ಸುಶಾಂತ್ ಸಾವಿಗೆ ಆಲಿಯಾ ಕಂಬನಿ: ಟೀಕಿಸಿದವಳಿಗೆ ಫ್ಯಾನ್ ತರಾಟೆ!
ಬಾಲಿವುಟ್ ನಟ ಸುಶಾಂತ್ ಸಿಂಗ್ ಅಗಲಿಕೆಗೆ ಸಂತಾಪ ಸೂಚಿಸಿದ ಬಾಲಿವುಡ್ ನಟ-ನಟಿಯರ ಪೈಕಿ ಆಲಿಯಾ ಭಟ್ ಟ್ಟೀಟ್ ಹೆಚ್ಚು ಸುದ್ದಿಯಾಗುತ್ತಿದೆ. ಅಲಿಯಾ ಮಾತುಗಳನ್ನು ಕೇಳಿ ಅಭಿಮಾನಿಗಳು ಗರಂ ಆಗಿದ್ದಾರೆ.
ಬಾಲಿವುಡ್ ನಗು ಮುಖದ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂದು ತಿಳಿದಾಕ್ಷಣ ಬಾಲಿವುಡ್ ಚಿತ್ರರಂಗವೇ ಕಂಗಾಲಾಗಿತ್ತು. ಆತ್ಮಸ್ಥೈರ್ಯ, ವಿಶ್ವಾಸ ಹಾಗೂ ಸಾಧನೆಯ ಛಲ ತುಂಬುತ್ತಿದ್ದ ನಟನೇ ಹೀಗೆ ಮಾಡಿಕೊಳ್ಳಲು ಸಾಧ್ಯವೇ? ಸುಶಾಂತ್ ಸಾವಿನ ಸುತ್ತ ಅನೇಕ ವಾದ-ವಿವಾದಗಳನ್ನು ಸೃಷ್ಟಿಸುವ ಮಾತುಗಳು ಕೇಳಿ ಬರುತ್ತಿದೆ.
ಅಗಲಿದ ನಟನಿಗೆ ಸಂತಾಪ ಸೂಚಿಸಿ ಟ್ಟೀಟ್ ಮಾಡುತ್ತಿದ್ದ ಬಾಲಿವುಡ್ ನಟ-ನಟಿಯರು ಹಾಗೂ ನಿರ್ದೇಶಕರ ಪೈಕಿ ಅಲಿಯಾ ಭಟ್ ಎಲ್ಲರ ಗಮನ ಸೆಳೆದಿದ್ದಾರೆ. ಸುಶಾಂತ್‌ನನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಎಂದ ಆಲಿಯಾಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಲಿಯಾ ಟ್ಟೀಟ್:
'ನಾನು ತುಂಬಾನೇ ದೊಡ್ಡ ಶಾಕ್‌ನಲ್ಲಿ ಇದ್ದೀನಿ. ಮಾತನಾಡಲು ಪದಗಳೇ ಇಲ್ಲದಂತಾಗಿದೆ. ಮನಸ್ಸಿಗೆ ಹಿಂಸೆ ಆಗುತ್ತಿದೆ. ನೀನು ನಮ್ಮಿಂದ ಇಷ್ಟು ಬೇಗ ದೂರವಾಗಬಾರದಿತ್ತು. ಬಾಲಿವುಡ್‌ನಲ್ಲಿ ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಿನ್ನ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಫ್ಯಾನ್‌ಗಳಿಗೆ ನಿನ್ನ ಅಗಲಿಕೆ ನೋವು ಮಾಡಿದೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ಟೀಟ್ ಮಾಡಲಾಗಿತ್ತು.
ಆಲಿಯಾ ಭಟ್ ಟ್ಟೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಟ್ಟೀಟ್ ಇನ್ನೂ ವೈರಲ್ ಆಗಿತ್ತು. ಅದರಲ್ಲೊಬ್ಬ ಅಭಿಮಾನಿ ಕೇಳುವ ಪ್ರಶ್ನೆಗೆ ಯಾರ ಬಳಿಯು ಉತ್ತರವಿಲ್ಲ.
'ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ನಿನ್ನನ್ನು ಸುಶಾಂತ್ ಬಗ್ಗೆ ಪ್ರಶ್ನೆ ಕೇಳಿದಾಗ ನೀವೇ ಅಲ್ವಾ ಯಾರದ್ದು ಸುಶಾಂತ್ ಸಿಂಗ್ ರಜಪೂತ್ ಅಂತ ಕೇಳಿದ್ದು? ತಕ್ಷಣವೇ ಇಬ್ಬರು ಕಣ್ಣು ಮಿಟುಕಿಸುವುದು ಹೋ ಅವನು ಆ ಕಿರುತೆರೆ ನಟ ಎಂದು ಗೇಲಿ ಮಾಡಿದ್ದು? ಈಗ ಅವನನ್ನು ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ಹೇಳುತ್ತಿರುವುದು' ಎಂದು ಪೂಲ್ವಾಲಿ ಎಂಬುವರು ಪ್ರಶ್ನಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ಟ್ಟೀಟ್‌ಗೆ ನೆಟ್ಟಿಗರು ಆಲಿಯಾ ಭಟ್ ವಿರುದ್ಧ ಗರಂ ಆಗಿದ್ದಾರೆ ಅಷ್ಟೇ ಅಲ್ಲದೆ ಎಲ್ಲರನ್ನು ಬುಗುರಿ ಥರ ಆಡಿಸುತ್ತಿರುವ ಕರಣ್ ಜೋಹಾರ್ ವಿರುದ್ಧವೂ ಮಾತನಾಡಿದ್ದಾರೆ. ಸುಶಾಂತ್ ಅಗಲಿಕೆ ಬಗ್ಗೆ ಟ್ಟೀಟ್ ಮಾಡಿದ ಕರಣ್ ಅಲ್ಲಿಯೂ ತನ್ನ ಬಗ್ಗೆ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
'ನಿನ್ನ ಜತೆ ಸಂಪರ್ಕ ಇಟ್ಟುಕೊಳ್ಳದ ಕಾರಣ ಈಗ ನಾನು ನನ್ನನೇ ಬ್ಲೇಮ್ ಮಾಡಿಕೊಳ್ಳುತ್ತಿರುವೆ. ಕೆಲವೊಮ್ಮೆ ನನಗೆ ಅನಿಸುತ್ತಿತ್ತು ನಿನ್ನ ನೋವುಗಳನ್ನು ಯಾರ ಬಳಿಯಾದರೋ ಹೇಳಿಕೊಳ್ಳಬೇಕು ಅದನ್ನು ಯಾರಾದರೂ ಕೇಳಬೇಕು ಎಂದು. ಆದರೆ ಆಗ ನಾನೇ ಮಾಡಬಹುದಿತ್ತು ಅಂತ ಅನಿಸಿರಲಿಲ್ಲ. ಇನ್ನು ಮುಂದೆ ಈ ರೀತಿ ತಪ್ಪುಗಳ ಆಗದಂತೆ ನೋಡಿಕೊಳ್ಳುವೇ. ತನ್ನ ಸುತ್ತ ಎಷ್ಟೇ ಎನರ್ಜಿ ಅಥವಾ ಸದ್ದು ಇದ್ದರೂ ನಾವು ಕೆಲವೊಮ್ಮೆ ಒಬ್ಬಂಟಿ ಎಂಬ ಭಾವನೆ ಬರುತ್ತದೆ. ಸುಶಾಂತ್ ಅಗಲಿಕೆ ನನಗೆ ಮುನ್ನೆಚ್ಚರಿಗೆ ನೀಡುತ್ತಿದೆ ಇನ್ನು ಮುಂದೆಯಾದರೂ ನಾನು ನನ್ನ ಸುತ್ತಲ್ಲಿರುವ ಜನರನ್ನು ಮಾತನಾಡಿಸಬೇಕು, ಅವರ ಕಷ್ಟಗಳನ್ನು ಕೇಳಬೇಕು ಎಂದು. ನಿನ್ನ ನಗು ಹಾಗೂ ಅಪ್ಪುಗೆ ಮಿಸ್ ಮಾಡಿಕೊಳ್ಳುವೆ' ಎಂದು ಕರಣ್ ಜೋಹಾರ್ ಟ್ಟೀಟ್ ಮಾಡಿದ್ದಾರೆ.
ಈ ಟ್ಟೀಟ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಕರಣ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಒಂದು ದಿನವೂ ಸುಶಾಂತ್‌ನನ್ನು ನಿಮ್ಮ ಕಾರ್ಯಕ್ರಮಕ್ಕೆ ಕರೆಯಲ್ಲಿಲ್ಲ, ಅವನ ಕೈಗೆ ಬಂದ ಸಿನಿಮಾಗಳನ್ನು ರಣ್ವೀರ್ ಸಿಂಗ್ ಪಾಲು ಮಾಡಿದ್ದೀರಿ. ಕಪೂರ್ ಹಾಗೂ ಖಾನ್ ಕುಟುಂಬದವರ ಜತೆ ಮಾತ್ರ ನಿಮ್ಮ ಪ್ರೀತಿ ಹಾಗೂ ಸ್ನೇಹ' ಎಂದು ಕಾಮೆಂಟ್ ಮಾಡಿದ್ದಾರೆ.