ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ ಕಾರಣದಿಂದ ಭಾರಿ ಟೀಕೆ, ಬೆದರಿಕೆ ಎದುರಿಸಿದ್ದಾರೆ. ಇದರ ಬೆನ್ನಲ್ಲೇ ಅನುರಾಗ್ ಕಶ್ಯಪ್ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಈ ವೇಳೆ ಮತ್ತೆ ಬ್ರಾಹ್ಮಣ ಸಮುದಾಯವನ್ನು ಗುರಿಯಾಸಿದ ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.

ಮುಂಬೈ(ಏ.19) ಬ್ರಾಹ್ಮಣ ಸಮುದಾಯದ ಕೆಟ್ಟದಾಗಿ ಅವಮಾನಿಸಿದ ಬಾಲಿವುಡ್ ನಿರ್ದೇಶಕ ಹಾಗೂ ನಟ ಅನುರಾಗ್ ಕಶ್ಯಪ್ ಇದೀಗ ಭಾರಿ ಟೀಕೆ, ವಿರೋಧಗಳ ಬೆನ್ನಲ್ಲೇ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಆದರೆ ತಮ್ಮ ಕ್ಷಮೆಯಾಚನೆಲ್ಲೂ ಮತ್ತೆ ಬ್ರಾಹ್ಮಣ ಸಮುದಾಯವನ್ನು ಅವಮಾನಿಸುವ ಕೆಲಸವನ್ನು ಅನುರಾಗ್ ಕಶ್ಯಪ್ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಫುಲೆ ಸಿನಿಮಾಗೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದರ ವಿರುದ್ದ ಅನುರಾಗ್ ಕಶ್ಯಪ್ ಪೋಸ್ಟ್ ಭಾರಿ ವಿವಾದ ಸೃಷ್ಟಿಸಿತ್ತು. ಇದೇ ವೇಳೆ ಅನುರಾಗ್ ಕಶ್ಯಪ್ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿ ಭಾರಿ ಆಕ್ರೋಶಕ್ಕೆ ತುತ್ತಾಗಿದ್ದರು. ಈ ಪ್ರತಿಕ್ರಿಯೆಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅನುರಾಗ್ ಕಶ್ಯಪ್ ಬಹಿರಂಗ ಕ್ಷಮೆ ಕೋರಿದ್ದಾರೆ. ಆದರೆ ಕಾಟಾಚಾರಕ್ಕೆ ಕ್ಷಮೆ ಕೋರಿ, ಮತ್ತೆ ಸಮುದಾಯ ಅವಮಾನಿಸಿದ್ದಾರೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಕ್ಷಮಾಪಮೆ ಕೇಳುವಂತೆ ನಟಸಿ ಮತ್ತೆ ಟಾರ್ಗೆಟ್ ಮಾಡಿದ್ರಾ ಕಶ್ಯಪ್?
ಇದು ನನ್ನ ಕ್ಷಮಾಪಣೆ. ನನ್ನ ಪೋಸ್ಟ್‌ಗೆ ಅಲ್ಲ, ಅದರಲ್ಲಿ ಮಾಡಿದ ಒಂದು ಪ್ರತಿಕ್ರಿಯೆಗೆ ಬಂದ ಆಕ್ರೋಶ, ಟೀಕೆಗೆ. ಈ ದೇಶದ ಸಂಸ್ಕೃತಿಯನನ್ನು ಉಳಿಸುವವರು ಎಂದು ಹೇಳಿಕೊಳ್ಳುವವರಿಂದ ನನ್ನ ಮಗಳು, ಕುಟುಂಬ, ಆಪ್ತರು, ಸಹೋದ್ಯೋಗಿಗಳು ಜೀವ ಬೆದರಿಕೆ ಸೇರಿದಂತೆ ಇತರ ಅತ್ಯಂಕ ಕೆಟ್ಟ ಬೆದರಿಕೆ ಯಾವುದು ಸಮಂಜವಲ್ಲ. ಏನು ಹೇಳಿದ್ದೇನೋ ಅದನ್ನು ಈಗ ಹಿಂಪಡೆಯಲು ಸಾಧ್ಯವಿಲ್ಲ. ಅದನ್ನು ಹಿಂಪಡೆಯುವುದೂ ಇಲ್ಲ. ನೀವು ನನ್ನನ್ನು ಗುರಿಯಾಗಿಸಿ ಟೀಕೆ, ಬೆದರಿಕೆ ಹಾಕಿ, ಆದರೆ ನನ್ನ ಕುಟುಂಬ, ಆಪ್ತರು ಈ ವಿಚಾರದಲ್ಲಿ ಏನೂ ಹೇಳಿಲ್ಲ. ಅವರ ಮೇಲೆ ದ್ವೇಷ ಯಾಕೆ, ಯಾರಿಗೆಲ್ಲಾ ನನ್ನಿಂದ ಕ್ಷಮೆ ಬೇಕು ಇಲ್ಲಿದೆ. ಬ್ರಾಹ್ಮಣರೇ ದಯವಿಟ್ಟು ಮಹಿಳೆಯರನ್ನು ಬಿಟ್ಟು ಬಿಡಿ. ಈ ಸಂಸ್ಕೃತಿಯನ್ನು ಧರ್ಮಗ್ರಂಥಗಳಲ್ಲಿಯೂ ಕಲಿಸಲಾಗುತ್ತದೆ. ಆದರೆ ಮನುವಾದದಲ್ಲಿಲ್ಲ. ಯಾವ ರೀತಿಯ ಬ್ರಾಹ್ಮಣರು ನೀವು ಎಂದು ನಿರ್ಧರಿಸಿ. ಇದು ನನ್ನ ಕ್ಷಮಾಪಣೆ ಎಂದು ಅನರಾಗ್ ಕಶ್ಯಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಬ್ರಾಹ್ಮಣರ ಮೇಲೆ ಮೂತ್ರವಿಸರ್ಜನೆ ಮಾಡುತ್ತೇನೆ, ಅನುರಾಗ್ ಕಶ್ಯಪ್ ಹೇಳಿಕೆಯಿಂದ ಪ್ರತಿಭಟನೆ ಶುರು

