ಇಮ್ರಾನ್ ಹಶ್ಮಿ ಹಣ ಸಂಪಾದಿಸಲು ಸಿನಿಮಾ ಮಾಡೋಲ್ವಂತೆ!
ಬಾಲಿವುಡ್‌ನ ಮರ್ಡರ್ ಸಿನಿಮಾ ನಟ ಇಮ್ರಾನ್ ಹಶ್ಮಿ ತಮ್ಮ ಸಿನಿಮಾ, ವೃತ್ತಿ ಜೀವನ ಹಾಗೂ ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮಾಡುವುದು ಹಣ ಸಂಪಾದಿಸಲು ಅಲ್ಲ ಎಂದಿದ್ದಾರೆ ಇಮ್ರಾನ್. ಮತ್ತೇನಕ್ಕಂತೆ?
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಎಂದಿಗೂ ಹಣದ ಬಗ್ಗೆ ಚಿಂತಿಸೋಲ್ವಂತೆ. ಆಗಾಗ್ಗೆ ತಮ್ಮ ನೈತಿಕತೆ ಬಗ್ಗೆ ಮಾತನಾಡುವ ಅವರು ಉತ್ತಮ ಚಲನಚಿತ್ರಗಳನ್ನು ಮಾಡಲು ಬಯಸುತ್ತಾರೆ ಮತ್ತು ಹಣದ ಬಗ್ಗೆ ಯೋಚಿಸೋಲ್ಲ ಅಂದಿದ್ದಾರೆ.
ಸಂದರ್ಶನವೊಂದರಲ್ಲಿ ಹಶ್ಮಿ, ಹಣಕ್ಕೋಸ್ಕರ ಚಿತ್ರ ಮಾಡೋದಲ್ಲ. ಅದರಲ್ಲಿ ಸಿಗೋ ಫೇಮ್ ನನಗೆ ಮುಖ್ಯ. ಖುಷಿಗೆ ಆದ್ಯತೆ ಕೊಡುತ್ತೇನೆ, ಎಂದಿದ್ದರು.
ನಂಗೆ ನಾನು ಮಾಡಿರುವ ಕೆಲಸಗಳ ಮೇಲೆ ಹೆಮ್ಮೆ ಇದೆ. ಮಾಡಿದ್ದಕ್ಕೆ ಪಶ್ಚಾತ್ತಾಪವಿಲ್ಲ. ನಾನು ಈ ಸ್ಥಿತಿಯಲ್ಲಿ ಇರಲು ಮಾಡಿರುವ ಚಿತ್ರಗಳೇ ಕಾರಣ. ಗಳಿಸಿದ್ದು ದುಡ್ಡು ಮಾತ್ರವಲ್ಲ. ಬಹಳಷ್ಟನ್ನು ಪಡೆದುಕೊಂಡಿದ್ದೇನೆ, ಎನ್ನುತ್ತಾರೆ ಕಿಂಗ್ ಆಫ್ ಕಿಸ್.
ಯಾವುದೇ ಕೆಲಸವಿರಲಿ, ಅದನ್ನು ಮಾಡುವುದು ಸಾಕಷ್ಟು ವಿಷಯಗಳನ್ನು ಕಲಿಯಲು. ಮನುಷ್ಯ ತಪ್ಪು ಮಾಡೋದು ಸಹಜ. ಆ ತಪ್ಪುಗಳೊಂದಿಗೆ ಆತ ಬೆಳೆಯಬೇಕು. ಮಾಡೋ ಕೆಲಸಕ್ಕೆ ನಾವು ನ್ಯಾಯ ಒದಗಿಸುವುದು ಮುಖ್ಯ. ಆಗ ನಮ್ಮನ್ನು ನಾವು ಮರು ಶೋಧಿಸಬಹುದು, ಎಂದು ಕಲಕಿಯೆ ಮಹತ್ವ ಹಾಗೂ ಜೀವನದ ಪಾಠ ಹೇಳುತ್ತಾರೆ, ಹಶ್ಮಿ.
ಹೊಸಬರಿಂದ ಯಾವುದೇ ಒತ್ತಡವನ್ನು ಅನುಭವಿಸುವುದಿಲ್ಲ, ಬದಲಿಗೆ ಅವರಿಂದ ಕಲಿಯಲು ಸಾಕಷ್ಟು ವಿಷಯಗಳಿವೆ ಎಂದು ಅವನು ಭಾವಿಸುತ್ತಾರೆ ಮರ್ಡರ್ 2 ನಟ .
'ಉದ್ಯಮದಲ್ಲಿ ನನಗೆ ಎಂದಿಗೂ ಅಸುರಕ್ಷಿತ ಭಾವನೆ ಇಲ್ಲ. ಈ ಕ್ಷೇತ್ರ ವಿಶಾಲವಾಗಿದೆ. ಯಾವಾಗಲೂ ಪ್ರತಿಭೆಯನ್ನು ಸ್ವಾಗತಿಸುತ್ತದೆ. ಇಲ್ಲಿ ಅನೇಕ ಹೊಸ ಮಾರ್ಗಗಳಿವೆ. ಎಲ್ಲಾ ರೀತಿಯ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ', ಎನ್ನೋದು ಇಮ್ರಾನ್ ಅಭಿಪ್ರಾಯ.
'ಮುಖ್ಯವಾದುದು ಪ್ರತಿಭೆ. ಅದಿದ್ದರೆ ನಿಮಗೆ ಅವಕಾಶಗಳು ಸಿಗುತ್ತವೆ. ಎಲ್ಲರಿಗೂ ಕೆಲಸವಿದೆ. ವಾಸ್ತವವಾಗಿ, ನಾವು ಹೊಸಬರಿಂದ ಕಲಿಯಬೇಕು. ಅವರು ಹೊಸ ಆಲೋಚನೆಗಳನ್ನು ತರುತ್ತಾರೆ' ಎಂದ ನಟ ಇಮ್ರಾನ್ ಹಶ್ಮಿ.