಬಾಲಿವುಡ್ ನಟಿ ಮಾನ್ವಿ ಗೂಗ್ರ 'ಉಜ್ಡಾ ಚಮನ್' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಾತನಾಡುವಾಗ ಆಡಿಷನ್‌ ವೇಳೆ ನಡೆದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಚಿತ್ರರಂಗಕ್ಕೆ ಪ್ರವೇಶಿಸಲು ಪರದಾಡುತ್ತಿದ್ದಾಗ ನಟಿ ಮಾನ್ವಿ ಆಡಿಷನ್‌ವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿದ್ದ ವ್ಯಕ್ತಿಗಳು ಆಕೆಗೆ 'Attempt to rape' ದೃಶ್ಯ ಮಾಡುವಂತೆ ಒತ್ತಾಯಿಸಿದ್ದರಂತೆ.

 

'ನನಗೆ ಇನ್ನೂ ಜ್ಞಾಪಕ ಇದೆ. ಆಡಿಷನ್‌ ವೇಳೆ ನನಗೆ Attempt to rape ದೃಶ್ಯ ಮಾಡಿ ಎಂದಾಗ ನನಗೆ ಮಾಡಲಾಗದೆ ರೂಂಯಿಂದ ಓಡಿ ಹೋದೆ. ಆಡಿಷನ್‌ ನಡೆಯುತ್ತಿದ್ದ ರೂಮಿನಲ್ಲಿ ಇಬ್ಬರಿದ್ದರು. ಅಲ್ಲಿ ಹಾಸಿಗೆ ಕೂಡ ಇತ್ತು' ಎಂದು ಹೇಳಿಕೊಂಡಿದ್ದಾರೆ.

ಮೀ ಟೂ ಬಳಿಕ ಮಹಿಳೆಯರೊಂದಿಗೆ ಮಾತಾಡಲೂ ಪುರುಷರಿಗೆ ಭಯ! .

'ಉಜ್ಡಾ' ಚಿತ್ರದಲ್ಲಿ ಮಾನ್ವಿ ದಪ್ಪ ಇರುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'one more shots please' ವೆಬ್‌ ಸೀರಿಸ್‌ ಮೂಲಕ ಜನರಿಗೆ ಚಿರ ಪರಿಚಯವಾದ ಮಾನ್ವಿ 2007ರಲ್ಲಿ ಕಿರುತೆರೆಯ 'ಧೂಮ್ ಮಜಾಹೋ ಧೂಮ್'ನಲ್ಲಿ ಸ್ಪರ್ಧಿಯಾಗಿದ್ದರು.