ಸ್ವಜನಪಕ್ಷಪಾತ ವಿರೋಧಿ ಕಂಗನಾ ರಣಾವತ್‌ ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಜೊತೆ ನಡೆದ ವರ್ಚುಯಲ್ ಮೀಟಿಂಗ್ ನಲ್ಲಿ ಅಚ್ಚರಿ ಬೆಳವಣಿಗೆ ಇದು!

ಬಾಲಿವುಡ್‌ ಬೋಲ್ಡ್‌ ಕ್ವೀನ್‌ ಕಂಗನಾ ರಣಾವತ್ ಅನೇಕ ವಿಚಾರಗಳಿಗೆ ಟಾಕ್ ಆಫ್‌ ದಿ ಟೌನ್ ಆಗಿದ್ದಾರೆ. ಅದರಲ್ಲೂ ಸುಶಾಂತ್ ಸಿಂಗ್ ಸಾವಿನ ನಂತರ ಸುಶಾಂತ್‌ಗಿಂತಲ್ಲೂ ಹೆಚ್ಚಾಗಿ ಕೇಳಿ ಬರುತ್ತಿರುವುದು ಕಂಗನಾ ಹೆಸರೇ.

ಕರಣ್ ಜೋಹಾರ್, ಮಹೇಶ್‌ ಭಟ್‌, ಸಲ್ಮಾನ್ ಖಾನ್‌ ಮತ್ತು ಬಾಲಿವುಡ್‌ ಮಾಫಿಯಾ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಕ್ಕೆ ನೆಟ್ಟಿಗರ ದೃಷ್ಟಿಯಲ್ಲಿ ಧೀರೆ ಎಂದು ಕರೆಸಿಕೊಂಡಿದ್ದಾರೆ. ಈ ಚರ್ಚೆ ನಡುವೆ ನಟಿ ಕಂಗನಾ ಮತ್ತು ನಟ ರಾಣಾ ದಗ್ಗುಬಾಟಿ ಲೈವ್ ಚಾಟ್‌ನಲ್ಲಿ ಕಾಣಿಸಿಕೊಂಡಾಗ ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟ ಫೋಟೋ ಈಗ ಫುಲ್ ಕ್ಲಾರಿಟಿ ನೀಡುತ್ತಿದೆ.

ಬಾಲಿವುಡ್ ನೆಪೊಟಿಸಂ: ಕ್ವೀನ್ ಕಂಗನಾ ಸಪೋರ್ಟ್‌ಗೆ ನಿಂತ ಸೋನು..!

ಇನ್‌ಸ್ಟಾ ಪೋಸ್ಟ್‌:

View post on Instagram

ವರ್ಚುಯಲ್ ಮಾತುಕತೆಗೆ ರೆಡಿಯಾಗಿರುವೆ. ರಾಣಾ ದಗ್ಗುಬಾಟಿ ಮುಂದಿನ ಸರ್ಪ್ರೈಸಿಂಗ್ ಪ್ರಾಜೆಕ್ಟ್‌ ಬಗ್ಗೆ ಚರ್ಚೆ' ಎಂದು ಬರೆದುಕೊಂಡಿದ್ದಾರೆ. ಕಂಗನಾ ರಾಣಿ ಪಿಂಕ್ ಡ್ರೆಸ್‌ ಮತ್ತು ನ್ಯೂಡ್ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಮೇಘಾಲಯದಲ್ಲಿರುವ ಕಂಗನಾ ತಮ್ಮ ನಿವಾಸದೊಳಗೆ ಫೋಟೋ ಶೂಟ್‌ ಮಾಡಿಸಿದ್ದಾರೆ. ಕಂಗನಾ ಲುಕ್‌ ಮತ್ತು ಮನೆಯ ಇನ್‌ಟೀರಿಯರ್‌ ಎಲ್ಲರ ಕಣ್ಸೆಳೆದಿದೆ. 

ಲಾಕ್‌ಡೌನ್‌ ಸಡಿಲಿಕೆ ಹಾಗೂ ಸುಶಾಂತ್ ಸಿಂಗ್ ಸಾವಿನ ಬಗೆಗಿನ ವಿವಾದ ಪೂರ್ಣಗೊಂಡ ನಂತರ ಅರವಿಂದ್ ಸ್ವಾಮಿ ನಿರ್ದೇಶನದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಉಳಿದ ಭಾಗಗಳ ಚಿತ್ರೀಕರಣದಲ್ಲಿ ಪಾಲ್ಗೊಳಲಿದ್ದಾರೆ ಎನ್ನಲಾಗಿದೆ. ಕಂಗನಾ ಮೇಘಾಲಯದಲ್ಲಿರುವ ಕಾರಣ ಚಿತ್ರೀಕರಣದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ಆಕೆಯ ಜಯಲಲಿತಾ ಲುಕ್‌ ಮಾತ್ರ ಮಿಶ್ರ ಅಭಿಪ್ರಾಯ ಪಡೆದುಕೊಂಡಿತ್ತು.