ಬ್ರೇಕಪ್ ನಂತರವೂ ಎಕ್ಸ್‌ ಜೊತೆ ಮಾತನಾಡುವುದಕ್ಕೆ ಸಮಸ್ಯ ಇಲ್ಲ ಎಂದು ಹೇಳಿಕೊಂಡ ನಟಿ. ಹೊಸ ಈಕ್ವೇಷನ್‌ ಹೇಗಿದೆ ನೋಡಿ..

ಪೇಜ್ 3 (Page 3) ಚಿತ್ರದ ಮೂಲಕ ಬಾಲಿವುಡ್ (Bollywood) ಚಿತ್ರರಂಗಕ್ಕೆ ಕಾಲಿಟ್ಟಿರುವ ನಟಿ ಹನ್ಸಾ ಸಿಂಗ್ (Hansa Singh) ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿದ್ದಾರೆ. ಚೌಸರ್ ಫಿರಂಗಿ, ಹಂಟರ್ರ್ ಭುಜ್: ಭಾರತದ ಹೆಮ್ಮೆ ಮತ್ತು ಮನಿ ಹೈ ತೋ ಹನಿ ಹೈ ಸಿನಿಮಾದಲ್ಲಿ ಹನ್ಸಾ ಸಿಂಗ್ ನಟಿಸಿದ್ದಾರೆ. ಸಿನಿಮಾಗಳು ಎಣಿಕೆ ಕಡಿಮೆಯೇ. ಹೀಗಾಗಿ ಸುದ್ದಿಯಲ್ಲಿರುವುದು ಕಡಿಮೆಯೇ. ಆದರೆ ಮೊದಲ ಬಾರಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿ ಟಾಕ್‌ ಆಫ್‌ ದಿ ಟೌನ್ ಆಗಿದ್ದಾರೆ. 

'ಸಿಂಗಲ್ ಆಗಿರುವುದಕ್ಕೆ ನಾನು ಇಂಡಿಪೆಂಡೆಂಟ್ (Independent) ಆಗಿದ್ದು. ಜೀವನವನ್ನು ನನ್ನ ಸ್ವಂತ ಟರ್ಮ್‌ನಲ್ಲಿ ನಡೆಸುತ್ತಿರುವೆ. ರಿಲೇಷನ್‌ಶಿಪ್‌ನಲ್ಲಿದ್ದರೆ (Relationship) ಗೊತ್ತಿಲ್ಲದೇ, ನಾವು ನಮ್ಮ ಪಾರ್ಟ್‌ನರ್ ಲೈಫ್‌ಸ್ಟೈಲ್‌ಗೆ ತಕ್ಕಂತೆ ಅಡ್ಜೆಸ್ಟ್‌ಮೆಂಟ್‌ಗಳನ್ನು ಮಾಡಿಕೊಳ್ಳುತ್ತೀವಿ. ಇದರಿಂದ ನಮ್ಮ ರಿಯಲ್ ಪರ್ಸನಾಲಿಟಿ ಕಳೆದುಕೊಳ್ಳುತ್ತೀವಿ. ತಿಳಿಯದೇ ನಾವು ಮತ್ತೊಬ್ಬರ ಮೇಲೆ ಡಿಪೆಂಡ್ ಆಗುತ್ತೀವಿ,' ಎಂದು ಹನ್ಸಾ ಸಿಂಗ್ ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. 

ಮುಂಬೈನಲ್ಲಿ (Mumbai) ಸಿಂಗಲ್ ಆಗಿ ವಾಸಿಸುವುದು ಕಷ್ಟ, ಪಾರ್ಟನರ್ ಇರಲೇಬೇಕು ಅನಿಸುತ್ತದೆ ಕೆಲವೊಮ್ಮೆ, ಎಂದು ಹೇಳುವ ಹನ್ಸಾ 'ಮನಸ್ಸಿಗೆ ತುಂಬಾ ನೋವಾದಾಗ ಈ ರೀತಿ ಭಾವನೆ ಬರುತ್ತದೆ. ಒಬ್ಬರಿಂದ ತುಂಬಾ ಪ್ರೀತಿ ಮತ್ತು ಅಕ್ಕರೆ ಬೇಕು ಅನಿಸುತ್ತದೆ. ಅದರಲ್ಲೂ ಆರೋಗ್ಯ ಕೆಟ್ಟಿದ ದಿನಗಳಲ್ಲಿ ನಮ್ಮ ಒಬ್ಬರು ನೋಡಿಕೊಳ್ಳಬೇಕು ಅನಿಸುತ್ತದೆ. ಆದರೆ ಆ ವ್ಯಕ್ತಿ ನಮ್ಮ ಭಾವನೆ ಮತ್ತು ಸಮಯಕ್ಕೆ ಸರಿ ಅನಿಸಿದರೆ ಮಾತ್ರ ಒಳ್ಳೆಯ ಆಯ್ಕೆ ಆಗಿರುತ್ತಾರೆ. 

Tehseen Poonawalla ಭಾರತದ ಅಗ್ರ ಉದ್ಯಮಿಯ ಪತ್ನಿಯ ಜೊತೆ ಸೆಕ್ಸ್ ಮಾಡಿದ್ದೆ!

