ಬಾಲಿವುಡ್‌ ಬೋಲ್ಡ್‌ ನಟಿ ಕಂಗಾನ ಮನೆಯಲ್ಲಿ ಧಾರ್ಮಿಕ ಸಮಾರಂಭಗಳು ನಡೆಯುತ್ತಿವೆ.  ನಟಿಯ ಆರೋಗ್ಯ ಹಾಗೂ ಸುರಕ್ಷತೆಗಾಗಿ ತಾಯಿ ಮನೆಯಲ್ಲಿ ಮಹಾಮೃತ್ಯುಂಜಯ ಜಪ ಪಠಿಸಿ,  ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಭಾಗಿಯಾಗಿದ್ದ ಕಂಗನಾ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

'ನಮ್ಮ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ನನ್ನ ತಾಯಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಈ ಕಾರಣಕ್ಕೆ 1 ಲಕ್ಷ 15 ಸಾವಿರ ಸಲ ಮಹಾಮೃತ್ಯುಂಜಯ ಜಪ ಪಠಿಸಿದ್ದಾರೆ.  ಈ ಪೂಜೆ ಇಂದಿಗೆ ಸಂಪೂರ್ಣವಾಗಿದೆ. ನನ್ನ ಕುಟುಂಬಕ್ಕೆ ಧನ್ಯವಾದಗಳು. ಹರ ಹರ ಮಹಾದೇವ್, ಕಾಶಿ ವಿಶ್ವನಾಥ್‌ ಮಹಾರಾಜ್‌ ಕಿ ಜೈ' ಎಂದು ತಮ್ಮ ಒಳಿತಿಗಾಗಿ ನಡೆದ ಪೂಜೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಜನುಮವೇ ಆಹಾ ದೊರಕಿತೆ ರುಚಿ ಸವಿಯಲು' ಕಂಗನಾ ಕುಟುಂಬದ ಬಿಸಿಯೂಟ!

ಶ್ವೇತ ವರ್ಣದ ಕುರ್ತಾ-ಸಲ್ವಾರ್ ಧರಿಸಿರುವ ಕಂಗನಾ ತಾಯಿ ಹಾಗೂ ಸಹೋದರಿಯ ಮಗನ ಜೊತೆ ಪೂಜೆ ಮಾಡುತ್ತಿರುವುದನ್ನು ನಾವು ನೋಡಬಹುದು. ಪುಟ್ಟ ಹುಡುಗ ಪೃಥ್ವಿರಾಜ್‌ ಗಂಟೆ ಹೊಡೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.

 

ಸುಶಾಂತ್‌ ಸಿಂಗ್ ಸಾವಿನ ಬಗ್ಗೆ ಬೋಲ್ಡ್‌ ಹೇಳಿಕೆ ನೀಡಿದ ಕಂಗನಾ ಸಾರ್ವಜನಿಕರ ದೃಷ್ಠಿಯಲ್ಲಿ ವಂಡರ್‌ ವುಮೆನ್‌. ಆದರೂ ಬಾಲಿವುಟ್‌ ಗ್ಯಾಂಗ್‌ನಲ್ಲಿ ಮಾತ್ರ ಒಬ್ಬಂಟಿ. ನೆಪೋಟಿಸಂ ಹಾಗೂ ಬಾಲಿವುಡ್‌ ಮಾಫಿಯಾ ಬಗ್ಗೆ ನೀಡಿದ ಹೇಳಿಕೆ ಬಿ-ಟೌನ್‌ನಲ್ಲಿ ದೊಡ್ಡ ಚರ್ಚೆ ಸೃಷ್ಟಿಸಿತ್ತು. ಇತ್ತೀಚಿಗೆ ನಟಿ ಕಂಗನಾ ತಮ್ಮ ರಾಜಕೀಯ ಪ್ರವೇಶ ವಿಚಾರದ ಬಗ್ಗೆಯೂ ಟ್ಟೀಟ್‌ ಮಾಡಿದ್ದರು.

ರಾಜಕೀಯ ಹೇಳಿಕೆ ಬೆನ್ನಲ್ಲೇ ಕಂಗಾನ ನಿವಾಸದ ಬಳಿ ಗುಂಡಿನ ಸದ್ದು! 

'ನಂಗೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಚುನಾವಣೆಗೆ ನಿಲ್ಲಲು ಆಫರ್ಸ್ ಬಂದಿದ್ದವು. ಮೋದಿ ಜೀ ಅವರ ಪ್ರತಿಯೊಂದೂ ಕೆಲಸಕ್ಕೆ ಬೆಂಬಲ ನೀಡುತ್ತೇನೆ, ಎಂದು ಹೇಳುತ್ತಾರೋ ಅವರಿಗೆ ಈ ಟ್ಟೀಟ್. ಸತತ 15 ವರ್ಷಗಳ ಕಾಲ ನನ್ನ ತಾತ ಕಾಂಗ್ರೆಸ್‌ MLAಆಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ನನ್ನ ಕುಟುಂಬ ಹೆಚ್ಚಿನ ಜನಪ್ರಿಯತೆ ಪಡೆದಿರುವ ಕಾರಣ ನನಗೆ ವರ್ಷಕ್ಕೆ ಒಂದಾದರೂ ಚುನಾವಣೆಗೆ ಸ್ಪರ್ಧಿಸುವಂತೆ ಆಫರ್‌ ಬರುತ್ತದೆ. ಕಾಂಗ್ರೆಸಿನಿಂದ ಬರುತ್ತಿತ್ತು. ಆದರೆ ನಾನು ಯಾವಾಗ ಮಣಿಕರ್ಣಿಕಾ ಸಿನಿಮಾದಲ್ಲಿ ಅಭಿನಯಿಸಿದೆನೋ ಅಂದಿನಿಂದ ಬಿಜೆಪಿಯಿಂದಲೂ ಆಫರ್‌ ಬರಲು ಪ್ರಾರಂಭಿಸಿತು.  ನಾನು ನನ್ನ ಸ್ವ ಇಚ್ಛೆಯಿಂದ ಕಲಾವಿದೆ ವೃತ್ತಿ ಆಯ್ಕೆ ಮಾಡಿಕೊಂಡಿದ್ದು.  ನಾನು ಎಂದಿಗೂ ರಾಜಕೀಯಕ್ಕೆ ಕಾಲಿಡುವುದಿಲ್ಲ. ರಾಜಕಾರಣಿಗಳು ಮಾಡುವ ಕೆಲಸ ಇಷ್ಟವಾದರೆ ನಾನು ಅವರನ್ನು ಬೆಂಬಲಿಸುವುದು  ನನಗೆ ಇಷ್ಟ. ಜನರು ಸುಖಾಸುಮ್ಮನೆ ಟ್ರೋಲ್‌ ಮಾಡುವುದನ್ನು ನಿಲ್ಲಿಸಬೇಕು' ಎಂದು ಬರೆದುಕೊಂಡಿದ್ದರು.

ಲಾಕ್‌ಡೌನ್ ಸಮಯದಲ್ಲಿ ತನ್ನ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಕಂಗನಾ ಬಿಂದಾಸ್ ಆಗಿ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಕುಟುಂಬದೊಂದಿಗೆ ಅತ್ಯುತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ. 

ಕುದುರೆ ಕ್ವೀನ್‌ ಆದ್ರು ಮಿಲ್ಕಿ ಬ್ಯೂಟಿ ಪ್ರಣೀತಾ!

"