ಈ ಕ್ಷಮಾಪಣೆ ಮನುವಾದಿ ಹಾಗೂ ಯಾರೆಲ್ಲಾ ಸಂಸ್ಕಾರ ಇಲ್ಲದ ಇರುವ ಬ್ರಾಹ್ಣರಿಗೆ ಎಂದು ಹೇಳಿ ಅನರಾಗ್ ಕಶ್ಯಪ್ ಈ ಸೋಶಿಯಲ್ ಮೀಡಿಯಾ ಕ್ಷಮಾಪಣೆ ಹೇಳಿದ್ದಾರೆ. ಆದರೆ ಈ ಕ್ಷಮಾಪಣೆ ಸೊಕ್ಕಿನಿಂದ ಹಾಗೂ ಮತ್ತೆ ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. 

View post on Instagram

ಬ್ರಾಹ್ಮಣ ಸಮುದಾಯವನ್ನು ಹೆಣ್ಣುಬಾಕ ಎಂದ್ರಾ ಕಶ್ಯಪ್?
ಅನುರಾಗ್ ಕಶ್ಯಪ್ ಕ್ಷಮಾಪಣೆಯಲ್ಲಿ ಕೆಲ ಅಕ್ಷೇಪಾರ್ಪ ಪದಗಳನ್ನು ಬಳಸಿದ್ದಾರೆ. ಸಾವಿತ್ರಿ ಭಾಯಿ ಫುಲೆ ಜೀವನಾಧಾರಿತ ಫುಲೆ ಸಿನಿಮಾಗೆ ಬ್ರಾಹ್ಮಣ ಸಮುದಾಯ ವಿರೋಧ ಪಡಿಸಿದ ಬಳಿಕ ಅನುರಾಗ್ ಕಶ್ಯಪ್ ನೇರವಾಗಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಸಿದ್ದಾರೆ. ಇದೀ ಕ್ಷಮಾಪಣೆಯಲ್ಲಿ ಬ್ರಾಹ್ಮಣರೆ ದಯವಿಟ್ಟು ಮಹಿಳೆಯನ್ನು ಬಿಟ್ಟುಬಿಡಿ ಎನ್ನುವ ಮೂಲಕ ಬ್ರಾಹ್ಮಣ ಸಮುದಾಯ ಮಹಿಳೆಯರ ಮೇಲೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದೆ, ಹೆಣ್ಣುಬಾಕ ಅನ್ನೋ ರೀತಿ ಪರೋಕ್ಷವಾಗಿ ಹೇಳಿದ್ದಾರೆ. ಅನುರಾಗ್ ಕಶ್ಯಪ್‌ಗೆ ಬಂದ ಕೆಟ್ಟ ಕಮೆಂಟ್‌ಗೆ ಪ್ರತಿಕ್ರಿಯೆ ಅಥವಾ ತಿರುಗೇಟು ನೀಡುವ ಭರದಲ್ಲಿ ಇಡೀ ಬ್ರಾಹ್ಮಣ ಸಮುದಾಯವನ್ನು ಹೆಣ್ಣುಬಾಕ ಎಂದಿದ್ದಾರೆ ಅನ್ನೋ ಪ್ರತಿಕ್ರಿಯೆಗಳು, ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದೇ ವೇಳೆ ಈ ಮಾತು ಟ್ರೋಲ್ ಮಾಡಿದವರಿಗೆ ಕಶ್ಯಪ್ ಹೇಳಿದ್ದಾರರೆ ಅನ್ನೋ ಪರ ವಾದಗಳು ವ್ಯಕ್ತವಾಗುತ್ತಿದೆ.

ಸಂಸ್ಕಾರವಿಲ್ಲದ ಬ್ರಾಹ್ಮಣ
ಅನರಾಗ್ ಕಶ್ಯಪ್ ತಮ್ಮ ಕ್ಷಮಾಪಣೆಯನ್ನು ಮನುವಾದಿಗಳು ಸಂಸ್ಕಾರ ಇಲ್ಲದ ಬ್ರಾಹ್ಮಣರಿಗೆ ಎಂದಿದ್ದಾರೆ. ಈ ಮೂಲಕ ಬ್ರಾಹ್ಮಣ ಸಮುದಾಯ ಸಂಸ್ಕಾರಹೀನ ಸಮುದಾಯ ಎಂದು ಜರೆದಿದ್ದಾರೆ. ಇಷ್ಟೇ ಅಲ್ಲ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯವನ್ನು ಸಂಸ್ಕಾರಯುತ ಬ್ರಾಹ್ಮಣರು ಹಾಗೂ ಸಂಸ್ಕಾರಹೀನ ಬ್ರಾಹ್ಮಣರು ಎಂದು ಒಡಯುವ ಪ್ರಯತ್ನ ಮಾಡಿದ್ದಾರೆ. 

ಅನರಾಗ್ ಕಶ್ಯಪ್ ಕ್ಷಮಾಪಣೆ ಪೋಸ್ಟ್‌ಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ. ಮೊಂಡುತನ, ಸೊಕ್ಕಿನಿಂದ ಹೇಳಿಕೆ ನೀಡಿದ ಈಗ ನೆಪಮಾತ್ರಕ್ಕೆ ಕ್ಷಮೆ ಕೋರುತ್ತಿರುವ ಅನುರಾಗ್ ಕಶ್ಯಪ್‌ನ ಕ್ಷಮಿಸಲು ಸಾಧ್ಯವಿಲ್ಲ ಅನ್ನೋ ಆಕ್ರೋಶ ಎಲ್ಲೆಡೆಗಳಿಂದ ಕೇಳಿಬರುತ್ತಿದೆ.

ಫುಲೆ ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನವಾಯ್ತಾ? ಅನುರಾಗ್ ಕಶ್ಯಪ್ ಆಕ್ರೋಶ!