ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಜನಪ್ರಿಯ ಹಾಸ್ಯ ಕಲಾವಿದ ಸುನೀಲ್ ಗ್ರೋವರ್. ವೈದ್ಯರಿಂದ ಕಲಾವಿದನ ಆರೋಗ್ಯದ ಬಗ್ಗೆ ಅಪ್ಡೇಟ್....

ಹಿಂದಿ ಭಾಷೆಯ ಜನಪ್ರಿಯ ಹಾಸ್ಯ ಕಲಾವಿದ ಸುನೀಲ್ ಗ್ರೋವರ್‌ಗೆ ಹೃದಯಘಾತವಾಗಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಡಿಸ್ಚಾರ್ಜ್‌ ಆಗಿದ್ದಾರೆ. ಜನವರಿ 8ರಂದು ಈ ಘಟನೆ ನಡೆದಿದ್ದು, ತಮ್ಮ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಮತ್ತೆ ಮೈನರ್ ಹಾರ್ಟ್‌ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. 

ಮುಂಬೈನ ಏಷಿಯನ್ ಹಾರ್ಟ್‌ ಸಂಸ್ಥೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು ಇಂದು (ಫೆಬ್ರವರಿ 3) ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಸುನೀಲ್ ಆರೋಗ್ಯದ ಬಗ್ಗೆ ಕುಟುಂಬಸ್ಥರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಯಾವ ಕಾರಣಕ್ಕೆ ಡಿಸ್ಚಾರ್ಜ್ ಆದರು ಮತ್ತೆ ಆಸ್ಪತ್ರೆಗೆ ದಾಖಲಾಗಿ ಮತ್ತೆ ಚಿಕಿತ್ಸೆ ಮಾಡಿಕೊಂಡರು ಎಂಬುದಾಗಿಯೂ ತಿಳಿದು ಬಂದಿಲ್ಲ. ಆದರೆ ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಸುನೀಲ್‌ಗೆ ಇನ್ನು ಯಾವ ಸಮಸ್ಯೆಯೂ ಇಲ್ಲ. ಇನ್ನು ಕೆಲವು ದಿನಗಳಲ್ಲಿ ಫುಲ್ ರೆಡಿ ಆಗುತ್ತಾರೆ ಎಂದಿದ್ದಾರೆ. 

ಆದರೆ ANI ಮಾಹಿತಿ ಕೊಟ್ಟ ಪ್ರಕಾರಣ ಕೆಲವು ದಿನಗಳ ಹಿಂದೆ ಆಂಜಿಯೋಗ್ರಫಿ ಮಾಡಲಾಗಿತ್ತು. ಮೂರು ಬ್ಲಾಕ್‌ಗಳು ಕಂಡು ಬಂದಿತ್ತು. ಹೀಗಾಗಿ ಸುನೀಲ್ ನಾಲ್ಕು ಬೈ ಪಾಸ್ ಸರ್ಜರಿ ಮಾಡಿಸಿಕೊಂಡಿದ್ದಾರಂತೆ. ಕೆಲವು ಮೂಲಗಳು ಹೇಳುವ ಪ್ರಕಾರ ಸುನೀತ್ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಯಾವುದೇ ಸ್ಪಷ್ಟನೆ ಇಲ್ಲದ ಕಾರಣ ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಉಂಟಾಗಿದೆ. 

ಜನವರಿ 8ರಂದು ಆಸ್ಪತ್ರೆಗೆ ದಾಖಲಾಗಿ ಎಮರ್ಜೆನ್ಸಿ ರೂಮ್‌ ಪಡೆದುಕೊಂಡಿದ್ದು, ಹಾಗೆಯೇ ಆಂಜಿಯೋಗ್ರಾಮ್ ಮಾಡಲಾಗುತ್ತದೆ ಎಂದು ಪಿಟಿಐ ರಿಪೋರ್ಟ್ ಮಾಡಿತ್ತು. 'rterial grafts using internal mammary arteries ಅಳವಡಿಸಿರುವ ಕಾರಣ ಸುನೀಲ್ ಅವರು ಹೆಚ್ಚು ಅವಧಿ ಯಾವುದೇ ಚಿಂತೆ ಇಲ್ಲದೆ ಜೀವನ ಮಾಡಬಹುದು ಆದರೆ ಸರಿಯಾದ ಡಯಟ್, ವ್ಯಾಯಾಮ, ಯೋಗ ಮತ್ತು ಮಾತ್ರೆಗಳನ್ನು ಸೇವಿಸಬೇಕು. ಅವರು ತುಂಬಾನೇ ಪಾಸಿಟಿವ್ ವ್ಯಕ್ತಿ, ಜೀವನದಲ್ಲಿ ಸಾಧನೆ ಒಂದೇ ಅವರಿಗೆ ಮುಖ್ಯ,' ಎಂದು ವೈದ್ಯ ರಮಾಕಾಂತ್ ಹೇಳಿದ್ದಾರೆ. 

