ಮುಂಬೈ(ಎ.09): 55 ವರ್ಷದ ಮಹಿಳೆ ಮತ್ತು ಅವರ ಮಗಳು ಮುಂಬೈನ ಉಪನಗರ ಅಂಧೇರಿಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಅಸ್ಮಿತಾ ಮತ್ತು ದೃಷ್ಟಿ ಗುಪ್ತಾ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಸಂತೋಷ್ ಗುಪ್ತಾ ಅವರ ಪತ್ನಿ ಮತ್ತು ಮಗಳು ಎಂದು ಅಧಿಕಾರಿ ತಿಳಿಸಿದ್ದಾರೆ.

ಅಂಧೇರಿ ಪಶ್ಚಿಮ ನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗಳು ಬೆಂಕಿ ಹಚ್ಚಿದ್ದಾರೆ. ನೆರೆಹೊರೆಯವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಚಂದದ್ದೊಂದು ಕಾರಣಕ್ಕೆ ಕಿರಿಕ್ ಚೆಲುವೆಯನ್ನು ಅಳಿಸಿದ ಕಾರ್ತಿ..!

ಇವರಿಬ್ಬರನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಅಲ್ಲಿಗೆ ತಲುಪುವಾಗ ಅಸ್ಮಿತಾ ಮೃತಪಟ್ಟಿದ್ದರು. ಶೇಕಡಾ 70 ರಷ್ಟು ಸುಟ್ಟಗಾಯಗಳಾಗಿದ್ದ ದೃಷ್ಟಿ ಅವರು ಏರೋಲಿ ನ್ಯಾಷನಲ್ ಬರ್ನ್ಸ್ ಸೆಂಟರ್‌ನಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಅಸ್ಮಿತಾ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ತಾಯಿಯ ಅನಾರೋಗ್ಯದ ಆಘಾತದಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.