ಲಾಕ್‌ಅಪ್ ಶೋ ಗೆದ್ದು ಬೀಗಿದ ಮುನಾವರ್ ಫರೂಖಿ; ಗಳಿಸಿದ ಹಣವೆಷ್ಟು?
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಡೆಸಿಕೊಡುತ್ತಿದ್ದ ಲಾಕ್ ಅಪ್ ರಿಯಾಲಿಟಿ ಶೋಗೆ(Lock Upp Reality Show) ಅದ್ದೂರಿ ತೆರೆ ಬಿದ್ದಿದೆ. ಈ ಶೋನ ಫಿನಾಲೆೆ ಪೂರ್ಣಗೊಂಡಿದ್ದು ಮುನಾವರ್ ಫರೂಖಿ(Munawar Faruqui) ಟ್ರೋಫಿ ಗೆದ್ದು ಬೀಗಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಡೆಸಿಕೊಡುತ್ತಿದ್ದ ಲಾಕ್ ಅಪ್ ರಿಯಾಲಿಟಿ ಶೋಗೆ(Lock Upp Reality Show) ಅದ್ದೂರಿ ತೆರೆ ಬಿದ್ದಿದೆ. ಈ ಶೋ ನೇರವಾಗಿ ಒಟಿಟಿಯಲ್ಲಿ ಪ್ರಸಾರವಾಗುತ್ತಿತ್ತು. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಲಾಕ್ ಅಪ್ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗವಿತ್ತು. ಇದೀಗ ಈ ಶೋನ ಫಿನಾಲೆೆ ಪೂರ್ಣಗೊಂಡಿದ್ದು ಮುನಾವರ್ ಫರೂಖಿ(Munawar Faruqui) ಟ್ರೋಫಿ ಗೆದ್ದು ಬೀಗಿದ್ದಾರೆ. ಶನಿವಾರ(ಮೇ 7) ರಾತ್ರಿ ನಡೆದ ಅದ್ದೂರಿ ಫಿನಾಲೆಯಲ್ಲಿ ಮುನಾವರ್ ಗೆಲುವಿನ ನಗೆ ಬೀರಿದ್ದಾರೆ. ಲಾಕಪ್ ಶೋನ ಮೊದಲ ಕಪ್ ಎತ್ತಿ ಹಿಡಿದ್ದಾರೆ. ಅಂದಹಾಗೆ ಅಭಿಮಾನಿಗಳ ಕಡೆಯಿಂದ ಮುನಾವರ್ ಅವರಿಗೆ ಬರೋಬ್ಬರಿ 18 ಲಕ್ಷ ವೋಟ್ ಸಿಕ್ಕಿತ್ತು.
ಲಾಕಪ್ ಶೋನಲ್ಲಿ ಅನೇಕ ವಿವಾದಾತ್ಮಕ ಸ್ಪರ್ಧಿಗಳೇ ಭಾಗವಾಹಿಸಿದ್ದರು. ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಶೋ ಸ್ಪರ್ಧಿಗಳ ವೈಯಕ್ತಿಕ ವಿಚಾರಗಳು ಸಹ ಬಹಿರಂಗವಾಗಿದೆ. ಜೊತೆಗೆ ಕಂಗನಾ ನಿರೂಪಣೆಯ ಶೈಲಿ ಕೂಡ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿತ್ತು. ಸುಮಾರು 70ಕ್ಕೂ ಅಧಿಕ ದಿನಗಳು ಪ್ರಸಾರವಾದ ಈ ಶೋಗೆ ಈಗ ಅದ್ದೂರಿ ತೆರೆ ಬಿದ್ದಿದೆ. ಈ ಜನಪ್ರಿಯ ಶೋಗೆ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಏಕ್ತಾ ಕಪೂರ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದರು.