ಸುನೀಲ್ ಆರೋಗ್ಯದ ಬಗ್ಗೆ ತಿಳಿಯುತ್ತಿದ್ದಂತೆ ಅಭಿಮಾನಿಗಳು ಮತ್ತು ಚಿತ್ರರಂಗದ ಆಪ್ತರು ಸೋಷಿಯಲ್ ಮೀಡಿಯಾ ಮೂಲಕ ದೇವರಲ್ಲಿ ಪ್ರಾರ್ಥನೆ ಶುರು ಮಾಡಿದ್ದರು. ಸದಾ ನಗಿಸುವ ವ್ಯಕ್ತಿಗೆ ಹೀಗಾಗಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ನಿವಾಸದಲ್ಲಿ ತೆಲಗು ನಟ Allu Arjun!

'ಸುನೀಲ್‌ಗೆ ಹೃದಯಘಾತವಾಗಿರುವ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ಅವರ ಆರೋಗ್ಯದ ಬಗ್ಗೆ ಚಿಂತಿಸದೇ ಹಗಲು ರಾತ್ರಿ ಶ್ರಮಿಸುತ್ತಿದ್ದರು, ನಮ್ಮನ್ನು ನಗಿಸುತ್ತಿದ್ದ ವ್ಯಕ್ತಿಗೆ ಈ ರೀತಿ ಆಗಬಾರದು. ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅವರಿಗೆ ತುಂಬಾನೇ ಟ್ಯಾಲೆಂಟ್ ಇದೆ ನಾನು ಅವರ ದೊಡ್ಡ ಅಭಿಮಾನಿ,' ಎಂದು ಸಿಮ್ಮಿ ಗೇರ್ವಾಲ್ ಟ್ಟೀಟ್ ಮಾಡಿದ್ದರು. 

ಹಿಂದಿ ಜನಪ್ರಿಯ ಕಾಮಿಡಿ ಶೋ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸುನೀಲ್ ಕಾಣಿಸಿಕೊಳ್ಳುತ್ತಿದ್ದರು. ಸುನೀಲ್ ಮಾಡುತ್ತಿದ್ದ ಕಾಮಿಡಿ ನೋಡಲೇಂದೇ ಜನರು ಆಗಮಿಸುತ್ತಿದ್ದರು. ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಷನ್‌ ಮತ್ತು ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರು ಸುನೀಲ್ ಕಾಮಿಡಿ ಕೇಳಿ ಹೊಟ್ಟೆ ನೋವಾಗುವಷ್ಟು ನಕ್ಕಿದ್ದಾರೆ. ಕಪಿಲ್ ಶರ್ಮಾ ಜೊತೆ ಜಗಳ ಮಾಡಿಕೊಂಡ ನಂತರ ಕಾಮಿಡಿ ಶೋನಿಂದ ಹೊರ ಬಂದಿದ್ದರು. ಅಭಿಮಾನಿಗಳು ಮನವಿ ಮಾಡಿಕೊಂಡರೂ ಮರಳಲಿಲ್ಲ. ಆದರೆ ಸುನೀಲ್ ಇಲ್ಲದೇ ದಿ ಕಪಿಲ್ ಶರ್ಮಾ ಶೋ ಬೋರಾಗುತ್ತದೆ ಎಂದು ಹಲವರು ಮಾತನಾಡಿಕೊಂಡಿದ್ದರು. 

ಮಹಿಳೆಯರ ಪಾತ್ರದಲ್ಲಿ ನಟಿಸುವುದಕ್ಕೆ ಸುನೀಲ್‌ಗೆ ತುಂಬಾನೇ ಇಷ್ಟವಂತೆ. 'ಕಾಡಿಗೆ ಹಚ್ಚುವುದು. ಮಹಿಳೆಯರ ರೀತಿ ಡ್ರೆಸ್ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಪುರುಷರು ಮಹಿಳೆ ವೇಷ ಧರಿಸುವುದು ಅಂದರೆ ಮೂಲ ಅಸ್ತಿತ್ವವನ್ನು ಮರೆಮಾಚುವುದಾಗಿರುತ್ತದೆ. ಮಹಿಳೆಯರ ರೀತಿ ಡ್ರೆಸ್ ಮಾಡಿಕೊಳ್ಳೋದು ಅಂದ್ರೆ ನನಗೆ ತುಂಬಾನೇ ಇಷ್ಟ. ಸೀರೆಯುಟ್ಟರೆ ಸಾಕು ಖುಷಿಯಾಗುತ್ತದೆ,' ಎಂದು ಹೇಳಿದ್ದರು.