ಬೆಂಗಳೂರು (ಮಾ. 23): ಮಣಿಕರ್ಣಿಕಾ ಯಶಸ್ಸಿನ ನಂತರ ಕ್ವೀನ್ ಕಂಗನಾ ರಾಣಾವತ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಕುರಿತ ಜೀವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಮಹಿಳೆ ಮುಟ್ಟಿದ್ದೆಲ್ಲಾ ಮೈಲಿಗೆಯಲ್ಲ; ಸ್ಮೃತಿಗೆ ರಮ್ಯಾ ಟಾಂಗ್!

ಇಂದು ಕಂಗನಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಜಯಲಲಿತಾ ಬಯೋಪಿಕ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ಈ ಚಿತ್ರ ದ್ವಿಭಾಷೆಯಲ್ಲಿ ಬರುತ್ತಿದ್ದು ತಮಿಳಿನಲ್ಲಿ ತಲೈವಿ ಎಂದು ಹೆಸರಿಟ್ಟರೆ ಹಿಂದಿಯಲ್ಲಿ ಜಯಾ ಎಂದು ಹೆಸರಿಡಲಾಗಿದೆ. ಮದ್ರಾಸಪಟ್ಟಿನಂ ಹಾಗೂ ದೀವಿಯಾ ತಿರುಮಗಲ್ ಖ್ಯಾತಿಯ ನಿರ್ದೇಶಕ ಎ ಎಲ್ ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. 

ಸನ್ನಿ ಕಲರ್ ಫುಲ್ ಹೋಳಿ ಫೋಟೋ ವೈರಲ್!

ಜಯಲಲಿತಾ ಈ ಶತಮಾನದ ಯಶಸ್ವೀ ಮಹಿಳೆ ಸಾಧಕಿ. ಅವರೊಬ್ಬ ಸೂಪರ್ ಸ್ಟಾರ್. ಮುತ್ಸದ್ಧಿ ರಾಜಕಾರಣಿ. ಇವರ ಜೀವನ ಚಿತ್ರವನ್ನು ತೆರೆ ಮೇಲೆ ತರುತ್ತಿರುವುದು ಒಳ್ಳೆಯ ಯೋಚನೆ. ಜಯಲಲಿತಾ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.