ಸಿಐಡಿ, ವಾರ್ದೂನ್‌ ಕ ಸಫಾರಿ, ಶ್ರೀ ಗಣೇಶ್, ಹಥಾ, ಆರಂಭ ಸೇರಿ ಅನೇಕ ಧಾರಾವಾಹಿಗಳಲ್ಲಿ ಹನ್ಸಾ ಸಿಂಗ್ ಅಭಿನಯಿಸಿದ್ದಾರೆ. ಈ ಸಮಯದಲ್ಲಿ ಜೀವನದ ಅನೇಕ ಏಳು ಬೀಳುಗಳನ್ನು ನೋಡಿರುವುದಾಗಿ ಹೇಳಿ ಕೊಂಡಿದ್ದಾರೆ. 'ನಾವು ದೊಡ್ಡವರಾಗುತ್ತಿದ್ದಂತೆ, ಜೀವನ ನಡೆಯುತ್ತಿದ್ದಂತೆ ಒಬ್ಬರಿಗೆ ಹತ್ತಿರವಾಗಿ ಬಿಡುತ್ತೀವಿ. ಒಂದು ಸಲ ರಿಲೇಷನ್‌ಶಿಪ್ ಮುಗಿದರೆ ಪ್ರೀತಿ ಬಗ್ಗೆ ನಂಬಿಕೆ ಹುಟ್ಟುವುದಿಲ್ಲ. ಸಮಯ ಕಳೆಯುತ್ತಿದ್ದಂತೆ ಕೆಲವೊಂದು ವಿಚಾರಗಳನ್ನು ನನ್ನ ಮನಸ್ಸು ಅರ್ಥ ಮಾಡಿಕೊಂಡಿದೆ ಹೀಗಾಗಿ ಹಾರ್ಟ್‌ಬ್ರೇಕ್‌ ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗಿದೆ. ನಿಜ ಹೇಳಬೇಕು ಅಂದ್ರೆ ನನ್ನ ಎಕ್ಸ್ ಬಾಯ್‌ಫ್ರೆಂಡ್‌ ಜೊತೆ ನಾನು ಒಳ್ಳೆಯ ಈಕ್ವೇಷನ್‌ ಕಾಪಾಡಿಕೊಂಡಿರುವೆ. ಸೂರ್ಯನ ಕೆಳಗೆ ನಡೆಯುವ ಯಾವ ಘಟನೆ ಬಗ್ಗೆ ಬೇಕಿದ್ದರೂ ನಾನು ಅವನ ಜೊತೆ ಮಾತನಾಡಬಹುದು. ನಾವು ಒಬ್ಬರನ್ನೊಬ್ಬರು ಜಡ್ಜ್ ಮಾಡುತ್ತಿಲ್ಲ. ತುಂಬಾನೇ ಸಪೋರ್ಟಿವ್ ಆಗಿರುವ ಎಕ್ಸ್‌ಗಳನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ, ಸಖತ್ ಸಪೋರ್ಟ್ ಮಾಡುತ್ತಾರೆ,' ಎಂದು ಹನ್ಸಾ ಸಿಂಗ್ ಹೇಳಿದ್ದಾರೆ. 

The Kashmir Files: ಬಾಲಿವುಡ್‌ನಲ್ಲಿ ದಾಖಲೆ ಬರೆಯುತ್ತಿರುವ ಕಾಶ್ಮೀರ್ ಫೈಲ್ಸ್

ಮದುವೆ (Marriage) ಸಂಪ್ರದಾಯಗಳನ್ನು ನಂಬುವ ಹನ್ಸಾ ಸಿಂಗ್ ಮದುವೆ ಆಗುವುದಕ್ಕೆ ರೆಡಿಯಾಗಿಲ್ಲ. ಮದುವೆ ಬೇಕು ಎನಿಸಿದ್ದರೂ ಯೋಚನೆ ಮಾಡುವಂತೆ ಆಗಿದೆ ಎಂದಿದ್ದಾರೆ. 'ನೀವೇ ನನ್ನ ತಂದೆ ತಾಯಿಯನ್ನು ನೋಡಿ, ಮದುವೆ ಎನ್ನುವ ವಿಚಾರವನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ. ಆದರೆ ನಾನು ಸದಾ ಆಯ್ಕೆ ಮಾಡುವುದು ಲಿವ್‌ಇನ್‌-ರಿಲೇಷನ್‌ಶಿಪ್. ಮದುವೆಯಲ್ಲಿ ಇಬ್ಬರ ನಡುವೆ ಪ್ರೀತಿ ಮತ್ತು ನಂಬಿಕೆ ಇರಬೇಕು. ಇದೊಂದು ರೀತಿ ಮದುವೆಗೆ ಸಮವಾಗುತ್ತದೆ ಎಂದರೆ ತಪ್ಪಾಗದು. ಆದರೆ ಈಗ ನಾನು ಸಿಂಗಲ್ ಆಗಿ ಹ್ಯಾಪಿ ಆಗಿರುವೆ. ಮದುವೆನೇ ಇಷ್ಟ ಇಲ್ಲ ಅನ್ನುವ ಅರ್ಥವಲ್ಲ, ನನ್ನಂತೆ ಸೆನ್ಸಿಬಲ್ ಮತ್ತು ನಮ್ಮ ಐಡಿಯಾಲಜಿಗಳು ಮ್ಯಾಚ್ ಆದರೆ ಖಂಡಿತ ನಾನು ರೆಡಿಯಾಗಿರುವೆ. ಬಾಳಸಂಗಾತಿಗೆ ಒಳ್ಳೆಯ ಸೆನ್ಸಸ್‌ ಆಫ್‌ ಹ್ಯೂಮರ್ ಮತ್ತು ಒಳ್ಳೆ ಸಂದರ್ಶನ ಮಾಡುವ ಶಕ್ತಿ ಇರಬೇಕು' ಎಂದಿದ್ದಾರೆ ಹನ್ಸಾ ಸಿಂಗ್.