ಫಾತಿಮಾ ಸನಾ ದಂಗಲ್ ಸಿನಿಮಾದ ಮೂಲಕ ಹೀರೋಯಿನ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಹುಡುಗಿ. ಆದ್ರೆ ಬಹಳ ಜನರಿಗೆ ಗೊತ್ತಿಲ್ಲದೇ ಇರುವ ಒಂದು ವಿಷ್ಯ ಇದೆ. ಈ ಹುಡುಗಿಗೆ ಬಾಲಿವುಡ್ ಅಂಗಳ ಹೊಸತಲ್ಲ. ಹಾಗಂತ ಈಕೆಯ ಪೋಷಕರೋ, ಸಂಬಂಧಿಕರೋ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ರು ಅಂತ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಆದರೆ ಫಾತಿಮಾ ಸನಾ ಬಾಲ ನಟಿಯಾಗಿಯೂ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಈಕೆ ಅಭಿನಯಿಸಿದ 'ಒನ್ ೨ ಕಾ ೪' ಸಿನಿಮಾದಲ್ಲಿ ಶಾರುಕ್ ಹೀರೋ. ಆಗ ಈಕೆ ಶಾರೂಕ್ ನ ಯಾವ ಪರಿ ಇಷ್ಟ ಪಡ್ತಿದ್ಲು ಅಂದರೆ ಆಕೆಯ ಫಸ್ಟ್ ಕ್ರಶ್ ಶಾರೂಕ್ ಖಾನ್ ಆಗಿದ್ರಂತೆ. ಆಗ ಒಂದು ಆಘಾತಕರ ಸಂಗತಿ ಗೊತ್ತಾಯ್ತು, ಅದು ಶಾರೂಕ್ ಖಾನ್‌ ಗೆ ಮದ್ವೆ ಆಗಿದೆ ಅಂತ. ಬಹಳ ಶಾಕಿಂಗ್ ಆಗಿದ್ದ ಈ ವಿಷ್ಯ ಕೇಳಿ ಪುಟ್ಟ ನಟಿಯ ಹೃದಯವೇ ಒಡೆದುಹೋಯ್ತಂತೆ. ಆಕೆ ಬಿಕ್ಕಿಬಿಕ್ಕಿ ಅತ್ತಿದ್ಲಂತೆ. 

ಅಷ್ಟಕ್ಕೂ ಈ ಸಿನಿಮಾದಲ್ಲಿ ಅಭಿನಯಿಸ್ತಿದ್ದಾಗ ಫಾತಿಮಾ ವಯಸ್ಸೆಷ್ಟು ಅಂತ ಗೊತ್ತಾದ್ರೆ ಶಾಕ್ ಆಗೋ ಸರದಿ ನಿಮ್ದಾಗುತ್ತೆ. ಆಗ ಫಾತಿಮಾ ಸನಾ ಐದು ವರ್ಷದ ಪುಟಾಣಿ ಮಗು. ಸೆಟ್ ನಲ್ಲಿ ಅತೀ ಕಿರಿಯ ಸದಸ್ಯೆ ಈಕೆ. ಇಡೀ ಸೆಟ್‌ನವರೆಲ್ಲ ಈ ಮುದ್ದು ಬಂಗಾರಿಯ ಜೊತೆಗೆ ಆಟ ಆಡ್ಕೊಂಡು ಮುದ್ದಾಡ್ಕೊಂಡು ಇರ್ತಿದ್ರು. ಅವರಲ್ಲಿ ಶಾರೂಕ್ ಒಬ್ರು. ಸಖತ್ ಜೋಷ್ ಫುಲ್ ಹೀರೋ ಆಗಿದ್ದ ಶಾರುಕ್ ಕಂಡ್ರೆ ಈ ಪುಟಾಣಿಗೆ ಒಂಥರಾ ಕ್ರಶ್. ಈತನಿಗಿನ್ನೂ ಮದ್ವೆನೇ ಆಗಿಲ್ಲ. ತಾನೇ ಈ ಸ್ಮಾರ್ಟ್ ಹೀರೋನ ಮದ್ವೆಯಾಗ್ತೀನಿ ಅಂತೆಲ್ಲ ಕನಸು ಕಂಡಿದ್ವು ಈ ಪೋರಿ. ಆದರೆ ಆ ಹೊತ್ತಿಗೆ ಶಾರುಕ್ ಗೆ ಮದ್ವೆ ಆಗಿದ್ದಷ್ಟೇ ಅಲ್ಲ, ಹೆಚ್ಚು ಕಡಿಮೆ ಫಾತಿಮಾಳಷ್ಟೇ ವಯಸ್ಸಿನ ಮಗ ಆರ್ಯನ್ ಇದ್ದ. ಗೌರಿ ಖಾನ್ ಜೊತೆಗೆ ವೈವಾಹಿಕ ಬದುಕಿಗೆ ಕಾಲಿಟ್ಟಾಗಿನಿಂದಲೂ ತನಗೆ ಮುದ್ದಾದ ಹೆಣ್ಣು ಮಗು ಬೇಕು ಅಂತ ಹಂಬಲಿಸುತ್ತಿದ್ದ ಶಾರೂಕ್ ಗೆ ಬಹುಶಃ ಆಗ ಈ ಮಗುವನ್ನು ಕಂಡಾಗ ತನ್ನ ಮಗಳಂತೆ ಅನಿಸಿರಬೇಕು. ಆದ್ರೆ ಆ ಎಳೆಯ ಹುಡುಗಿ ಮಾತ್ರ ಶಾರೂಕ್ ನ ಮನಸಾರೆ ಪ್ರೀತಿಸುತ್ತಿದ್ದಳು. ಆತನ ಜೊತೆಗೆ ಹೆಂಡತಿಯಾಗಿ ಬದುಕುವ ಆಸೆಯಲ್ಲಿದ್ದಳು.

