ನಮ್ಮ ಮದುವೆಗೆ ಖರ್ಚಾಗಿದ್ದು 800 ರು. ಮಾತ್ರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Feb 2019, 2:52 PM IST
We Spent 800 Only For our Marriage Says Sudha Murthy
Highlights

ನಮ್ಮ ಮದುವೆಗೆ ನಾವು ಖರ್ಚು ಮಾಡಿದ್ದು ಕೇವಲ 800 ರು. ಮಾತ್ರ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.

ಮೈಸೂರು :  ನಾನು ನಾರಾಯಣ ಮೂರ್ತಿ ಇಬ್ಬರೂ ಸರಳವಾಗಿ ವಿವಾಹವಾದೆವು ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದ್ದಾರೆ. 

800 ರುಪಾಯಿ ಮಾತ್ರವೇ ಖರ್ಚು ಮಾಡಿ ವಿವಾಹವಾಗಿದ್ದಾಗಿ  ಹೇಳಿದರು. ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ  ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ನಾವು ಅನಾವಶ್ಯಕವಾಗಿ ವೆಚ್ಚ ಮಾಡದೆ ಸರಳ ವಿವಾಹವಾಗಲು ನಿರ್ಧರಿಸಿದ್ದೆವು. 

ಆತ್ಮೀಯ ಬಂಧುಗಳ ಜೊತೆಗೆ 1978ರ ಫೆ.10 ರಂದು ಸರಳವಾಗಿ ವಿವಾಹವಾದೆವು.  ಈ ಮದುವೆಗೆ 800 ರು. ವ್ಯಯ ಮಾಡಿದ್ದೆವು ಎಂದರು. 

ಇಬ್ಬರು ತಲಾ 400 ರು.ಗಳನ್ನು ಹಾಕಿ ವಿವಾಹದ ಖರ್ಚು ನೋಡಿಕೊಂಡೆವು. ಇಳಕಲ್ ಸೀರೆ, ಕರಿಮಣಿ ಸರ ಮಾತ್ರವೇ ನಮ್ಮ ಮದುವೆಗೆ ಕೊಂಡಿದ್ದೆವು . ಅಲ್ಲದೇ ಸರಳ ಮದುವೆಯಿಂದ ಅನಾವಶ್ಯಕ ಖರ್ಚು ವೆಚ್ಚ ಉಳಿಸುವುದು ಅಗತ್ಯವೆಂದು ಸುಧಾಮೂರ್ತಿ ಹೇಳಿದರು.

loader