ಸೆಲೆಬ್ರಿಟಿ ಮೊಬೈಲ್‌ನಲ್ಲಿ ಏನಿದೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ತುಂಬಾ ಕಾಮನ್‌. ಆದರೆ ಅವರೇ ತಿಳಿಯದೆ ಅವನ್ನೆಲ್ಲಾ ರಿವೀಲ್ ಮಾಡಿದ್ರೆ? ಈ ಬಗ್ಗೆ ಅಭಿಮಾನಿಗಳಿಗೂ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಇರುತ್ತೆ....

ಬಾಲಿವುಡ್‌ ಜಾಕೋಲೇಟ್‌ ಕಪಲ್‌ ರಣ್‌ಬೀರ್ ಕಪೂರ್‌ ಮತ್ತು ಆಲಿಯಾ ಭಟ್ ಸದಾ ಟಾಕ್‌ ಆಫ್‌ ದಿ ಟೌನ್‌ ಆಗುತ್ತಿದ್ದಾರೆ.

ಇತ್ತೀಚಿಗೆ ಮುಂಬೈನಲ್ಲಿ Netflix ಆಯೋಜಿಸಿದ 'ಗಲ್ಲಿಬಾಯ್‌' ಸ್ಕ್ರೀನಿಂಗ್ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಪಾಲ್ಗೊಂಡಿದ್ದರು, ಈ ವೇಳೆ ಮಾಧ್ಯಮಗಳ ಎದುರು ಫೋಟೋ ಫೋಸ್ ಕೊಡಲು ಬರುತ್ತಿದ್ದಾಗ ಆಲಿಯಾ ಮೊಬೈಲ್‌ ವಾಲ್‌ಪೇಪರ್‌ ಫೋಟೋ ರಿವೀಲ್‌ ಆಗಿದೆ.

ಆಲಿಯಾ ಭಟ್ ಹೇಳಿ ಕೊಡೋ ಪಲ್ಯ ಟ್ರೈ ಮಾಡಿ ನೋಡಿ...

ಆಲಿಯಾ ಭಟ್‌ ಹಾಗೂ ರಣ್ಬೀರ್‌ ಕಪೂರ್‌ ಲಿಪ್‌ಲಾಕ್‌ ಮಾಡುತ್ತಿರುವ ಫೋಟೋವನ್ನು ವಾಲ್‌ಪೇಪರ್‌ ಮಾಡಿಕೊಂಡಿದ್ದಾರೆ. ರಣ್ಬೀರ್‌ ಬ್ಲೂ ಶರ್ಟ್‌ನಲ್ಲಿ ಹಾಗೂ ಆಲಿಯಾ ಲೈಟ್‌ ಕಲರ್‌ ಫ್ರಾಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

View post on Instagram

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, #Ranlia ಫ್ಯಾನ್ಸ್‌ ಹಾರ್ಟ್‌ ಹಾಗೂ ಕಿಸ್‌ ಎಮೋಜಿ ಹಾಕಿ, ಕಾಮೆಂಟ್‌ ಮಾಡಿದ್ದಾರೆ. 2018ರಲ್ಲಿ ಡೇಟಿಂಗ್‌ ಶುರುಮಾಡಿದ ಈ ಜೋಡಿ 2020 ಕೊನೆಯಲ್ಲಿ ಹಸೆಮಣೆ ಏರುವ ನಿರೀಕ್ಷೆ ಇದೆ. 

ಅಯ್ಯಯ್ಯೋ... ಎಲ್ಲರೆದುರು ಅಲಿಯಾ ಮುಂದೆ ಶರ್ಟ್ ಬಿಚ್ಚಿದ ರಣಬೀರ್!

ಸದ್ಯಕ್ಕೆ 'ಬ್ರಹ್ಮಾಸ್ತ್ರ ' ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ಅಲಿಯಾ ಭಟ್ ಫ್ರೀ- ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್‌ ತಿಂಗಳು ಚಿತ್ರ ತೆರೆಕಾಣುತ್ತದೆ.