ಪಾಯಲ್ ರೋಹಟಿಗೆ ಮೊದಲ ರನ್ನರ್ ಅಪ್ ಆಗಿದ್ದಾರೆ. ಅಂಜಲಿ ಅರೋರ ಎರಡನೇ ರನ್ನರ್ ಆಗಿದ್ದಾರೆ. ಇನ್ನು ಪ್ರಿನ್ಸ್ ನರುಲಾ ಸ್ಪರ್ಧಿ ಆಗಿರಲಿಲ್ಲ. ಸಮಸ್ಯೆಗಳನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಅವರನ್ನು ಶೋಗೆ ಕಳುಹಿಸಲಾಗಿತ್ತು ಎಂದು ಕಂಗನಾ ಬಹಿರಂಗ ಪಡಿಸಿದರು. ಕಪ್ ಗೆಲ್ಲದಿದ್ದರೂ ಆಲ್ಟ್ ಬಾಲಾಜಿ ಅವರ ಲಾಕಪ್ ಕಡೆಯಿಂದ ಅವರಿಗೆ ಪ್ರಾಜೆಕ್ಟ್ ಒಂದನ್ನು ಆಫರ್ ಮಾಡಲಾಗಿದೆ. ಈ ಶೋ ಮುಗಿಯುತ್ತಿದ್ದಂತೆ ಮುನಾವರ್ ಮತ್ತೊಂದು ಶೋಗೆ ರೆಡಿಯಾಗುತ್ತಿದ್ದಾರೆ ಎನ್ನಲಾಗಿದೆ. ಹೌದು, ಹಿಂದಿಯ ಮತ್ತೊಂದು ಜನಪ್ರಿಯ ಶೋ ಖತ್ರೋಂ ಕಿ ಖಿಲಾಡಿ 12 ಶೋನಲ್ಲಿ ಅವರು ಸ್ಪರ್ಧಿ ಆಗಲಿದ್ದಾರೆ ಎಂದು ವರದಿಯಾಗಿದೆ.
ನಾನು ಯಾವತ್ತು ಕಡಿಮೆ ಸಂಭಾವನೆ ಪಡೆದಿಲ್ಲ; ವೇತನ ಸಮಾನತೆ ಬಗ್ಗೆ ಕಂಗನಾ ಖಡಕ್ ಮಾತು
ಈ ಶೋನಲ್ಲಿ ಪೂನಂ ಪಾಂಡೆ, ಸಾರಾ ಖಾನ್, ಸೈಶಾ ಶಿಂಧೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 7 ವಾರಗಳ ಕಾಲ ಕರಣ್ ಕುಂದ್ರ ಜೈಲರ್ ಆಗಿ ನಟಿಸಿದ್ದರು. ಶುಕ್ರವಾರದ ಕೊನೆಯ ಸಂಚಿಕೆಯಲ್ಲಿ ವಾರ್ಡನ್ ಆಗಿ ಕಾಣಿಸಿಕೊಂಡಿದ್ದರು.
Salman Khan ಈದ್ ಪಾರ್ಟಿಯಲ್ಲಿ Kangana Ranaut, ಸಖತ್ ಖುಷಿಯಲ್ಲಿದ್ದ ನಟಿ!
ಕಂಗನಾ ಸಿನಿಮಾ ಬಗ್ಗೆ ಹೇಳುವುದಾರದೆ
ಕಂಗನಾ ರಣಾವತ್ ಸದ್ಯ ಧಾಖಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ತೇಜಸ್ ಸಿನಿಮಾದ ಚಿತ್ರೀಕರಣ ಸಹ ಮುಗಿಸಿದ್ದಾರೆ. ಜೊತೆಗೆ ನಿರ್ದೇಶನ ಮತ್ತು ನಿರ್ಮಾಣ ಕಡೆಯು ಮುಖಮಾಡಿದ್ದಾರೆ. ಟಿಕು ವೆಡ್ಸ್ ಶೇರು ಸಿನಿಮಾಗೆ ಕಂಗನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಕಿ ಅವನೀತ್ ಕೌರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮಣಿಕರ್ಣಿಕ ರಿಟರ್ನ್ ಸಿನಿಮಾಗೂ ಕಂಗನಾ ಬಂಡವಾಳ ಹೂಡಿದ್ದಾರೆ.