Asianet Suvarna News Asianet Suvarna News

ದೀಪಿಕಾ ಧರಿಸಿದ್ದ ಮೆಟರ್ನಿಟಿ ಯೆಲ್ಲೋ ಗೌನ್ 34,000 ರೂಗೆ ಮಾರಾಟ, ಒಂದೊಳ್ಳೆ ಕೆಲ್ಸಕ್ಕೆ ಬಳಕೆ!

ದೀಪಿಕಾ ಪಡುಕೋಣೆ ಇತ್ತೀಚೆಗೆ ಹಳದಿ ಬಣ್ಣದ ಗೌನ್ ಧರಿಸಿ ಮಿಂಚಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಇದೀಗ  ಯೆಲ್ಲೋ ಗೌನ್ 34,000 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಹಣವನ್ನು ಒಂದೊಳ್ಳೆ ಕೆಲಸಕ್ಕೆ ಬಳಸಿದ್ದಾರೆ. 
 

Bollywood Deepika Maternity yellow dress sold for rs 34000 to charity cause ckm
Author
First Published May 27, 2024, 10:09 PM IST

ಮುಂಬೈ(ಮೇ.27) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಯೆಲ್ಲೋ ಗೌನ್ ಡ್ರೆಸ್ ಹಾಕಿ ಮಿಂಚಿದ್ದರು. ಮೆಟರ್ನಿಟಿ ಯೆಲ್ಲೋ ಗೌನ್ ಫೋಟೋಗಳನ್ನು ದೀಪಿಕಾ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಡ್ರೆಸನ್ನು ದೀಪಿಕಾ ಪಡುಕೋಣೆ ಮಾರಾಟ ಮಾಡಿದ್ದಾರೆ. 34,000 ರೂಪಾಯಿಗೆ ಈ ಡ್ರೆಸ್ ಮಾರಾಟವಾಗಿದೆ. ಈ ಹಣವನ್ನು ಚಾರಿಟಿಗೆ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಈ ಹಳದಿ ಬಣ್ಣದ ಗೌನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿದ್ದರು. ಇದಾದ ಬಳಿಕ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಗೌನ್ ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಚಾರಿಟಿಗಾಗಿ ಈ ಡ್ರೆಸ್ ಮಾರಾಟ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಕೆಲವೇ ಕ್ಷಣಗಳಲ್ಲಿ 34,000 ರೂಪಾಯಿಗೆ ಈ ಡ್ರೆಸ್ ಮಾರಾಟವಾಗಿದೆ.

ನಕಲಿ ಬೇಬಿ ಬಂಪ್ ಎಂದವರಿಗೆ ನಟಿ ದೀಪಿಕಾ ಪಡುಕೋಣೆ ಕೊಟ್ರು ಖಡಕ್‌ ಉತ್ತರ..!

ಯೆಲ್ಲೋ ಗೌನ್ ಡ್ರೆಸ್‌ ಹಾಕಿ ಫೋಟೋ ಪೋಸ್ ನೀಡಿದ್ದ ದೀಪಿಕಾ ಪಡುಕೋಣೆ 72 ಗಂಟೆಗಳಲ್ಲಿ ಈ ಡ್ರೆಸ್ ಮಾರಾಟ ಮಾಡಿದ್ದಾರೆ. ಚಾರಿಟಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ದೀಪಿಕಾ ಪಡುಕೋಣೆ ತಮ್ಮ ಯೆಲ್ಲೋ ಡ್ರೆಸ್ ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಕೇವಲ 20 ನಿಮಿಷದಲ್ಲಿ ಈ ಡ್ರೆಸ್ ಮಾರಾಟವಾಗುವ ಮೂಲಕ ದಾಖಳೆ ಬರೆದಿತ್ತು.

ಇದೇ ಹಳದಿ ಡ್ರೆಸ್‌ನಲ್ಲಿ ದೀಪಿಕಾ ಪಡುಕೋಣೆ ರೀಲ್ಸ್ ಕೂಡ ಮಾಡಿ ಹಂಚಿಕೊಂಡಿದ್ದರು. ಇತ್ತ ರಣವೀರ್ ಸಿಂಗ್, ಹಳದಿ ಡ್ರೆಸ್‌ನಲ್ಲಿ ದೀಪಿಕಾ ಸೌಂದರ್ಯ ಹೊಗಳಿದ್ದರು. ಇಷ್ಟೇ ಅಲ್ಲ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.

 

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇತ್ತೀಚೆಗೆ ಪೋಷಕರಾಗುತ್ತಿರುವ ಖುಷಿ ಹಂಚಿಕೊಂಡಿದ್ದರು. ರಣವೀರ್‌ ಹಾಗೂ ದೀಪಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಗುವಿನ ಆಟಿಕೆ ಸಾಮಗ್ರಿಗಳ  ಫೋಟೋ ಹಂಚಿಕೊಂಡಿದ್ದರು. ಇದೇ ವೇಳೆ ದಂಪತಿ ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಮಗುವಿನ ನಿರೀಕ್ಷೆ ಇರುವುದಾಗಿ ಹೇಳಿದ್ದರು.

ಪತಿಯ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಮತ್ತು ನಡಿಗೆ ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಕ್ಲಾಸ್!

ಸದ್ಯ ದೀಪಿಕಾ ಪಡುಕೋಣೆ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿರುವುದಾಗಿ ಮೂಲಗಳು ಹೇಳಿವೆ. ದೀಪಿಕಾ ಪಡುಕೋಣೆ ಪೋಷಕರ ಜೊತೆಯಲ್ಲಿ ವಿಶ್ರಾಂತಿಯಲ್ಲಿರುವ ಮಾಹತಿಗಳು ಬಹಿರಂಗವಾಗಿತ್ತು.
 ಸದ್ಯ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದ ಹೆರಿಗೆ ಆಗುವವರೆಗೂ ಬೆಂಗಳೂರಿನಲ್ಲೇ ಇರಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ 2ನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಿಂದಲೂ ದೀಪಿಕಾ ದೂರ ಉಳಿದಿದ್ದಾರೆ.

Latest Videos
Follow Us:
Download App:
  • android
  • ios