ಹೋಳಿ ಆಟದ ಬಳಿಕ 5ನೇ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕನ ಪುತ್ರ ಸಾವು

ಬಾಲಿವುಡ್ ನ ಖ್ಯಾತ ನಿರ್ದೇಶಕ ಗಿರೀಶ್ ಮಲಿಕ್ ಅವರ ಪುತ್ರ ಮನ್ನನ್ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. 17 ವರ್ಷದ ಗಿರೀಶ್ ಪುತ್ರ ಮನ್ನನ್ ಸಾವು ಬಾಲಿವುಡ್ ಗೆ ಶಾಕ್ ನೀಡಿದೆ. ಹೋಳಿ ಆಟದ ಬಳಿಕ ಈ ಘಟನೆ ಸಂಭವಿಸಿದೆ.

Bollywood Director Girish Malik son passed away on Holi after falling from the fifth floor

ಬಾಲಿವುಡ್ ನಲ್ಲಿ ಹೋಳಿ(Holi) ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸಿನಿತಾರೆಯ ಮನೆಯಲ್ಲಿ ಬಣ್ಣದ ಹಬ್ಬದ ರಂಗು ಜೋರಾಗಿರುತ್ತೆ. ಹೋಳಿ ಹಬ್ಬದ ಸಂಭ್ರಮದ ನಡುವೆ ಬಾಲಿವುಡ್ ನಲ್ಲಿ ಅತ್ಯಂತ ದುಃಖಕರವಾದ ಮತ್ತು ಆಘಾತಕಾರಿ ಘಟನೆ ಸಂಭವಿಸಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಗಿರೀಶ್ ಮಲಿಕ್(Director Girish Malik) ಅವರ ಪುತ್ರ ಮನ್ನನ್ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. 17 ವರ್ಷದ ಗಿರೀಶ್ ಪುತ್ರ ಮನ್ನನ್ ಸಾವು ಬಾಲಿವುಡ್ ಗೆ ಶಾಕ್ ನೀಡಿದೆ.

ಮನ್ನನ್ ತನ್ನ ಅಪಾರ್ಟ್ಮೆಂಟ್ ನ ಐದನೇ ಮಹಡಿಯಿಂದ ಕೆಳಗೆ ಬಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮುಂಬೈನ ಅಂಧೇರಿಯಲ್ಲಿ ಈ ಘಟನೆ ಸಂಭವಿಸಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮನ್ನನ್, ತನ್ನ ಅಪಾರ್ಟ್ಮೆಂಟ್ ನ ನೇ ಮಹಡಿಯಿಂದ ಕೆಳಗೆ ಬಿದಿದ್ದಾರೆ. ಹೋಳಿ ಆಡಲು ಹೋಗಿದ್ದ ಮನ್ನನ್ ಮಧ್ಯಾಹ್ನ ಮನೆಗೆ ಮರಳಿದ್ದರು. ಬಳಿಕ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮಹಡಿಯಿಂದ ಬಿದ್ದ ತಕ್ಷಣ ಅವರನ್ನು ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ(Kokilaben Hospital) ಕರೆದುಕೊಂಡು ಹೋಗಲಾಗಿದೆ. ಆದರೆ ಮನ್ನನ್ ನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಗಿರೀಶ್ ಮಲಿಕ್ ಸ್ನೇಹಿತ ಮತ್ತು ನಿರ್ಮಾಪಕ ರಾಹುಲ್ ಮಿಶ್ರ, ಘಟನೆ ತಿಳಿದು ತುಬಾ ದುಃಖಿತಾಗಿದ್ದೇನೆ ಎಂದು ಹೇಳಿದ್ದಾರೆ. ರಾಹುಲ್ ಮಿಶ್ರಾ ಮತ್ತು ನಿರ್ದೇಶಕ ಗಿರೀಶ್ ತೋರ್ಬಾಜ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ತುಂಬಾ ಆಘಾತವಾಗಿದೆ. ತೋರ್ಬಾಜ್ ಸಿನಿಮಾ ಚಿತ್ರೀಕರಣ ವೇಳೆ ಗಿರೀಶ್ ಜೊತೆ ಅವರ ಪುತ್ರ ಮನ್ನನ್ ಅವರನ್ನು ಕೆಲವು ಬಾರಿ ಭೇಟಿಯಾಗಿದ್ದೆ. ಭರವಸೆಯ ಮತ್ತು ಪ್ರತಿಭಾವಂತ ಹುಡುಗ ಎಂದು ಹೇಳಿದ್ದಾರೆ. ತೋರ್ಬಾಜ್ ಸಿನಿಮಾದಲ್ಲಿ ಸಂಜಯ್ ದತ್(Sanjay Dutt) ಕಾಣಿಸಿಕೊಂಡಿದ್ದರು. ಈ ಸಿನಿಮಾ 2020ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ನೇರವಾಗಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನರ್ಗೀಸ್ ಫಕ್ರಿ ಕೂಡ ನಟಿಸಿದ್ದಾರೆ.

ಹೆಂಡತಿಯ ಪಾದ ಮಸಾಜ್‌ ಮಾಡುತ್ತಿರುವ Sanjay Dutt ವಿಡಿಯೋ ವೈರಲ್‌!

ನಿರ್ದೇಶಕ ಗಿರೀಶ್, ನಟ ಸಂಜಯ್ ದತ್ ಅವರ ತೋರ್ಬಾಜ್, ಮನ್ v/s ಖಾನ್, ಜಲ್ ಸೇರಿದಂತೆ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಸಂಜಯ್ ದತ್ ಜೊತೆ ಆತ್ಮೀಯ ಸ್ನೇಹ ಸಂಬಂಧವನ್ನು ಹೊಂದಿದ್ದರು. ಸಂಜಯ್ ದತ್ ಅವರಿಗೂ ಮಾಹಿತಿ ತಿಳಿದಿದ್ದು ದತ್ ಸದ್ಯ ದುಬೈನಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

 

 

 

Latest Videos
Follow Us:
Download App:
  • android
  • ios