Asianet Suvarna News Asianet Suvarna News

ಈ ಹೀರೋಯಿನ್ಸ್‌ ಮಾಂಸ, ಮೊಟ್ಟೆ ಮಾತ್ರವಲ್ಲ, ಹಾಲು ಕೂಡ ಸೇವಿಸೊಲ್ಲ!

ವೇಗನ್‌ಗಳ ವಿಚಾರ ನಿಮಗೆ ಗೊತ್ತಿರಬಹುದು. ವೇಗನ್‌ ಪದ್ಧತಿ ಪಾಲಿಸುವವರು ಪ್ರಾಣಿಜನ್ಯವಾದ ಯಾವ ಆಹಾರವನ್ನೂ ಸೇವಿಸೋಲ್ಲ. ಮಾಂಸ- ಮೊಟ್ಟೆಯ ಮಾತಿರಲಿ, ಇವರು ಹಾಲು- ತುಪ್ಪ, ಪನೀರ್‌ ಕೂಡ ಮುಟ್ಟೊದಿಲ್ಲ, ಸೇವಿಸೋದಿಲ್ಲ. ಅಂಥ ಬಾಲಿವುಡ್‌ ಸೆಲೆಬ್ರಿಟಿಗಳು ಯಾರ್ಯಾರು? ನೋಡೋಣ ಬನ್ನಿ.

Bollywood heroines who are vegan
Author
First Published May 26, 2023, 11:16 AM IST | Last Updated May 26, 2023, 11:16 AM IST

ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅನೇಕರು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಅವುಗಳನ್ನು ಮಾಂಸಕ್ಕಾಗಿ ಕೊಲ್ಲುವುದನ್ನು ಇಷ್ಟಪಡೊಲ್ಲ. ಇವರ ಸಂಘಗಳೇ ಇವೆ. ಕೆಲವೊಮ್ಮ ಸಸ್ಯಾಹಾರಿ ಎನಿಸಿಕೊಂಡವರು ಹಾಲು- ತುಪ್ಪ ಸೇವಿಸಬಹುದು. ಆದರೆ ವೇಗನ್‌ ಎನಿಸಿಕೊಂಡವರು ಸಸ್ಯ ಮೂಲದ ಎಲ್ಲ ಆಹಾರವನ್ನೂ ನಿರಾಕರಿಸುತ್ತಾರೆ. ಡೈರಿ ಪ್ರಾಡಕ್ಟ್‌ ಕೂಡ ಸೇವಿಸೋದಿಲ್ಲ. ಹಾಗೆ ವೇಗನ್‌ಗಳಾಗಿ ಬದಲಾಗಿರುವ ಬಾಲಿವುಡ್ ನಟಿಯರ ವಿವರ ಇಲ್ಲಿದೆ.

ಜಾಕ್ವೆಲಿನ್‌ ಫೆರ್ನಾಂಡಿಸ್‌: "ನಾನು ವೇಗನ್‌ ಆಗಿದ್ದೇನೆ. ಇದರಿಂದ ನಂಗೆ ಒಳ್ಳೇದೇ ಆಗಿದೆ. ನಾನು ತಿಳಿದಿರುವ ಪ್ರತಿಯೊಬ್ಬರೊಂದಿಗೆ ಆ ಅದ್ಭುತವಾದ ಭಾವನೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪ್ರಾಣಿಗಳ ಸಂಕಟವನ್ನು ನಿಲ್ಲಿಸಲು, ಪರಿಸರವನ್ನು ರಕ್ಷಿಸಲು ಮತ್ತು ನಿಮ್ಮ ಸ್ವಂತ ಆರೋಗ್ಯವನ್ನು ಕಾಪಾಡಲು ವೇಗನ್‌ ಆಗುವುದು ನೀವು ಮಾಡಬಹುದಾದ ಅತ್ಯುತ್ತಮ ಕೆಲಸ” ಎಂದು ಜಾಕ್ವೆಲಿನ್ ಹೇಳಿದ್ದಳು. 2014ರಲ್ಲಿ ಈ ನಟಿ ಪೆಟಾದಿಂದ 'ವರ್ಷದ ಮಹಿಳೆ' ಪ್ರಶಸ್ತಿಯನ್ನು ಗೆದ್ದಳು. ಸಾರ್ವಜನಿಕವಾಗಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ಕೆಲವು ಸೆಲೆಬ್ರಿಟಿಗಳಲ್ಲಿ ಇವಳೂ ಒಬ್ಬಳು. ಈಕೆ ಕ್ರೌರ್ಯ-ಮುಕ್ತ ಬಟ್ಟೆಗಳನ್ನೂ ಸಹ ಪ್ರತಿಪಾದಿಸುತ್ತಾಳೆ. ಅಂದರೆ ಚರ್ಮದ ಬೆಲ್ಟ್‌, ಚಪ್ಪಲಿ ಇತ್ಯಾದಿಗಳನ್ನೂ ಧರಿಸುವುದಿಲ್ಲ.

4 ದಿನದಲ್ಲಿ 6 ಸೆಲೆಬ್ರಿಟಿಗಳ ವಿದಾಯ: ಇಬ್ಬರು ಅಪಘಾತಕ್ಕೆ ಬಲಿಯಾದರೆ, ಒಬ್ಬರ ಸಾವು ನಿಗೂಢ!

ಶ್ರದ್ಧಾ ಕಪೂರ್: 2019ರಲ್ಲಿ ಶ್ರದ್ಧಾ ಕಪೂರ್ ಸಸ್ಯಾಹಾರಿಯಾದಳು. ಸ್ವಲ್ಪ ಸಮಯದವರೆಗೆ ಸಸ್ಯಾಹಾರಿಯಾಗಿದ್ದಳು, ನಂತರ ವೇಗನ್‌ ಆಹಾರಕ್ಕೆ ಬದಲಾದಳು. ತನ್ನ ಆಹಾರವನ್ನು ಹಸುವಿನ ಹಾಲಿನಿಂದ ಬಾದಾಮಿ ಹಾಲಿಗೆ ಬದಲಾಯಿಸಿದಳು. ಈಕೆ ಕೆಲವು ಪರಿಸರ, ವನ್ಯ ಸಂರಕ್ಷಣಾ ಎನ್‌ಜಿಒಗಳ ಭಾಗವಾಗಿದ್ದಾಳೆ.

ರಿಚಾ ಚಡ್ಡಾ

ರಿಚಾ ಚಡ್ಡಾ ಸಸ್ಯಾಹಾರಿಯಾಗಿದ್ದವಳು. ಮಾರುಕಟ್ಟೆಯಲ್ಲಿ ಬೃಹತ್‌ ಡೈರಿ ಉತ್ಪನ್ನಗಳಿಗಾಗಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂಬುದು ಅರಿವಾದಾಗ ವೇಗನ್‌ ಆಗಿ ಮಾರ್ಪಟ್ಟಳು. ಡೈರಿ ಆಹಾರ ಪದಾರ್ಥಗಳನ್ನು ತ್ಯಜಿಸಲು ನಿರ್ಧರಿಸಿದಳು. ʼವೇಗನ್ ಫಸ್ಟ್‌ʼಗೆ ನೀಡಿದ ಸಂದರ್ಶನದಲ್ಲಿ, ʼʼಪಾಲಕ್, ಆಲೂಗಡ್ಡೆ, ತೋಫು ಇತ್ಯಾದಿಗಳಿಂದ ನನ್ನ ಪ್ರೋಟೀನ್ ಅಗತ್ಯಗಳನ್ನು ಪೂರೈಸಿಕೊಳ್ಳುತ್ತೇನೆʼʼ ಎಂದಿದ್ದಳು. ಈಕೆ ಒಣ ಹಣ್ಣುಗಳನ್ನು ತಿನ್ನುತ್ತಾಳೆ. ಗಿಡಮೂಲಿಕೆಗಳು, ಬೇವು, ಅಜ್ವೈನ್, ಪೇರಲ, ಪುದೀನಾ ಇತ್ಯಾದಿ ಸೇವಿಸುತ್ತಾಳೆ.

