ಬಾಲಿವುಡ್‌ ಮಾಫಿಯಾ, ನೆಪೋಟಿಸಂ ಹಾಗೂ ಸುಶಾಂತ್ ಸಿಂಗ್ ಸಾವಿನ ವಿಚಾರದ ಬಗ್ಗೆ ಬ್ಯಾಕ್ ಟು ಬ್ಯಾಕ್ ಚರ್ಚೆ ನಡೆಸುತ್ತಲೇ  ಟಾಕ್ ಆಫ್‌ ದಿ ಟೌನ್ ಆಗಿರುವ ನಟಿ ಕಂಗನಾ ರಣಾವತ್ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಲಾಕ್‌ಡೌನ್‌ ಪ್ರಾರಂಭದಿಂದಲ್ಲೂ ಮನಾಲಿ ನಿವಾದಸಲ್ಲಿ ವಾಸವಿರುವ ಕಂಗನಾ ದಿನೇ ದಿನೆ ಸಂಕಷ್ಟಗಳು ಎದುರಾಗುತ್ತಿದೆ. ಅದರಲ್ಲೂ ಜುಲೈ 31ರಂದು ಕೇಳಿ ಬಂದ ಗುಂಡಿನ ಶಬ್ದಕ್ಕೆ ಗಾಬರಿಗೊಂದು ಪೊಲೀಸರ ಸಹಾಯ ಬೇಡಿದ್ದಾರೆ.

ಕಂಗನಾಳ ಒಳಗಿನವರು-ಹೊರಗಿನವರು ಚರ್ಚೆಗೆ ವೈಬ್ರೇಟರ್‌ ಬೆಡಗಿ ಸ್ವರಾ ಪ್ರತಿಕ್ರಿಯೆ‌

ಈ ವಿಚಾರದ ಬಗ್ಗೆ ಸ್ವತಃ ಕಂಗನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  ಜುಲೈ 31ರಂದು 11.30ಕ್ಕೆ ಕೋಣೆಯಲ್ಲಿದ್ದ ಕಂಗನಾಗೆ ಗುಂಡಿನ ಶಬ್ದ ಕೇಳಿಸಿದ ತಕ್ಷಣವೇ ತಮ್ಮ ಭದ್ರತಾ ಸಿಬ್ಬಂದಿಗಳನ್ನು  ಎಚ್ಚರಿಸಿದ್ದಾರೆ ಆನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ ಬಾವುಲಿಗಳನ್ನು ಹೆದರಿಸುವುದಕ್ಕೋ ಅಥವಾ ಇನ್ನಾವುದೋ ಪ್ರಾಣಿಗಳನ್ನು ಹೆದರಿಸಲು  ಹೀಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆಯಂತೆ. ಅಲ್ಲಿಗೆ ಸುಮ್ಮನೆ ಬಿಡದ ಕಂಗನಾ ತಮ್ಮ ನೆರೆಹೊರೆ ನಿವಾಸಿಗಳಲ್ಲಿಯೂ ಶಬ್ದದ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆದರೆ ಅವರಾರೂ ಬಂದೂಕು ಚಲಾಯಿಸಿಲ್ಲ ಎಂದು ಹೇಳಿದ್ದಾರೆ.

ಕಂಗನಾ ರಣಾವತ್‌ - ರಾಣಾ ದಗ್ಗುಬಾಟಿ ನಡುವೆ ಮಾತಿನ ಚಕಾಮಕಿ; ಏನಿದು ಅಸಲಿ ಕಥೆ?

'ನನಗೆ ಕೋಣೆಯ ಎದುರಾಗಿ ಎರಡು ಗನ್ ಶಾಟ್‌ಗಳು ಕೇಳಿದವು. ನನಗೆ ಗುಂಡಿನ ಶಬ್ಧ ಪರಿಚಯವಿದೆ. ಎರಡೂ ಗನ್‌ಶಾಟ್‌ ನಡುವೆ ಸುಮಾರು ಎರಡು ಸೆಕೆಂಡ್ ಅಂತರವಿತ್ತು ಅಷ್ಟೆ. ನನ್ನ ಕಾಂಪೌಂಡ್‌ ಹೊರಗಿನಿಂದ ಇದನ್ನು ಯಾರೋ ಮಾಡಿರುವುದು' ಎಂದು ಕಂಗನಾ ಹೇಳಿಕೆ ನೀಡಿದ್ದಾರೆ.