ಬಾಲಿವುಡ್ ನಿರ್ದೇಶಕ ಗಿರೀಶ್ ಮಲಿಕ್ ಪುತ್ರ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆ ಕುಡಿಯುವುದನ್ನು ನಿಲ್ಲಿಸುವಂತೆ ಬೈದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 

ಬಾಲಿವುಡ್ ನಲ್ಲಿ ಹೋಳಿ(Holi) ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಬ್ಬದ ಸಂಭ್ರಮದ ನಡುವೆ ಬಾಲಿವುಡ್ ನಲ್ಲಿ ನಡೆದ ಆಘಾತಕಾರಿ ಘಟನೆ ಹೋಳಿ ಸಂಭ್ರಮದಲ್ಲಿದ್ದ ಎಲ್ಲರಿಗೂ ಶಾಕ್ ನೀಡಿತ್ತು. ಬಾಲಿವುಡ್ ನ ಖ್ಯಾತ ನಿರ್ದೇಶಕ ಗಿರೀಶ್ ಮಲಿಕ್(Director Girish Malik) ಅವರ ಪುತ್ರ ಮನ್ನನ್ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. 17 ವರ್ಷದ ಗಿರೀಶ್ ಪುತ್ರ ಮನ್ನನ್ ಸಾವು ಬಾಲಿವುಡ್ ಗೆ ಶಾಕ್ ನೀಡಿತ್ತು. ಮನ್ನನ್ ಆಸ್ಮಿಕವಾಗಿ ಬಿದ್ದರೋ ಅಥವಾ ಆಹ್ಮಹತ್ಯೆಯೋ ಎನ್ನುವ ಅನುಮಾನ ಮೂಡಿಸಿತ್ತು. ಇದೀಗ ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನ್ನನ್ ಅಪಾರ್ಟ್ಮೆಂಟ್ ನ ಐದನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದರು. ಈ ಪ್ರಕರಣ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಇದು ಆಕಸ್ಮಿಕವಲ್ಲ ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಮನ್ನನ್ ತಂದೆ ಗಿರೀಶ್ ಮಲಿಕ್ ಮದ್ಯಪಾನ ಮಾಡುವುದನ್ನು ಬಿಟ್ಟು ತಾಯಿಯ ಜೊತೆ ಸರಿಯಾಗಿ ವರ್ತಿಸು ಎಂದು ಮಗನಿಗೆ ಬೈದಿದ್ದರಂತೆ. ಅದೆ ಕೋಪಕ್ಕೆ 5ನೇ ಮಹಡಿಯಿಂದ ಹಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. 

ಹೋಳಿ ಆಚರಣೆಯ ವೇಳೆ ಮನ್ನನ್ ಮದ್ಯಸೇವಿಸಿದ್ದರು. ಮನೆಗೆ ಹೋದ ಬಳಿಕವೂ ಕುಡಿಯುವದನ್ನು ನಿಲ್ಲಿಸಿರಲಿಲ್ಲ. ಇದನ್ನು ನೋಡಿದ ತಂದೆ ಮೊದಲು ಕುಡಿಯುವುದನ್ನು ನಿಲ್ಲಿಸುವಂತೆ ಗದರಿದ್ದರಂತೆ. ಅಲ್ಲದೆ ತಾಯಿಯ ಜೊತೆ ಸರಿಯಾಗಿ ನಡೆದುಕೊಳ್ಳುವಂತೆ ಬುದ್ದಿವಾದ ಹೇಳಿದ್ದರಂತೆ. ಇದರಿಂದ ಮನನೊಂದ ಮನ್ನನ್ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹೋಳಿ ಆಟದ ಬಳಿಕ 5ನೇ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕನ ಪುತ್ರ ಸಾವು

ಶುಕ್ರವಾರ ಹೋಳಿ ಆಡಿ ಮನೆಗೆ ಮರಳಿದ್ದ ಮನ್ನನ್ ಅಪಾರ್ಟ್ಮೆಂಟ್ ನ ನೇ ಮಹಡಿಯಿಂದ ಕೆಳಗೆ ಬಿದ್ದು ಜೀವ ಕಳೆದುಕೊಂಡಿದ್ದರು. ಮಹಡಿಯಿಂದ ಬಿದ್ದ ತಕ್ಷಣ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ(Kokilaben Hospital) ಕರೆದುಕೊಂಡು ಹೋಗಲಾಗಿತ್ತು. ಆದರೆ ಮನ್ನನ್ ನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಗಿರೀಶ್ ಮಲಿಕ್ ಸ್ನೇಹಿತ ಮತ್ತು ನಿರ್ಮಾಪಕ ರಾಹುಲ್ ಮಿಶ್ರ, ಘಟನೆ ತಿಳಿದು ತುಂಬಾ ದುಃಖಿತಾಗಿದ್ದೇನೆ ಎಂದು ಹೇಳಿದ್ದಾರೆ. ರಾಹುಲ್ ಮಿಶ್ರಾ ಮತ್ತು ನಿರ್ದೇಶಕ ಗಿರೀಶ್ ತೋರ್ಬಾಜ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ತುಂಬಾ ಆಘಾತವಾಗಿದೆ. ತೋರ್ಬಾಜ್ ಸಿನಿಮಾ ಚಿತ್ರೀಕರಣ ವೇಳೆ ಗಿರೀಶ್ ಜೊತೆ ಅವರ ಪುತ್ರ ಮನ್ನನ್ ಅವರನ್ನು ಕೆಲವು ಬಾರಿ ಭೇಟಿಯಾಗಿದ್ದೆ. ಭರವಸೆಯ ಮತ್ತು ಪ್ರತಿಭಾವಂತ ಹುಡುಗ ಎಂದು ಹೇಳಿದ್ದಾರೆ. ತೋರ್ಬಾಜ್ ಸಿನಿಮಾದಲ್ಲಿ ಸಂಜಯ್ ದತ್(Sanjay Dutt) ಕಾಣಿಸಿಕೊಂಡಿದ್ದರು. ಈ ಸಿನಿಮಾ 2020ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ನೇರವಾಗಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನರ್ಗೀಸ್ ಫಕ್ರಿ ಕೂಡ ನಟಿಸಿದ್ದಾರೆ.

ಹೆಂಡತಿಯ ಪಾದ ಮಸಾಜ್‌ ಮಾಡುತ್ತಿರುವ Sanjay Dutt ವಿಡಿಯೋ ವೈರಲ್‌!

ನಿರ್ದೇಶಕ ಗಿರೀಶ್, ನಟ ಸಂಜಯ್ ದತ್ ಅವರ ತೋರ್ಬಾಜ್, ಮನ್ v/s ಖಾನ್, ಜಲ್ ಸೇರಿದಂತೆ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಸಂಜಯ್ ದತ್ ಜೊತೆ ಆತ್ಮೀಯ ಸ್ನೇಹ ಸಂಬಂಧವನ್ನು ಹೊಂದಿದ್ದರು.