ವಿಚ್ಛೇದನದ ನಂತರ ಯುವ ನಟಿ ಜೊತೆ ಕಾಣಿಸಿಕೊಂಡು ಬಾಲಿವುಡ್ ಹ್ಯಾಂಡ್ಸಮ್ ಮ್ಯಾನ್. ಯಾರು ಈ ಸಾಬಾ ಆಜಾದ್?
ಬಾಲಿವುಡ್ ಸೆಲೆಬ್ರಿಟಿಗಳು ಡಿವೋರ್ಸ್ (Divorce) ನಂತರ ಪ್ಯಾರಾಜಿಗಳ ಕಣ್ಣು ಸದಾ ಅವರ ಮೇಲಿರುತ್ತದೆ. ಎಲ್ಲೇ ಹೋದರೂ, ಯಾರ ಜೊತೆ ಕಾಣಿಸಿಕೊಂಡರೂ ಸುದ್ದಿ ಆಗುತ್ತಾರೆ. ವೈಯಕ್ತಿಕ ಜೀವನವನ್ನು (Perssonal Life) ಅಷ್ಟು ಸುಲಭವಾಗಿ ಮುಚ್ಚಿಡಲು ಆಗುವುದಿಲ್ಲ. ಹಾಗಂತ ನೆಟ್ಟಿಗರು ಕೇಳುವ ಪ್ರಶ್ನೆಗೂ ಉತ್ತರ ಕೊಡಲಾಗದು. ಡಿವೋರ್ಸ್ ಆಗುವುದೇ ಅಫೇರ್‌ನಿಂದ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಆದರೀಗ ಸೆಲೆಬ್ರಿಟಿಗಳು ಅದನ್ನು ನಿಜ ಮಾಡುತ್ತಿದ್ದಾರೆ.
ಬಾಲಿವುಡ್ ಹ್ಯಾಂಡ್ಸಮ್, ಪರ್ಫೆಕ್ಟ್ ಮ್ಯಾನ್ ಹೃತಿಕ್ ರೋಷನ್ (Hrithik Roshan) ಮತ್ತು ಸುಸೇನ್ ಖಾನ್ (Sussanne Khan) ವಿಚ್ಛೇದನ ಪಡೆದುಕೊಂಡ ನಂತರ ಇಬ್ಬರು ಮಕ್ಕಳಿಗಾಗಿ ವಿದೇಶ ಪ್ರವಾಸ, ಶಾಲೆ (School) ರಿಜಿಸ್ಟ್ರೇಷನ್ ಮಾಡಿಸಲು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮತ್ತೆ ಒಂದಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಯುವನಟಿ ಜೊತೆ ಹೃತಿಕ್ ರೋಷನ್ ಹೋಟೆಲ್‌ನಲ್ಲಿ (hotel) ಕಾಣಿಸಿಕೊಂಡ ನಂತರ ಗಾಸಿಪ್ ಹಲವು ಗಾಳಿ ಸುದ್ದಿಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಅತ್ತ ಸುಸೇನ್ ಸಹ ಗೋವಾದಲ್ಲಿ ವ್ಯಕ್ತಿಯೊಬ್ಬರೊಂದಿಗೆ ಹೊಸ ವರ್ಷದ ಪಾರ್ಟಿ ಮಾಡಿದ್ದು, ಗಾಳಿ ಸುದ್ದಿಗಳಿಗೆ ಮತ್ತಷ್ಟು ಗರಿಗೆದರುವಂತೆ ಮಾಡಿತ್ತು ಸುಳ್ಳಲ್ಲ.
Hrithik Roshan ಜೊತೆ ಸುತ್ತಾಡ್ತಿರೋ ಈ ನಿಗೂಢ ಹುಡುಗಿ ಯಾರು?
ಹೌದು! ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ (Saba Azad) ಕೆಲವು ದಿನಗಳ ಹಿಂದೆ ಒಂದೇ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು.ಇಬ್ಬರು ಕೂಡ ಹೊರಡುವ ಸಮಯದಲ್ಲಿ ತಬ್ಬಿಕೊಂಡಂತೆ ಕಾಣಿಸಿಕೊಂಡಿದ್ದು, ಮತ್ತಷ್ಟು ಅನುಮಾನ ಸೃಷ್ಟಿಸಿತ್ತು. ಹೀಗಾಗಿ ಅವರು ಎಲ್ಲೇ ಹೋದರು ಪ್ಯಾಪರಾಜಿಗಳು ಹಿಂದಿರುತ್ತಾರೆ.