ದಂಗಲ್ ಹುಡುಗಿ ಡಯೆಟ್ ಕಥೆ ..
'ಐದು ವರ್ಷದ ಮಗು ತನ್ನನ್ನು ಲವ್ ಮಾಡುತ್ತೆ ಅಂತ ಆಗ ಸೂಪರ್ ಸ್ಟಾರ್ ಶಾರೂಕ್‌ ಕಲ್ಪಿಸಿಕೊಂಡಿರೋಕ್ಕೂ ಸಾಧ್ಯ ಇರಲಿಲ್ಲ. ಆದರೆ ನನಗೆ ಶಾರೂಕ್ ಗೆ ಮದ್ವೆ ಆಗಿದೆ ಅಂತ ಗೊತ್ತಾದಾಗ ಕಣ್ಣಿಂದ ಒಂದೇ ಸವನೆ ಬಳ ಬಳ ನೀರು ಸುರಿಯಲಾರಂಭಿಸಿತು. ಹೃದಯ ಒಡೆದು ಚೂರು ಚೂರು ಆದಂತಾಗಿತ್ತು.  ಒಂಥರಾ ಬ್ರೇಕ್‌ಅಪ್ ಆದ ಫೀಲ್ ಬಂದಿತ್ತು. ತುಂಬ ಅಂದ್ರೆ ತುಂಬಾ ಅಪ್‌ಸೆಟ್ ಆಗಿದ್ದೆ. ಇಡೀ ದಿನ ಸ್ಯಾಡ್ ಮೂಡಲ್ಲಿದ್ದೆ. ಆಗಾಗ ಕಣ್ಣೊರೆಸಿಕೊಳ್ತಿದ್ದೆ' ಅಂತ ತಮ್ಮ ಆವಾಗಿನ ಸ್ಥಿತಿಯನ್ನು ಫಾತಿಮಾ ವರ್ಣಿಸುತ್ತಾರೆ. 

 ಅಮಿರ್ ಖಾನ್ ಜೊತೆ ಸಂಬಂಧ ಹೊಂದಿಲ್ಲ: ದಂಗಲ್ ನಟಿ  
'ಒನ್‌ ಟು ಕಾ' ಅಲ್ದೇ 'ಚಾಚಿ ೪೨೦', 'ಬಡೇ ದಿಲ್‌ವಾಲಾ' ಚಿತ್ರಗಳಲ್ಲೂ ಫಾತಿಮಾ ಸನಾ ಶೇಖ್ ಬಾಲ ನಟಿಯಾಗಿ ಅಭಿನಯಿಸಿದ್ರು. ದಂಗಲ್ ಸಿನಿಮಾದಲ್ಲಿ ಈಕೆಯ ಅಭಿನಯ ಎಲ್ಲ ಪ್ರಶಂಸೆಗೆ ಪಾತ್ರವಾಗಿತ್ತು. ಸಿನಿಮಾ ವಿಮರ್ಶಕರೂ ಈಕೆಯ ಅಭಿನಯವನ್ನು ಹೊಗಳಿದ್ರು. ಸದ್ಯಕ್ಕೀಗ 'ಸೂರಜ್ ಪೆ ಮಂಗಲ್ ಭಾರೀ' ಸಿನಿಮಾದ ಮುಂಚೂಣಿಯಲ್ಲಿದ್ದಾರೆ. 

ಶಾರುಖ್‌ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಗೌರಿ ಹೇಳಿದ್ದೇನು?