3 ವರ್ಷಗಳ ಹಿಂದೆ ಆಟೋಬಯೋಗ್ರಫಿ ಬರೆದಿದ್ದ ಕರಣ್‌ ಜೋಹಾರ್‌ ಈಗ ಪುಟ್ಟ ಮಕ್ಕಳಿಗಾಗಿ ಫಿಚರ್‌ ಬುಕ್ ಬರೆದಿದ್ದಾರೆ.  

ಬಾಲಿವುಡ್‌ ಖ್ಯಾತ ನಿರ್ದೇಶಕ ಕರಣ್ ಜೋಹಾರ್‌ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ತುಂಬಾನೇ ಕಾಮನ್‌ ಆಗಿದೆ. ಅದರಲ್ಲೂ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ನಂತರ ನೆಟ್ಟಿಗರು ಕರಣ್ ಏನೇ ಅಪ್ಲೋಡ್‌ ಮಾಡಿದರೂ ಕಾಲು ಎಳೆಯಲು ಶುರು ಮಾಡಿದ್ದಾರೆ. 

ಸುಮಾರು 3 ತಿಂಗಳ ಕಾಲ ಡಿಜಿಟಲ್ ಲೈಫ್‌ಯಿಂದ ದೂರ ಉಳಿದಿದ್ದ ಕರಣ್ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಕಮ್‌ಬ್ಯಾಕ್‌ ಮಾಡಿದ್ದರು. ಈ ಅವಧಿಯಲ್ಲಿ ತಮ್ಮ ಮಕ್ಕಳನ್ನು ಪ್ರೇರಣೆಯಾಗಿಟ್ಟುಕೊಂಡು ಮಕ್ಕಳ ಪುಸ್ತಕ ಬರೆದಿದ್ದಾರೆ.

ಕರಣ್‌ನಿಂದ ಪದ್ಮಶ್ರೀ ಹಿಂಪಡೆಯಲು ಸರ್ಕಾರಕ್ಕೆ ಕಂಗನಾ ಮನವಿ

'ನಿಮ್ಮೆಲ್ಲರೊಂದಿಗೆ ಒಂದು ಸಂತೋಷದ ವಿಚಾರ ಹಂಚಿಕೊಳ್ಳುತ್ತಿದ್ದು 'The big thoughts of little love' ಎಂಬ ನನ್ನ ಮೊದಲ ಮಕ್ಕಳ ಪುಸ್ತಕ ಲಾಂಚ್ ಮಾಡಲು ತಯಾರಿ ನಡೆಸುತ್ತಿರುವೆ. ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ' ಎಂದು ಬರೆದುಕೊಂಡಿದ್ದಾರೆ. ಫಿಚರ್‌ ಸ್ಟೋರಿ ಬುಕ್‌ನಲ್ಲಿ ತನ್ನ ಅವಳಿ ಮಕ್ಕಳು ಅವ್‌ ಹಾಗೂ ಖುಷಾ ಅವರೇ ಸ್ಟಾರ್ಸ್ ಆಗಿ ತೋರಿಸಲಾಗಿದೆ. ಮಕ್ಕಳ ಮನಸ್ಥಿತಿ, ಅವರ ಆಯ್ಕೆ ಹೇಗಿರುತ್ತದೆ ಎಂದೆಲ್ಲಾ ಹೇಳಲಾಗಿದೆ.

Scroll to load tweet…

 ಪುಸ್ತಕದ ಬಗ್ಗೆ ಘೋಷಣೆ ಮಾಡಿದ ನಂತರ ನೆಟ್ಟಿಗರು ಕರಣ್ ಕಾಲು ಎಳೆಯಲು ಪ್ರಾರಂಭಿಸಿದ್ದು ಕಾಮೆಂಟ್‌ನಲ್ಲಿ ಸುಶಾಂತ್ ಆತ್ಮಹತ್ಯೆ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದರು. ಇನ್ನು ಕೆಲವರು ಸಿನಿಮಾದಲ್ಲಿ ಮಾತ್ರ ನೆಪೋಟಿಸಂ ಎಂದುಕೊಂಡರೆ ಮಕ್ಕಳ ಪುಸ್ತಕಕ್ಕೂ ನಿಮ್ಮ ಮಕ್ಕಳನ್ನು ಬಳಸಿಕೊಂಡಿದ್ದೀರಾ? ಓದುಗರಿಗೆ ಇವೆಲ್ಲಾ ಮ್ಯಾಟರ್‌ ಆಗುವುದಿಲ್ಲ ಎಂದು ಕಾಲು ಕೆಳೆದಿದ್ದಾರೆ.