ಹಿರಿಯ ನಟ ದಿಲೀಪ್ ಕುಮಾರ್ ಅವರ ಕಿರಿಯ ಸಹೋದರ ಅಸ್ಲಾಂ ಕೋವಿಡ್‌ನಿಂದಾ ಕೊನೆ ಉಸಿರೆಳೆದಿದ್ದಾರೆ.
ಬಾಲಿವುಡ್ ಚಿತ್ರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರ ಕಿರಿಯ ಸಹೋದರ ಅಸ್ಲಾಂ ಖಾನ್ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಈ ನಿಟ್ಟಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಶುಕ್ರವಾರ(ಆಗಸ್ಟ್ 20) ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
![]()
ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 88 ವರ್ಷ ಅಸ್ಲಾಂರವರಿಗೆ ಕೊರೋನಾ ಸೋಂಕು ಇರುವುದು ಧೃಡವಾಗಿತ್ತು. ಡಾ.ಜಲೀಲ್ ಪಾರ್ಕರ್ ಅವರ ನೇತೃತ್ವದಲ್ಲಿ ವೈದ್ಯ ತಂಡ ರಿಲೀಸ್ ಮಾಡಿದ ಅಧಿಕೃತ ಮಾಹಿತಿಯಲ್ಲಿ ಅಸ್ಲಾಂ ಚಿಕಿತ್ಸೆಗೆ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.
ರಸ್ತೆ ಅಪಘಾತದಲ್ಲಿ ಹಿರಿಯ ಸಿನಿಮಾ ನಿರ್ಮಾಪಕ ಕಮಲಾಕರ ರೆಡ್ಡಿ ಸಾವು
ಅಸ್ಲಾಂ ಇನ್ನಿಲ್ಲ ಎಂಬ ವಿಚಾರವನ್ನು ದಿಲೀಪ್ ಕುಮಾರ್ ಆಪ್ತ ಫೈಸಲ್ ಫಾರೂಕಿ ಟ್ಟಿಟ್ಟರ್ ಮೂಲಕ ತಿಳಿಸಿದ್ದಾರೆ. ದಿಲೀಪ್ ಮತ್ತೊಬ್ಬ ಸಹೋದರ ಇಶಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
