Asianet Suvarna News Asianet Suvarna News

ಬೆನ್ನು ನೋವಿನಿಂದ ಬಳಲುತ್ತಿದ್ದರೂ ಬೆಕ್ಕಿನ ಜೊತೆ ಆಲಿಯಾ ಸೆಲ್ಫಿ!

ಮಧ್ಯೆ ರಾತ್ರಿ ಕಳೆದು ಮುಂಜಾನೆ ಆರಂಭವಾಗುವ 2 ಗಂಟೆಯ ವೇಳೆ. ಅಲಿಯಾ ಭಟ್‌ಗೆ ನಿದ್ದೆ ಬಂದಿಲ್ಲ. ಜೊತೆಗೆ ಇರುವುದು ಎಡ್ಡಿ ಎನ್ನುವ ತನ್ನ ಪ್ರೀತಿಯ ಬೆಕ್ಕು ಮತ್ತು ಬೆನ್ನು ನೋವು. ಇಂತಹ ವೇಳೆಯಲ್ಲಿ ಅಲಿಯಾ ತಾನು ಮತ್ತು ಎಡ್ಡಿ ಇರುವ ಮುದ್ದಾದ ಸೆಲ್ಫಿ ತೆಗೆದುಕೊಂಡು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Bollywood alia bhat hurts her back selfie with her cat
Author
Bangalore, First Published Jan 21, 2020, 11:44 AM IST
  • Facebook
  • Twitter
  • Whatsapp

ಅದು ಸಖತ್‌ ವೈರಲ್‌ ಆಗಿದೆ. ಅದಕ್ಕಿಂತ ಹೆಚ್ಚಾಗಿ ಆ ಫೋಟೋಗೆ ಬರೆದ ಕ್ಯಾಪ್ಶನ್‌ ಇನ್ನೂ ಹೆಚ್ಚಿನ ಮೆಚ್ಚುಗೆ ಪಡೆದುಕೊಂಡಿದೆ.

ಅಯ್ಯೋ ಪಾಪ..ನೀರಿನಾಳಕ್ಕಿಳಿದ ಆಲಿಯಾ, ಟ್ರೋಲ್ ಆಯ್ತು ಪೋಟೊಗಳು!

‘ಇದು ನನ್ನ ಮಮ್ಮಿಯೊಂದಿಗಿನ ಸೆಲ್ಫಿ ಟೈಮ್‌. ಈಗ ಅವಳಿಗೆ ಬೆನ್ನು ನೋವು, ರಾತ್ರಿ 2 ಗಂಟೆಯಾಗಿರುವುದರಿಂದ ಮಾಡಲು ಮತ್ತೇನೂ ಇಲ್ಲ. ಎಡ್ಡಿ ಮತ್ತು ಮಮ್ಮಿ (2020)’ ಹೀಗೆ ತನ್ನ ಮುದ್ದಾದ ಬೆಕ್ಕು ಎಡ್ಡಿ ತನ್ನ ಸ್ವಗತ ಹೇಳಿಕೊಂಡಂತೆ ಕ್ಯಾಪ್ಶನ್‌ ಬರೆದಿದ್ದಾರೆ ಅಲಿಯಾ. ಇದಕ್ಕೆ ಒಳ್ಳೆಯ ರೆಸ್ಪಾನ್ಸ್‌ ಕೂಡ ಸಿಕ್ಕಿದೆ.

'ಮೋಸ್ಟ್ ಇನ್ಸ್ಪೈರಿಂಗ್ ಏಷಿಯನ್ ವುಮೆನ್’ ಗೆ ಅಲಿಯಾ ಭಟ್ ಆಯ್ಕೆ!

ಜೊತೆಗೆ ಅಲಿಯಾ ಹೀಗೆ ಬೆನ್ನು ನೋವಿನಿಂದ ನರಳುವುದಕ್ಕೆ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಶೂಟಿಂಗ್‌ ವೇಳೆ ಗಾಯವೇ ಕಾರಣ. ಇದೀಗ ಇದರಿಂದ ಚೇತರಿಸಿಕೊಂಡು ತನ್ನ ಮುಂದೆ ನಿಂತಿರುವ ದೊಡ್ಡ ದೊಡ್ಡ ಸಿನಿಮಾಗಳಾದ ‘ಬ್ರಹ್ಮಾಸ್ತ್ರ’, ‘ಸಾಧಕ್‌ 2‘, ‘ಆರ್‌ಆರ್‌ಆರ್‌’ ಜೊತೆಗೆ ‘ಗಂಗೂಬಾಯಿ ಕಥಿಯಾವಾಡಿ’ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಬೇಕಿದೆ ಅಲಿಯಾ.

Follow Us:
Download App:
  • android
  • ios