Asianet Suvarna News Asianet Suvarna News

ಹಿಂದಿ, ಕನ್ನಡ, ತಮಿಳಿನಲ್ಲಿ ಬರಲಿದೆ ಮೂರ್ತಿ ದಂಪತಿ ಬಯೋಪಿಕ್

ಐಟಿ ದಿಗ್ಗಜರಾದ ನಾರಾಯಣ ಮೂರ್ತಿ ದಂಪತಿಗಳ ಬಯೋಪಿಕ್ ತೆರೆಗೆ | ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿಗೆ ತೆರೆಗೆ ತರುತ್ತಿದ್ದಾರೆ | ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ. ಬಾಲಿವುಡ್, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ತೆರೆಗೆ  

Bollywood Ashwiny Iyer Tiwari to bring IT Couple Narayan and sudha murthy on screen
Author
Bengaluru, First Published Oct 17, 2019, 11:24 AM IST

ಸುಧಾ ಮೂರ್ತಿ-ನಾರಾಯಣ ಮೂರ್ತಿ ದಂಪತಿ ಎಂದರೆ ಕರುನಾಡಿಗೇ ವಿಶೇಷ ಗೌರವ. ಇನ್ಪೋಸಿಸ್ ಎಂಬ ದಿಗ್ಗಜ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿ, ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಅನ್ನದಾತರೂ ಹೌದು. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕರುನಾಡ ಮಂದಿಗೆ ಬೇಕಾದ ಕಣ್ಮಣಿಗಳು. 

ಇಂಥ ಸರಳ, ಸಜ್ಜನಿಕೆಗೆ ಹೆಸರಾದ ಮೂರ್ತಿ ದಂಪತಿಗಳ ಬಯೋಪಿಕ್ ತೆರೆಗೆ ಬರುತ್ತಿದೆ. ಹಿಂದಿ, ತಮಿಳು ಹಾಗೂ ಕನ್ನಡ ಮೂರು ಭಾಷೆಗಳಲ್ಲಿಯೂ ಚಿತ್ರ ಮೂಡಿ ಬರುತ್ತಿದ್ದು, ಈ ವರ್ಷವೇ ರಿಲೀಸ್ ಆಗುವ ನಿರೀಕ್ಷೆ ಇದೆ. ಬಾಲಿವುಡ್ ನಿರ್ದೇಶಕಿ ಚಿತ್ರ ನಿರ್ದೇಶಿಸಲಿದ್ದಾರೆ. ಯಾರು, ಏನು? ನೀವೇ ಓದಿ...

ನಮ್ಮ ಮದುವೆಗೆ ಖರ್ಚಾಗಿದ್ದು 800 ರೂ ಮಾತ್ರ

ಸುಧಾಮೂರ್ತಿ- ನಾರಾಯಣ ಮೂರ್ತಿ ದಂಪತಿಯ ಬಯೋಪಿಕ್ ಮಾಡಿದ್ರೆ ಹೇಗೆ? ಹೀಗೊಂದು ಯೋಚನೆಯನ್ನು ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಮಾಡಿದ್ದಾರೆ.  ಇವರಿಬ್ಬರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಚಿತ್ರಕ್ಕೆ 'ಮೂರ್ತಿ 'ಎಂದು ಹೆಸರಿಟ್ಟಿದ್ದಾರೆ. 

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

ಐಶ್ವರ್ಯ ಅಯ್ಯರ್ ತಿವಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು ಶ್ರೇಯಸ್ ಜೈನ್, ಪಿಯೂಶ್ ಗುಪ್ತಾ ಚಿತ್ರಕಥೆ ಬರೆಯಲಿದ್ದಾರೆ. 

 

 
 
 
 
 
 
 
 
 
 
 
 
 

Two opposite personalities. I don’t have a picture with Mr Narayan Murthy. But spent hours chatting with Sudha Maa - that’s what i call her now ❤️ Been working for almost 21 years now. Started off with designing events and logos while studying in art school. I needed the money to feed my art supplies and education. Then joined as a art trainee at Leo Burnett. Spent 16 years in advertising and marketing with the most amazing people who are my dearest friends too. Left advertising in 2015 to an unknown world of Bollywood only for the passion of telling stories. #NilBatteySannata #Ammakanakku #BareillykiBarfi happened. #Panga is an important story that needs to be told. I thank @roo_cha for making this happen. Panga has been an enriching experience with talented Kangana @team_kangana_ranaut , @jassie.gill @therichachadha @neena_gupta which i and @foxstarhindi are eager to share on 24 Jan 2020 😁 i keep dreaming that eventually I would want to lead a life like Narayan Murthy & Sudha Murthy. The life choices. Their honest life with integrity is my biggest inspiration. I am filled with humble gratitude to make Murthy. They have trusted me with their iconic story and i can only pray that I keep up to their expectations. This is more than a film.This is life. Thank-you Mahaveer ji for being the binding force. The writers are back in action @bawlekiduniya @pglens @niteshtiwari22 lets get away to another beautiful place to write. @earthskynotes

A post shared by Ashwiny Iyer Tiwari (@ashwinyiyertiwari) on Oct 15, 2019 at 12:53am PDT

ಈ ಬಗ್ಗೆ ಐಶ್ವರ್ಯಾ ಅಯ್ಯರ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುಧಾಮೂರ್ತಿ- ನಾರಾಯಣ ಮೂರ್ತಿಯವರ ರೀತಿ ಬದುಕಬೇಕೆಂಬುದು ನನ್ನ ಕನಸು. ಅವರಿಬ್ಬರ ಪ್ರಾಮಾಣಿಕತೆ, ಕಷ್ಟಪಟ್ಟು ದುಡಿದ ರೀತಿ ನನಗೆ ಸ್ಪೂರ್ತಿಯಾಗಿದೆ. ಅವರಿಬ್ಬರ ಬಯೋಪಿಕ್ 'Murthy' ಯನ್ನು ಮಾಡುತ್ತಿರುವುದು ಖುಷಿ ತಂದಿದೆ ಎಂದು ಸುಧಾ ಮೂರ್ತಿ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.  ಸುಧಾಮೂರ್ತಿ ಪಾತ್ರವನ್ನು ಅಲಿಯಾ ಭಟ್ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಇದಿನ್ನೂ ಅಧಿಕೃತವಾಗಿಲ್ಲ. 

Follow Us:
Download App:
  • android
  • ios