ಸೋನಮ್ ಕಪೂರ್:  ಕೆಲವು ವರ್ಷಗಳ ಹಿಂದೆಯೇ ಈಕೆ ಸಸ್ಯಾಹಾರಿ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಳು. ವೇಗನ್‌ (Vegan) ಆಗುವ ಮುನ್ನ ದೀರ್ಘಕಾಲದವರೆಗೆ ಸಸ್ಯಾಹಾರಿಯಾಗಿದ್ದಳು. 2018ರಲ್ಲಿ ಈ ನಟಿ ಪೆಟಾದಿಂದ 'ವರ್ಷದ ವ್ಯಕ್ತಿ' ಪ್ರಶಸ್ತಿಯನ್ನು ಗೆದ್ದಳು. “ನಾನು ಸಹಾನುಭೂತಿಪರವಾದ ಆಹಾರದ ಆಯ್ಕೆಗಳನ್ನು ಮಾಡುತ್ತೇನೆ. ಎಷ್ಟರ ಮಟ್ಟಿಗೆಂದರೆ, ನಾನು ಈಗ ಸೋಯಾ ಹಾಲಿನ ಕಾಫಿ ಕುಡಿಯುತ್ತಿದ್ದೇನೆ. ನಾನು ಡೈರಿ ಉತ್ಪನ್ನ(Dairy product) ಬಳಸುವುದಿಲ್ಲʼʼ ಎಂದಿದ್ದಾಳೆ.

60ನೇ ವರ್ಷದಲ್ಲಿ ನಟ ಆಶಿಶ್‌ ವಿದ್ಯಾರ್ಥಿಗೆ 2ನೇ ಮದುವೆ, ವೆಡ್ಡಿಂಗ್‌ ಚಿತ್ರ ವೈರಲ್‌!

ಸೋನಾಕ್ಷಿ ಸಿನ್ಹಾ: ಪ್ರಾಣಿ ಹಿಂಸೆಯ ವಿರುದ್ಧ ಹೋರಾಡಲು ಸೋನಾಕ್ಷಿ ಸಿನ್ಹಾ ಸಸ್ಯಾಹಾರಿಯಾದಳು. ಸಸ್ಯಾಹಾರಿಯಾದ ನಂತರ ತಾನು ದೇಹದಲ್ಲಿ ಉತ್ತಮ ಚಯಾಪಚಯ ಕ್ರಿಯೆಯನ್ನು ಅನುಭವಿಸಿದ್ದೇನೆ ಮತ್ತು ತೂಕವನ್ನು(Weight) ಕಳೆದುಕೊಂಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಕಂಗನಾ ರಣಾವತ್: ಕೆಲವು ವರ್ಷಗಳ ಹಿಂದೆ ಕಂಗನಾ ರಣಾವತ್ ಸಸ್ಯಾಹಾರಿಯಾದಳು(Vegetarian) . “ನಾನು ಸಸ್ಯಾಹಾರಿಯಾಗಲು ನಿರ್ಧರಿಸಿದಾಗ, ಡೈರಿ ಉತ್ಪನ್ನಗಳನ್ನು ಸೇವಿಸುವುದು ನನಗೆ ಆರೋಗ್ಯಕರವಲ್ಲ ಮತ್ತು ನನ್ನಲ್ಲಿ ಆಮ್ಲೀಯತೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಆದ್ದರಿಂದ, ನಾನು ವೇಗನ್‌ ಆಗಿ ಬದಲಾದೆ. ಇದು ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿದೆ. ನಾನು ಈಗ ತುಂಬಾ ಸಂತೋಷವಾಗಿದ್ದೇನೆʼ (Happy) ಎಂದು ಈಕೆ ಹೇಳಿದ್ದಾಳೆ.

Latest Videos
Follow Us:
Download App:
  • android
  • ios