![]()
ಹೇಗೆ ಭೇಟಿ ಅಗಿದ್ದು?:
ಇಂಡಿಯಾ today ಮಾಡಿರುವ ವರದಿ ಪ್ರಕಾರ ಹೃತಿಕ್ ರೋಷನ್ ಮತ್ತು ಸಾಬಾ ಅಜಾದ್ ಕಾಮನ್ ಸ್ನೇಹಿತನ ಮೂಲಕ ಪರಿಚಯವಾದರು. ಅವರು ಭಾರತೀಯ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಚಯವಾದ ದಿನದಿಂದಲೂ ಇಬ್ಬರು ಆತ್ಮೀಯರಾಗಿದ್ದು, ಆಗಾಗ ಭೇಟಿ ಆಗುತ್ತಾರಂತೆ.
2008ರಲ್ಲಿ 'ದಿಲ್ ಕಬ್ಬಡಿ' (Dil Kabaddi) ಚಿತ್ರದ ಮೂಲಕ ಸಾಬಾ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ಆನಂತರ ದೊಡ್ಡ ಬ್ರೇಕ್ ತೆಗೆದುಕೊಂಡು, 2011ರಲ್ಲಿ 'ಮುಜ್ಸೆ ಫ್ರಾಂಡ್‌ಶಿಪ್ ಕರೋಗೆ' ( 'Mujhse Fraaandship Karoge) ಸಿನಿಮಾದಲ್ಲಿ ನಟಿಸಿದ್ದರು. ಕೆಲವು ದಿನಗಳ ಹಿಂದೆ ಓಟಿಟಿಯಲ್ಲಿ ಬಿಡುಗಡೆಯಾದ 'ಫೀಲ್ ಲೈಕ್ ಇಷ್ಕಿ'ನಲ್ಲಿ ('Feels like Ishq') ನಟಿಸಿದ್ದಾರೆ. ನಾಸಿರುದ್ದೀನ್ ಶಾ (Naseeruddin Shah) ಪುತ್ರನ ರಾಕೇಟ್ ಬಾಯ್ಸ್ (Rocket Boys) ಬ್ಯಾಂಡ್‌ನಲ್ಲಿ ಜಿಮ್ ಸರ್ಭ್ ಮತ್ತು ಇಶ್ವಾಕ್ ಸಿಂಗ್ ಜೊತೆ ಕೆಲಸ ಮಾಡುತ್ತಿದ್ದಾರೆ.
68 ಆದ್ರೂ ಇಷ್ಟೊಂದು ಸ್ಟ್ರಾಂಗ್; Hrithik Roshan ತಾಯಿ ವರ್ಕೌಟ್ ವಿಡಿಯೋ ವೈರಲ್!
ದೀಪಿಕಾ ಪಡುಕೋಣೆ (Deepika Padukone) ಜೊತೆ ಫೈಟರ್ (Fighter) ಸಿನಿಮಾದಲ್ಲಿ ನಟಿಸಿದ ನಂತರ ಹೃತಿಕ್ ಹಲವು ಸಿನಿ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡರು. ತಮಿಳು ವಿಕ್ರಮ್ ವೇದಾ (Vikram vedha) ಹಿಂದಿ ರಿಮೇಕ್ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಜೊತೆ ಹೃತಿಕ್ ವಿಲನ್ ಆಗಿ ನಟಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಹಿಂದೂಸ್ತಾನ್ ಟೈಮ್ಸ್‌ನೊಂದಿಗಿನ ಚಾಟ್‌ನಲ್ಲಿ ಮಾಧವನ್ (Madhavan) ಹೃತಿಕ್ ರೋಷನ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. 'ನಾವಿಬ್ಬರೂ ಒಂದೇ ಸಮಯದಲ್ಲಿ ಕೆರಿಯರ್ ಪ್ರಾರಂಭಿಸಿದ್ದೇವೆ. ಅವರು ಈಗಲೂ ಗ್ರೀಕ್ ದೇವರಂತೆ (Greek god) ಕಾಣುತ್ತಾರೆ. ಅದ್ಭುತವಾದ ಆ್ಯಕ್ಷನ್ ಮಾಡುತ್ತಾರೆ. ಆದರೆ ಅದನ್ನು ನಾನು ಸುಮ್ಮನೆ ಬಯಸಿದರೆ ಸಾಲದು. ನಾನು ಅವರಂತೆ ಫಿಟ್ ಆಗಿರಬೇಕು, ಸ್ಟಾರ್ ಆಗಲು ಸಾಧ್ಯವಾಗುತ್ತದೆ. ಆಗ ಕತ್ರಿನಾ ಕೈಫ್ (Katrina Kaif) ಎದುರು ನಟಿಸಬಹುದು ಎಂದಿದ್ದಾರೆ,' ಎಂದಿದ್ದಾರೆ.
